AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮದ್ಯ ನಶೆಯಲ್ಲಿ ಅಪಾರ್ಟ್​ಮೆಂಟ್​ನಿಂದ ಬಿದ್ದು ಖಾಸಗಿ ಕಂಪನಿ ಇಂಜಿನಿಯರ್​ ಸಾವು

ಗುರುವಾರ ರಾತ್ರಿ ಕಂಠ ಪೂರ್ತಿ ಕುಡಿದು ಪಾರ್ಟಿ ಮಾಡಿ ಶುಕ್ರವಾರ ಬೆಳಗ್ಗೆ 6:45ರ ವೇಳೆ ತನ್ನ ಮನೆಗೆ ಹಿಂತಿರುಗಿದ್ದ ದಿಪಾಂಶು ಶರ್ಮಾ ತನ್ನ ಅಪಾರ್ಟ್​ಮೆಂಟ್​ನ 33ನೇ ಫ್ಲೋರ್​ನ ಬಾಲ್ಕನಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಮದ್ಯ ನಶೆಯಲ್ಲಿ ಅಪಾರ್ಟ್​ಮೆಂಟ್​ನಿಂದ ಬಿದ್ದು ಖಾಸಗಿ ಕಂಪನಿ ಇಂಜಿನಿಯರ್​ ಸಾವು
ಸಾವು
Follow us
Prajwal Kumar NY
| Updated By: ಆಯೇಷಾ ಬಾನು

Updated on: Dec 30, 2023 | 10:24 AM

ಬೆಂಗಳೂರು, ಡಿ.30: ಅಪಾರ್ಟ್​ಮೆಂಟ್​ನಿಂದ ಬಿದ್ದು ಇಂಜಿನಿಯರ್​ ಮೃತಪಟ್ಟ ಘಟನೆ K.R.ಪುರದ ಅಯ್ಯಪ್ಪನಗರದಲ್ಲಿ ನಡೆದಿದೆ. ನಿನ್ನೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ದಿಪಾಂಶು ಶರ್ಮಾ ಎಂಬುವವರು ಅಪಾರ್ಟ್​ಮೆಂಟ್​ನ 33ನೇ ಫ್ಲೋರ್​ನ ಬಾಲ್ಕನಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ (Death). ಘಟನೆ ಸಂಬಂಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುರುವಾರ ರಾತ್ರಿ ಕಂಠ ಪೂರ್ತಿ ಕುಡಿದು ಪಾರ್ಟಿ ಮಾಡಿ ಶುಕ್ರವಾರ ಬೆಳಗ್ಗೆ 6:45ರ ವೇಳೆ ತನ್ನ ಮನೆಗೆ ಹಿಂತಿರುಗಿದ್ದ ದಿಪಾಂಶು ಶರ್ಮಾ ತನ್ನ ಅಪಾರ್ಟ್​ಮೆಂಟ್​ನ 33ನೇ ಫ್ಲೋರ್​ನ ಬಾಲ್ಕನಿಗೆ ತೆರಳಿದ್ದಾರೆ. ಈ ವೇಳೆ ಮದ್ಯದ ನಶೆಯಲ್ಲೇ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ, ಘಟನೆ ತಡೆದ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ಸನ್ಮಾನ

ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ಸ್ವಿಮ್ಮಿಂಗ್ ಪೂಲ್ ಗೆ ವಿದ್ಯುತ್ ಪ್ರವಹಿಸಿ ಬಾಲಕಿ ಸಾವು?

ಪ್ರತಿಷ್ಠಿತ ಪ್ರೆಸ್ಟೇಜ್ ಅಪಾರ್ಟ್ ಮೆಂಟ್ ನಲ್ಲಿ ಬಾಲಕಿ ಸಾವಿನ ಸುತ್ತ ಹಲವು ಅನುಮಾನ ಹುಟ್ಟಿಕೊಂಡಿದೆ. ವಿದ್ಯುತ್ ಪ್ರಸರಿಸಿ ಸಾವನ್ನಪ್ಪಿದ್ದಾರೆ ಅಂತಾ ಅಪಾರ್ಟ್ ಮೆಂಟ್ ನಿವಾಸಿಗಳು ಹೇಳುತ್ತಿದ್ರೆ, ಇತ್ತ ಪೊಲೀಸರು ಸ್ವಿಮ್ಮಿಂಗ್ ಪೂಲ್ ಗೆ ಬಿದ್ದು ಡೆತ್ ಆಗಿದೆ ಅಂತಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಗೆ ಕಾಯ್ತಿರೋ ಪೊಲೀಸರಿಗೆ ಅಪಾರ್ಟ್ ಮೆಂಟ್ ನಿವಾಸಿಗಳು ನೀರಲ್ಲಿ ವಿದ್ಯುತ್ ಪ್ರವಹಿಸೋ ವಿಡಿಯೋ ಕೊಟ್ಟು ಶಾಕ್ ನೀಡಿದ್ದಾರೆ.

ಬೆಂಗಳೂರಿನ ವರ್ತೂರಿನಲ್ಲಿರೋ ಪ್ರತಿಷ್ಠಿತ ಪ್ರೆಸ್ಟೇಜ್ ಅಪಾರ್ಟ್ ಮೆಂಟ್ ನಲ್ಲಿ ಮೊನ್ನೆ ರಾತ್ರಿ ಸ್ವಿಮ್ಮಿಂಗ್ ಪೂಲ್ ಗೆ ಆಟವಾಡಲು ಬಂದ 10 ವರ್ಷದ ಬಾಲಕಿ ಮಾನ್ಯ, ವಿದ್ಯುತ್ ಪ್ರವಹಿಸಿ ಬಾರದಲೋಕಕ್ಕೆ ಪಯಣಿಸಿದ್ದಾಳೆ. ಬಾಳಿ ಬದುಕಬೇಕಿದ್ದ ಕಂದಮ್ಮನ ಬಲಿ ಪಡೆದ ಅಪಾರ್ಟ್ ಮೆಂಟ್ ಮ್ಯಾನೇಜ್ ಮೆಂಟ್ ವಿರುದ್ಧ ಅಪಾರ್ಟ್ ಮೆಂಟ್ ನಿವಾಸಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಬಾಲಕಿ ಸಾವನ್ನಪ್ಪಿದ್ದಾಳೆ ಅಂತಾ ಎಫ್ ಐಆರ್ ನಲ್ಲಿ ಉಲ್ಲೇಖಿಸಿದ್ರೆ, ಇತ್ತ ಅಪಾರ್ಟ್ ಮೆಂಟ್ ನಿವಾಸಿಗಳು ಹಾಗೂ ಮೃತ ಬಾಲಕಿಯ ತಂದೆ ಕರೆಂಟ್ ಶಾಕ್ ನಿಂದಲೇ ಬಾಲಕಿ ಮೃತಪಟ್ಟಿದ್ದಾಳೆ ಅಂತಾ ಆರೋಪ ಮಾಡ್ತಿದ್ದಾರೆ. ಇವೆಲ್ಲದರ ಮಧ್ಯೆ ನಿವಾಸಿಗಳು ಸ್ವಿಮ್ಮಿಂಗ್ ಪೂಲ್ ನಲ್ಲಿ ಕರೆಂಟ್ ಟೆಸ್ಟ್ ಮಾಡಿರೋ ವಿಡಿಯೋ ಪ್ರಕರಣದಲ್ಲಿ ಸಂಚಲನ ಮೂಡಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ