ದೇಗುಲದ ಜಾಗ ಅತಿಕ್ರಮಣ ಮಾಡಿ ಟಿಪ್ಪು ಪ್ಯಾಲೆಸ್ ನಿರ್ಮಾಣ; ಒತ್ತುವರಿ ತೆರವು ಮಾಡಲು ಹಿಂದೂ ಜನಜಾಗೃತಿ ಸಮಿತಿ ಆಗ್ರಹ

ಕೋಟೆ ವೆಂಕಟರಮಣ ದೇವಸ್ಥಾನ ಜಾಗ ಅತಿಕ್ರಮಣ ಮಾಡಿದ್ದಾರೆ. ಹೀಗಾಗಿ ಟಿಪ್ಪು ಪ್ಯಾಲೆಸ್, ಕೋಟೆ ವೆಂಕಟರಮಣ ದೇಗುಲ ಸರ್ವೆ ಮಾಡಬೇಕು. ಮೂಲ ಮಾಲೀಕರ ಹೆಸರಿಗೆ ನೋಂದಣಿ ಮಾಡಿಸಬೇಕೆಂದು ಒತ್ತಾಯ ಕೇಳಿಬಂದಿದೆ.

ದೇಗುಲದ ಜಾಗ ಅತಿಕ್ರಮಣ ಮಾಡಿ ಟಿಪ್ಪು ಪ್ಯಾಲೆಸ್ ನಿರ್ಮಾಣ; ಒತ್ತುವರಿ ತೆರವು ಮಾಡಲು ಹಿಂದೂ ಜನಜಾಗೃತಿ ಸಮಿತಿ ಆಗ್ರಹ
ಹಿಂದೂ ಜನಜಾಗೃತಿ ಸಮಿತಿಯ ಮೋಹನ್ ಗೌಡ
Follow us
TV9 Web
| Updated By: sandhya thejappa

Updated on:May 25, 2022 | 1:02 PM

ಬೆಂಗಳೂರು: ದೇಗುಲದ (Temple) ಜಾಗ ಅತಿಕ್ರಮಣ ಮಾಡಿ ಟಿಪ್ಪು ಪ್ಯಾಲೆಸ್ (Tipu Palace) ನಿರ್ಮಾಣ ಮಾಡಿರುವ ಆರೋಪ ಕೇಳಿಬಂದಿದ್ದು, ಒತ್ತುವರಿ ತೆರವು ಮಾಡಲು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ. ಕೋಟೆ ವೆಂಕಟರಮಣ ದೇವಸ್ಥಾನ ಜಾಗ ಅತಿಕ್ರಮಣ ಮಾಡಿದ್ದಾರೆ. ಹೀಗಾಗಿ ಟಿಪ್ಪು ಪ್ಯಾಲೆಸ್, ಕೋಟೆ ವೆಂಕಟರಮಣ ದೇಗುಲ ಸರ್ವೆ ಮಾಡಬೇಕು. ಜೊತೆಗೆ ಮೂಲ ಮಾಲೀಕರ ಹೆಸರಿಗೆ ನೋಂದಣಿ ಮಾಡಿಸಬೇಕೆಂದು ಒತ್ತಾಯ ಕೇಳಿಬಂದಿದೆ. ಈ ಬಗ್ಗೆ ಟಿವಿ9ಗೆ ಹೇಳಿಕೆ ನೀಡಿದೆ ಹಿಂದೂ ಜನಜಾಗೃತಿ ಸಮಿತಿಯ ಮೋಹನ್ ಗೌಡ, ಬೆಂಗಳೂರಿನ ಟಿಪ್ಪು ಪ್ಯಾಲೆಸ್ ಪುರಾತತ್ವ ಇಲಾಖೆ ಅಡಿಯಲ್ಲಿದೆ. ವೆಂಕಟರಮಣಸ್ವಾಮಿ ದೇಗುಲ ಮುಜರಾಯಿ ಇಲಾಖೆಯ ಅಡಿಯಲ್ಲಿದೆ ಎಂದು ತಿಳಿಸಿದರು.

ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ: ವಿವಾದಕ್ಕೆ ಕಾರಣವಾಗಿದ್ದ ಮಳಲಿಯ ಮಸೀದಿ ಸ್ಥಳದಲ್ಲಿ ಇಂದು ತಾಂಬೂಲ ಪ್ರಶ್ನೆ ನಡೆಸಲಾಗಿದೆ. ತಾಂಬೂಲ ಪ್ರಶ್ನೆವೇಳೆ ಕೇರಳದ ಪ್ರಖ್ಯಾತ ಜ್ಯೋತಿಷಿ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಕೆಲ ಮಾಹಿತಿ ನೀಡಿದ್ದು, ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ ಎಂದಿದ್ದಾರೆ. ಸಾಮಾನ್ಯ ತಾಂಬೂಲ ಪ್ರಶ್ನೆಯಲ್ಲಿ ಪೂರ್ಣವಾದ ಚೈತನ್ಯವಿದೆ. ನಾವು ಪ್ರಾರ್ಥಿಸಿ ಇಟ್ಟ ರಾಶಿಯಲ್ಲಿ ದೇವರು ಇರುವುದು ನಿಜ. ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿತ್ತು ಎಂದು ತಿಳಿಯುತ್ತೆ. ಇದು ದೈವ ಸಾನ್ನಿಧ್ಯ ಇದ್ದಂತಹ ಸ್ಥಳ. ತಾಂಬೂಲ ಪ್ರಶ್ನೆಯಲ್ಲಿ ಹಿಂದೂ ಧಾರ್ಮಿಕ ಸ್ಥಳ ಎಂದು ಉತ್ತರ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೇ 26ರಂದು ರಾಜ್ಯಕ್ಕೆ ಆಗಮಿಸಲಿರುವ ರಕ್ಷಣಾ ಸಚಿವ, ಎರಡು ದಿನ ಜಲಾಂತರ್ಗಾಮಿ ಸಮುದ್ರಯಾನದಲ್ಲಿ ರಾಜನಾಥ್ ಸಿಂಗ್ ಭಾಗಿ

ಇದನ್ನೂ ಓದಿ
Image
Whiteheads:ವೈಟ್​ಹೆಡ್ಸ್​ನಿಂದ ಮುಕ್ತಿ ಪಡೆಯಲು ಇಲ್ಲಿವೆ ಮನೆಮದ್ದುಗಳು
Image
ಮೇ 26ರಂದು ರಾಜ್ಯಕ್ಕೆ ಆಗಮಿಸಲಿರುವ ರಕ್ಷಣಾ ಸಚಿವ, ಎರಡು ದಿನ ಜಲಾಂತರ್ಗಾಮಿ ಸಮುದ್ರಯಾನದಲ್ಲಿ ರಾಜನಾಥ್ ಸಿಂಗ್ ಭಾಗಿ
Image
8 Years Of Modi Government: ನರೇಂದ್ರ ಮೋದಿ ನೇತೃತ್ವ ಸರ್ಕಾರದ ಡಿಜಿಟಲ್ ಕ್ರಾಂತಿ; ಎಂಟು ವರ್ಷದಲ್ಲಿ ಎಷ್ಟೆಲ್ಲ ಬದಲಾವಣೆ!
Image
ಪಠ್ಯಪುಸ್ತಕದಿಂದ ದೇವನೂರು ಮಹಾದೇವ ಬರಹ ಬದಲಿಸಲು ಆಗುವುದಿಲ್ಲ: ಬಿಸಿ ನಾಗೇಶ್

ಜಾಮಿಯಾ ಮಸೀದಿ ಬಗ್ಗೆ ಕುಮಾರಸ್ವಾಮಿ ಮಾತು: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ದೇವರು ಕನಸಿನಲ್ಲಿ ಬಂದು ತನ್ನ ಮೂಲ ಸ್ಥಾನವನ್ನು ಹೇಳಿದ್ನಾ? ಅಲ್ಲದೇ ಅದನ್ನ ಸರಿಪಡಿಸಿ ಅಂತಾ ದೇವರು ಏನಾದ್ರೂ ಕೇಳಿತ್ತಾ? ಇದನ್ನ ನೋಡಿದ್ರೆ ಮತ್ತೊಂದು ವಿವಾದ ಶುರುವಾಗುವ ಲಕ್ಷಣ ಇದೆ. ಹಲವು ಹಿಂದೂ ದೇವಾಲಯಗಳಿಗೆ ಟಿಪ್ಪು ಭೂಮಿ ದಾನ ಮಾಡಿದ್ದ. ಆ ಸಮಾಜಕ್ಕೆ ಕನಸ್ಸಿನಲ್ಲಿ ಬರುತ್ತೆ, ಅವರಿಗೆ ಭೂಮಿ ಬಿಟ್ಟುಕೊಡ್ತಿರಾ? ದೇವಾಲಯಗಳಿಗೆ ಟಿಪ್ಪು ಭೂಮಿ ನೀಡಿರುವ ಉದಾಹರಣೆ ಇದೆ. ಮುಸಲ್ಮಾನರು ಬಂದು ಕೇಳಿದ್ರೆ ದೇವಸ್ಥಾನದವನ್ನು ಬಿಟ್ಟುಕೊಡ್ತಿರಾ? ಎಂದು ಪ್ರಶ್ನಿಸಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:58 pm, Wed, 25 May 22