ಟೇಕಾಫ್ ಆಗುತ್ತಿದ್ದ ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನ; ಪ್ರಯಾಣಿಕನ ಬಂಧನ

ಟೇಕ್​ಆಫ್​ ಆಗುತ್ತಿದ್ದ ವಿಮಾನದ ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದ ಪ್ರಯಾಣಿಕನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಟೇಕಾಫ್ ಆಗುತ್ತಿದ್ದ ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನ; ಪ್ರಯಾಣಿಕನ ಬಂಧನ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
Edited By:

Updated on: Oct 02, 2023 | 9:42 AM

ದೇವನಹಳ್ಳಿ ಅ.02: ಟೇಕ್​ಆಫ್​ ಆಗುತ್ತಿದ್ದ ವಿಮಾನದ (Airplane) ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಪ್ರಯಾಣಿಕನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ವಪ್ನೋಲ್ ಹೋಲೆ ಬಂಧಿತ ಪ್ರಯಾಣಿಕ. ಸ್ವಪ್ನೋಲ್ ಹೋಲೆ 6E6803 ಇಂಡಿಗೋ (IndiGo) ವಿಮಾನದಲ್ಲಿ ಸೀಟ್ ನಂಬರ್ 5E ನಲ್ಲಿ ಕುಳಿತು ಮಹಾರಾಷ್ಟ್ರದ ನಾಗ್ಪುರದಿಂದ ಬೆಂಗಳೂರು ಮಾರ್ಗವಾಗಿ ಬ್ಯಾಂಕಾಕ್​ಗೆ ತೆರಳುತ್ತಿದ್ದನು.

ಬೆಂಗಳೂರಿನ ದೇವನಹಳ್ಳಿ ಬಳಿಯ ವಿಮಾನ ಟೇಕ್​ಆಫ್​ ಆಗುತ್ತಿದ್ದಂತೆ, ಪ್ರಯಾಣಿಕ ಸ್ವಪ್ನೋಲ್ ಹೋಲೆ ತನ್ನ ಸೀಟ್​ ಬಳಿ ಇದ್ದ ಎಮರ್ಜೆನ್ಸಿ ಎಕ್ಸಿಟ್ ಡೋರ್ ತೆರೆಯಲು ಯತ್ನಿಸಿದ್ದಾನೆ. ಇದನ್ನು ಕಂಡ ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಬಳಿಕ ವಿಮಾನ ಮತ್ತೆ ಲ್ಯಾಂಡ್​ ಆಗಿದ್ದು, ಸಿಬ್ಬಂದಿ ಸ್ವಪ್ನೋಲ್ ಹೋಲೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಯಾಣಿಕನ ವಿರುದ್ಧ ಐಪಿಸಿ ಸೆಕ್ಷನ್ 336 ಅಡಿಯಲ್ಲಿ ದೂರು ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:39 am, Mon, 2 October 23