ತನ್ನ ಪ್ರೀತಿಗೆ ಅಡ್ಡ ಬಂದ ಸ್ನೇಹಿತನಿಗೆ ಮುಹೂರ್ತ: ಓರ್ವ ಆಸ್ಪತ್ರೆ ದಾಖಲು, ಇಬ್ಬರು ಅರೆಸ್ಟ್

| Updated By: ಆಯೇಷಾ ಬಾನು

Updated on: Dec 30, 2023 | 8:22 AM

ತನ್ನ ಗರ್ಲ್ ಫ್ರೆಂಡ್ ಜೊತೆ ಯುವಕ ಫೋನ್​ನಲ್ಲಿ ಮಾತಾಡಿದ್ದಕ್ಕೆ ಸಿಟ್ಟಿಗೆದ್ದ ಯುವಕನ ಸ್ನೇಹಿತ ಯುವಕನಿಗೆ ಚಾಕು ಇರಿದು, ಮಚ್ಚಿನಿಂದ ತಲೆಗೆ ಹಲ್ಲೆ ಮಾಡಿರುವ ಘಟನೆ ನಾಯಂಡಹಳ್ಳಿ ಸಮೀಪ‌ ನಡೆದಿದೆ. ಘಟನೆ ಸಂಬಂಧ ಧನುಷ್ ಹಾಗೂ ಶಾಬುದ್ದೀನ್ ಎಂಬುವವರನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ.

ತನ್ನ ಪ್ರೀತಿಗೆ ಅಡ್ಡ ಬಂದ ಸ್ನೇಹಿತನಿಗೆ ಮುಹೂರ್ತ: ಓರ್ವ ಆಸ್ಪತ್ರೆ ದಾಖಲು, ಇಬ್ಬರು ಅರೆಸ್ಟ್
ಬಂಧಿತ ಧನುಷ್ ಹಾಗೂ ಶಾಬುದ್ದೀನ್
Follow us on

ಬೆಂಗಳೂರು, ಡಿ.30: ಪ್ರೇಮಿಗಳ‌ (Lovers) ಮಧ್ಯೆ ಎಂಟ್ರಿ ಕೊಟ್ಟ ಸ್ನೇಹಿತನ ಕೊಲೆಗೆ ಯತ್ನಿಸಿ (Murder Attempt) ಯುವಕ ಜೈಲು ಸೇರಿದ್ದಾನೆ. ತನ್ನ ಗರ್ಲ್ ಫ್ರೆಂಡ್ ಜೊತೆ ಯುವಕ ಫೋನ್​ನಲ್ಲಿ ಮಾತಾಡಿದ್ದಕ್ಕೆ ಸಿಟ್ಟಿಗೆದ್ದ ಯುವಕನ ಸ್ನೇಹಿತ ಯುವಕನಿಗೆ ಚಾಕು ಇರಿದು, ಮಚ್ಚಿನಿಂದ ತಲೆಗೆ ಹಲ್ಲೆ ಮಾಡಿರುವ ಘಟನೆ ಡಿಸೆಂಬರ್ 19 ರಂದು ನಾಯಂಡಹಳ್ಳಿ ಸಮೀಪ‌ ನಡೆದಿದೆ. ಹಲ್ಲೆಗೆ ಒಳಗಾದ ಯುವಕ ಕಾರ್ತಿಕ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಧನುಷ್ ಹಾಗೂ ಶಾಬುದ್ದೀನ್ ಎಂಬುವವರನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಧನುಷ್ ಹಾಗೂ ಕಾರ್ತಿಕ್ ಒಂದೇ ಏರಿಯಾದ ಪರಿಚಯಸ್ಥ ಯುವಕರು. ಆರೋಪಿ ಧನುಷ್ ಯುವತಿಯೊಬ್ಬಳ ಜೊತೆಗೆ ಪ್ರೀತಿಯಲ್ಲಿದ್ದ. ಇದೇ ಯುವತಿಯ ನಂಬರ್ ಪಡೆದು ಸ್ನೇಹಿತ ಕಾರ್ತಿಕ್ ಕರೆ ಮಾಡಿ ಮಾತನಾಡುತ್ತಿದ್ದ. ಫಾಲೋ ಮಾಡಿ ಧನುಷ್ ಗರ್ಲ್ ಫ್ರೆಂಡ್ ಗೆ ಕಾಟ ಕೊಡ್ತಿದ್ದ. ಕಾರ್ತಿಕ್ ಕಾಟದಿಂದ ಬೇಸತ್ತು ಹೋಗಿದ್ದ ಯುವತಿ ಈ ವಿಚಾರವನ್ನು ಧನುಷ್ ಗೆ ಹೇಳಿದ್ದಳು. ಈ ವಿಚಾರ ಕಿವಿಗೆ ಬೀಳುತ್ತಿದ್ದಂತೆ ಸಿಟ್ಟಿಗೆದ್ದ ಧನುಷ್ ತನ್ನ ಮತ್ತೋರ್ವ ಸ್ನೇಹಿತ ಶಾಬುದ್ದೀನ್ ನನ್ನ ಜೊತೆಗೆ ಕರೆದುಕೊಂಡು ಕಾರ್ತಿಕ್​ಗೆ ಪಾಠ ಕಲಿಸಬೇಕೆಂದು ಕಾರ್ತಿಕ್ ಬಳಿ ಬಂದಿದ್ದಾರೆ.

ಡಿ.19ರ ಸಂಜೆ 6.30ಕ್ಕೆ ಕಾರ್ತಿಕ್ ಗೆ ಕರೆ ಮಾಡಿ ಮನೆಯಿಂದ ಹೊರ ಬರುವಂತೆ ಹೇಳಿದ್ದಾರೆ. ಮನೆಯಿಂದ 500 ಮೀಟರ್ ದೂರಕ್ಕೆ ಕರೆಸಿಕೊಂಡು ನಂತರ ಮಚ್ಚು, ಚಾಕುವಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕಾರ್ತಿಕ್ ತಾನೇ ಬೈಕ್ ಹತ್ತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಳಿಕ ದೂರು ದಾಖಲಿಸಿದ್ದಾನೆ. ಸದ್ಯ ಕಾರ್ತಿಕ್ ಹೇಳಿಕೆ ಪಡೆದು ಚಂದ್ರಲೇಔಟ್ ಪೊಲೀಸರು ಎಫ್ಐಆರ್ ದಾಖಲಿಸಿದ್ದು ತನಿಖೆ ನಡೆಸಿ ಧನುಷ್ ಮತ್ತು ಶಾಬುದ್ದೀನ್​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಮೃತ ಬಿಎಂಟಿಸಿ ಡ್ರೈವರ್ ಮಲ್ಲಿಕಾರ್ಜುನ ಕುಟುಂಬಕ್ಕೆ 50 ಲಕ್ಷ ರೂ ಚೆಕ್ ವಿತರಿಸಿದ ಸಚಿವ ರಾಮಲಿಂಗಾರೆಡ್ಡಿ

ವಿದ್ಯುತ್ ಪ್ರವಹಿಸಿ ಲೈನ್​ಮ್ಯಾನ್ ದುರ್ಮರಣ

ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಲೈನ್​ಮ್ಯಾನ್ ದುರ್ಮರಣಕ್ಕಿಡಾಗಿದ್ದಾನೆ. ಬೆಳಗಾವಿ ಜಿಲ್ಲೆ ಕಿತ್ತೂರು ಪಟ್ಟಣದ ಕೆಇಬಿ ಆವರಣದಲ್ಲಿ ಘಟನೆ ನಡೆದಿದ್ದು, ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಲೈನ್​ಮ್ಯಾನ್ ಪ್ರೇಮಾನಂದ ಎಮ್ಮಿ ಬಲಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸದೆ ಕಂಬ ಹತ್ತಿಸಿದ್ದರೆಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು. ಜಿಲ್ಲಾಸ್ಪತ್ರೆ ಬಳಿ ಲೈನ್​ಮ್ಯಾನ್ ಸಂಬಂಧಿಕರು ಪ್ರತಿಭಟನೆ ನಡೆಸಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ