ಬೆಂಗಳೂರು: ಜನವರಿ 26ರಂದು ಆಚರಿಸಲ್ಪಡುವ ಗಣರಾಜ್ಯೋತ್ಸವ ಆಚರಣೆಗೆ ನಗರದಲ್ಲಿ ಭರ್ಜರಿ ಸಿದ್ಧತೆ ಆರಂಭವಾಗಿದೆ. ಬೆಂಗಳೂರು ನಗರದ ಮಾಣೆಕ್ ಷಾ ಮೈದಾನದಲ್ಲಿ(Manekshaw Parade Ground) ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಾರ್ಯಕ್ರಮ ಹಿನ್ನೆಲೆ ಬೆಂಗಳೂರಲ್ಲಿ ಭದ್ರತೆಗೆ 1,200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಇನ್ನು ಕಾರ್ಯಕ್ರಮಕ್ಕೆ ಬರುವವರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ.
9 ಡಿಸಿಪಿ, 16 ಎಸಿಪಿ, 45 ಇನ್ಸ್ಪೆಕ್ಟರ್ಗಳು, 101 ಪಿಎಸ್ಐ, 14 ಮಹಿಳಾ ಪಿಎಸ್ಐ, 83 ಎಎಸ್ಐ, 577 ಹೆಡ್ ಕಾನ್ಸ್ಟೇಬಲ್ಸ್, 77 ಮಹಿಳಾ ಸಿಬ್ಬಂದಿ, ಮಫ್ತಿಯಲ್ಲಿ 172 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹಾಗೂ ಹೆಚ್ಚುವರಿ ಭದ್ರತೆಗೆ 10 KSRP ತುಕಡಿ, ಸಿಎಆರ್ ತುಕಡಿ ನಿಯೋಜಿಸಲಾಗಿದೆ. ಮಾಣೆಕ್ ಷಾ ಮೈದಾನದ ಸುತ್ತಮುತ್ತ 56 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. 3 ಅಗ್ನಿಶಾಮಕ ವಾಹನಗಳು, 2 ಆ್ಯಂಬುಲೆನ್ಸ್, 1 ಕ್ಷಿಪ್ರ ಕಾರ್ಯಾಚರಣೆ ಪಡೆ, 1 ಡಿಸ್ವಾಟ್, 1 ಆರ್ ಐವಿ, 1 ಗರುಡಾ, ಮೈದಾನದ ಆಯಾಕಟ್ಟಿನಲ್ಲಿ 100 ಸಿಸಿಟಿವಿ ಅಳವಡಿಸಲಾಗಿದೆ. 4 ಬ್ಯಾಗೇಜ್ ಸ್ಕ್ಯಾನರ್, 20 ಡಿಎಫ್ ಎಂಡಿ ಹಾಗೂ 24 ಹೆಚ್ಚ ಹೆಚ್ ಎಂಡಿ ಉಪಕರಣಗಳ ಬಳಕೆ ಮಾಡಲಾಗುತ್ತಿದೆ.
ಇನ್ನು ಕಾರು ಪಾಸ್ ಗಳನ್ನ ಹೊಂದಿರೋ ಆಹ್ವಾನಿತರು ಪಾಸ್ ಗಳಲ್ಲಿ ನಿಗದಿ ಪಡಿಸಿದ ಸ್ಥಳಗಳಲ್ಲೇ ಕಾರು ಪಾರ್ಕಿಂಗ್ ಮಾಡಬೇಕು. ಜನವರಿ 26 ರ ಬೆಳಗ್ಗೆ 8.30 ರಿಂದ 10.30 ರವರೆಗೂ ಕಬ್ಬನ್ ರಸ್ತೆಯಲ್ಲಿ ಬಿಆರ್ ವಿ ಜಂಕ್ಷನ್ ನಿಂದ ಕಾಮರಾಜ್ ರಸ್ತೆ ಜಂಕ್ಷನ್ ವರೆಗೆ ಸಂಚಾರ ನಿರ್ಬಂಧವಿರಲಿದೆ. ಇನ್ ಫೆಂಟ್ರಿ ರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಕಡೆಗೆ ಹೋಗುವ ವಾಹನಗಳು ಇನ್ ಫೆಂಟ್ರಿ ರೋಡ್ ಸಫೀನಾ ಪ್ಲಾಜಾ ಬಲಕ್ಕೆ ತಿರುವು ಪಡೆದು ಕಾಮರಾಜ ರೋಡ್ ಮೂಲಕ ಹೋಗಬಹುದು. ಕಬ್ಬನ್ ರೋಡ್ – ಮಣಿಪಾಲ್ ಸೆಂಟರ್ ಜಂಕ್ಷನ್ ನಿಂದ ಬಿಆರ್ ವಿ ಬರುವ ವಾಹನಗಳು- ಎಂಜಿ ರೋಡ್, ಮೇಯೋಹಾಲ್, ಕಾವೇರಿ ಎಂಪೋರೊಯಂ – ಅನಿಲ್ ಕುಂಬ್ಳೆ ರೋಡ್ ಮೂಲಕ ಸಂಚರಿಸಬಹುದು.
ಇದನ್ನೂ ಓದಿ: Republic Day Parade 2023: ಗಣರಾಜ್ಯೋತ್ಸವ ಪರೇಡ್ನಲ್ಲಿ ಎಲ್ಲಾ ಸ್ವದೇಶಿ ಸೇನಾ ಯುದ್ಧ ಉಪಕರಣಗಳ ಪ್ರದರ್ಶನ
ಸೆಂಟ್ರಲ್ ಸ್ಟ್ರೀಟ್ – ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣವರೆಗೆ,
ಕಬ್ಬನ್ ರೋಡ್ – ಸಿಇಟಿ ವೃತ್ತದಿಂದ ಕೆಆರ್ ರೋಡ್ & ಕಬ್ಬನ್ ರೋಡ್.
ಎಂಜಿ ರೋಡ್ – ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ಸರ್ಕಲ್
ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮಾಸ್ಕ್ ಹಾಕೋದು ಕಡ್ಡಾಯ. ಮಾಣೆಕ್ ಷಾ ಮೈದಾನಕ್ಕೆ ಅನುಮಾನಾಸ್ಪದ ವಸ್ತುಗಳನ್ನು ನಿಷೇಧಿಸಲಾಗಿದೆ. ಹೆಲ್ಮೆಟ್, ಕ್ಯಾಮರಾ, ಕೊಡೆ, ಸಿಗರೇಟ್, ಬೆಂಕಿಪೊಟ್ಟಣ, ಹರಿತ ವಸ್ತು, ಕರಪತ್ರ, ಕಪ್ಪು ಕರವಸ್ತ್ರ, ಬಣ್ಣದ ದ್ರಾವಣ, ತಿಂಡಿ ತಿನಿಸುಗಳು, ಬಾವುಟ, ಶಸ್ತ್ರಾಸ್ತ್ರ, ಪಟಾಕಿ ಹಾಗೂ ಸ್ಫೋಟಕ ವಸ್ತುಗಳನ್ನು ನಿಷೇಧಿಸಲಾಗಿದೆ. ಸಮಾರಂಭಕ್ಕೆ ಬರುವವರು ಬೆಳಗ್ಗೆ 8.30ರೊಳಗೆ ಪ್ರವೇಶ ಮಾಡಬೇಕು. ಸಮಾರಂಭಕ್ಕೆ ಬರುವ ಸಾರ್ವಜನಿಕರಿಗೆ ಗೇಟ್ 4ರಲ್ಲಿ ಮಾತ್ರ ಪ್ರವೇಶ ನೀಡಲಾಗುತ್ತೆ. ಅನುಮಾನದ ವಸ್ತು ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರ ಪರಿಶೀಲನೆ ಮಾಡುವಾಗ ಸಾರ್ವಜನಿಕರು ಸಹಕರಿಸಬೇಕು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:15 am, Tue, 24 January 23