ಪಾಕಿಸ್ತಾನ್ ಟು ಇಂಡಿಯಾ ಲವ್ ಸ್ಟೋರಿ: ಇಕ್ರಾ-ಮುಲಾಯಂ ಪ್ರೀತಿ ಕಥೆಯಲ್ಲಿ ಅನುಮಾನ, ಈ ಜೋಡಿ ಗಡಿ ಪ್ರವೇಶಿಸಿದ್ದು ಹೇಗೆ?

TV9kannada Web Team

TV9kannada Web Team | Edited By: Ayesha Banu

Updated on: Jan 24, 2023 | 8:22 AM

ಕಳೆದ ಐದು ತಿಂಗಳಿಂದ ಇಕ್ರಾ ತನ್ನ ಪ್ರಿಯಕರನ ಜೊತೆ ಇದ್ದರು. ನೇಪಾಳದಲ್ಲಿ ಮದುವೆಯಾಗಿ, ಭಾರತಕ್ಕೆ ಎಂಟ್ರಿ ಆಗುತಿದ್ದಂತೆ ನಕಲಿ ಆಧಾರ್ ಕಾರ್ಡ್ ಮಾಡಿಸಿದ್ದಾರೆ. ಯಾರ ಗಮನಕ್ಕೂ ಬಾರದಂತೆ ದೇಶದಲ್ಲಿ ಸೆಟಲ್ ಆಗಿದ್ದಾರೆ.

ಪಾಕಿಸ್ತಾನ್ ಟು ಇಂಡಿಯಾ ಲವ್ ಸ್ಟೋರಿ: ಇಕ್ರಾ-ಮುಲಾಯಂ ಪ್ರೀತಿ ಕಥೆಯಲ್ಲಿ ಅನುಮಾನ, ಈ ಜೋಡಿ ಗಡಿ ಪ್ರವೇಶಿಸಿದ್ದು ಹೇಗೆ?
ಇಕ್ರಾ-ಮುಲಾಯಂ

ಬೆಂಗಳೂರು: ಪ್ರೀತಿಯಲ್ಲಿ ಬಿದ್ದ ಯುವತಿ ಪಾಕಿಸ್ತಾನ ಗಡಿ ಪಾರು ಮಾಡಿ ಭಾರತಕ್ಕೆ ಬಂದು ಅಕ್ರಮವಾಗಿ ನೆಲೆಸಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಪ್ರೀತಿಯೇ ಒಂದು ಮಾಯೆ. ಇದು ಯಾವಾಗ ಯಾರನ್ನು ಬೇಕಾದ್ರು ಯಾವ ಹಂತಕ್ಕೆ ಬೇಕಾದ್ರು ಕಳಿಸುತ್ತೆ. ಒಂದ್ ಸಾರಿ ಪ್ರೇಮಿಗಳು ಕಮಿಟ್ ಆದ್ರೆ. ಪ್ರಪಂಚವೇ ತಲೆಕೆಳಗಾದ್ರೂ ಪ್ರೇಮಿಗಳು ಮಾತ್ರ ಬೇರೆ ಆಗಲ್ಲ. ಸದ್ಯ ಈಗ ಅದೇ ಪ್ರೀತಿಯನ್ನು ನಂಬಿ ಭಾರತಕ್ಕೆ ಬಂದಿದ್ದ ಯುವತಿ ಈಗ ಪೊಲೀಸ ಬಲೆಗೆ ಬಿದ್ದಿದ್ದಾಳೆ.

ಇದು ಪಾಕಿಸ್ತಾನ್ ಟು ಇಂಡಿಯಾ ಲವ್ ಸ್ಟೋರಿ. ಆದ್ರೆ ಈ ಜೋಡಿ ಹಕ್ಕಿಗಳು ಬಂಧಿ ಆಗಿರೋದು ಮಾತ್ರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ. ಇಕ್ರಾ ಜಿವಾನಿ ಎಂಬ ಪಾಕಿಸ್ತಾನ ಮೂಲದ ಯುವತಿಗೆ ಆನ್‌ಲೈನ್ ಗೇಮ್ ಹುಚ್ಚು. ಹೀಗಿರುವಾಗ ಲುಡೋ ಗೇಮ್ ಆಡುವ ವೇಳೆ ಉತ್ತರ ಪ್ರದೇಶದ ಮುಲಾಯಂ ಸಿಂಗ್ ಅನ್ನೋ ಯುವಕನ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿದೆ. ಅಂತಿಮವಾಗಿ ಇಬ್ಬರೂ ಮದ್ವೆಯಾಗ್ಬೇಕು ಅಂತಾ ನಿರ್ಧರಿಸಿದ್ದಾರೆ. ಆಗ ಜಿವಾನಿ, ಟೂರಿಸ್ಟ್ ವೀಸಾದಲ್ಲಿ ನೇಪಾಳಕ್ಕೆ ಬಂದಿದ್ದಾಳೆ. ನೇಪಾಳಕ್ಕೆ ಬಂದಿದ್ದ ಈಕೆಯನ್ನ, ಪ್ರಿಯಕರ ಮುಲಾಯಂ ಸಿಂಗ್ ರಹಸ್ಯವಾಗಿ ಭಾರತದ ಗಡಿವರೆಗೂ ಕರೆತಂದಿದ್ದಾನೆ. ಬಳಿಕ ಬಿಹಾರದ ಮೂಲಕ ಬೆಂಗಳೂರಿಗೆ ಕರೆದುಕೊಂಡು ಬಂದು ಸೆಟ್ಲ್ ಆಗಿದ್ದಾನೆ. ಅಷ್ಟೇ ಅಲ್ಲ , ಇಕ್ರಾ ಜಿವಾನಿಗೆ ರವಾ ಯಾದವ್ ಎನ್ನುವ ಹೆಸರಲ್ಲಿ ನಕಲಿ ಅಧಾರ್ ಮಾಡಿಸಿ, ಜುನ್ನಸಂದ್ರದಲ್ಲಿ ಬಾಡಿಗೆ ಮನೆ ಮಾಡಿದ್ದಾನೆ. ಆದ್ರೆ ಯುವತಿ ಇಕ್ರಾ, ಪಾಕಿಸ್ತಾನದ ಹೈದ್ರಾಬಾದ್‌ನಲ್ಲಿರೋ ತನ್ನ ತಾಯಿಗೆ ಕರೆ ಮಾಡಿದ್ದಾಳೆ. ಈ ವೇಳೆ ಗುಪ್ತಚರ ಇಲಾಖೆ ಅಲರ್ಟ್ ಆಗಿ, ಪೊಲೀಸರಿಗೆ ಮಾಹಿತಿ ನೀಡಿದೆ. ತಕ್ಷಣ ಬೆಳ್ಳಂದೂರು ಪೊಲೀಸರು ಟೀಮ್ ರಚನೆ ಮಾಡಿ ಯುವತಿಯನ್ನ ಪತ್ತೆ ಹಚ್ಚಿದ್ದಾರೆ. ಇದೀಗ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿ

ಇದನ್ನೂ ಓದಿ: DCP S Girish Presser: ಬೆಂಗಳೂರಲ್ಲಿ ಪತ್ತೆಯಾದಳು ಪಾಕಿಸ್ತಾನದ ಯುವತಿ! ಅವಳ ಗಂಡನ ಹೆಸರು ಮುಲಾಯಂ ಸಿಂಗ್ ಯಾದವ್!!

ಈ ಲವ್ ಸ್ಟೋರಿಯಲ್ಲಿ ಶುರುವಾದ ಅನುಮಾನ

ಕಳೆದ ಐದು ತಿಂಗಳಿಂದ ಇಕ್ರಾ ತನ್ನ ಪ್ರಿಯಕರನ ಜೊತೆ ಇದ್ದರು. ನೇಪಾಳದಲ್ಲಿ ಮದುವೆಯಾಗಿ, ಭಾರತಕ್ಕೆ ಎಂಟ್ರಿ ಆಗುತಿದ್ದಂತೆ ನಕಲಿ ಆಧಾರ್ ಕಾರ್ಡ್ ಮಾಡಿಸಿದ್ದಾರೆ. ಯಾರ ಗಮನಕ್ಕೂ ಬಾರದಂತೆ ದೇಶದಲ್ಲಿ ಸೆಟಲ್ ಆಗಿದ್ದಾರೆ. ಹಾಗಾದರೇ ಅಕ್ರಮವಾಗಿ ದೇಶದ ಗಡಿ ದಾಟಿದ್ದೇಗೆ? ಯಾರ ಗಮನಕ್ಕೂ ಬಾರದಂತೆ ಜೊಡಿ ಸೆಟಲ್ ಆಗಿದ್ದೇಗೆ? ಗಡಿ ದಾಟಿ ಬರುವುದು ಅಷ್ಟು ಸುಲಭವೇ? ಎಂಬ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಭಾರತ ಪಾಕಿಸ್ತಾನ್ ಲವ್ ಸ್ಟೋರಿ ಹಿಂದೆ ಬಿದ್ದ ತನಿಖಾ ಸಂಸ್ಥೆಗಳು

ಲವ್ ಆಯ್ತು‌, ಮದುವೆನೂ ಆಯ್ತು‌, ಆದ್ರೆ ದೇಶದೊಳಗೆ ಪಾಕ್ ಯುವತಿಯನ್ನ ಅಷ್ಟು ಸುಲಭವಾಗಿ ಹೇಗೆ ಕರೆತಂದ? ಎಂಬ ಬಗ್ಗೆ ಕೇಂದ್ರ ಹಾಗೂ ರಾಜ್ಯ ತನಿಖಾ ಸಂಸ್ಥೆಗಳು ತಲೆ ಕೆಡಿಸಿಕೊಂಡಿವೆ. ಪಾಕಿಸ್ತಾನದ ಮಹಿಳೆಯನ್ನು ಭಾರತಕ್ಕೆ ಕರೆದುಕೊಂಡು ಬರುವುದು ಅಷ್ಡು ಸುಲಭನಾ? ಎಂಬ ಪ್ರಶ್ನೆ ಎದ್ದಿದೆ.

ಬಿಹಾರದ ಬಿರ್ ಗಂಜ್ ಗಡಿ ಮೂಲಕ ಭಾರತ ಪ್ರವೇಶಿಸಿರುವ ಜೋಡಿ, ಗಡಿ ಭದ್ರತೆಯನ್ನ ಮೀರಿ ದೇಶದೊಳಗೆ ಬಂದಿದ್ದು ಹೇಗೆ ಎಂಬುದು ಪೊಲೀಸರಿಗೆ ದೊಡ್ಡ ಪ್ರಶ್ನೆಯಾಗಿದೆ. ಈಗಾಗಲೇ ಘಟನೆ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ, ಐಎಸ್​ಡಿ ಸೇರಿ ಇತರ ತನಿಖಾ ಸಂಸ್ಥೆಗಳು ಮಾಹಿತಿ ಪಡೆಯುತ್ತಿವೆ.

ಪಾಕ್ ಯುವತಿ ಪ್ರೇಮಕ್ಕೆ ಲಾಕ್​ ಡೌನ್ ನಂಟು

ಇನ್ನು ಪಾಕ್ ಯುವತಿಯ ವಿಚಾರಣೆ ವೇಳೆ ಇಂಟರೆಸ್ಟಿಂಗ್ ಕಹಾನಿ ರಿವಿಲ್ ಆಗಿದೆ. ಕೊರೊನಾ ಲಾಕ್ ಡೌನ್ ವೇಳೆ ಇವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು ಎಂದು ಯುವತಿ ಮಾಹಿತಿ ನೀಡಿದ್ದಾರೆ. ಇವರಿಬ್ಬರು ಮದುವೆಗೆಗಿಂತ ಮುಂಚೆ ಮೂರು ವರ್ಷಗಳ ಕಾಲ ಪ್ರೀತಿಯಲ್ಲಿದ್ದರು. 2020 ರ ಆರಂಭದಲ್ಲಿ ಇಕ್ರಾ ಹಾಗೂ ಮುಲಾಯಂ ಸಿಂಗ್ ಲವ್ ಸ್ಟೋರಿ ಶುರುವಾಗಿತ್ತು. 2020 ರಲ್ಲಿ ಮದುವೆಯಾಗಲು ನಿರ್ಧರಿಸಿದ್ರು. 2021 ರಲ್ಲಿ ಇಕ್ರಾ ಪಾಕಿಸ್ತಾನ ತೊರೆದಿದ್ದರು. ಬಳಿಕ ಟೂರಿಸ್ಟ್ ವೀಸಾದಲ್ಲಿ ಪಾಕ್ ನಿಂದ ದುಬೈಗೆ ಬಂದು ದುಬೈನಿಂದ ನೇಪಾಳಕ್ಕೆ ಬಂದಿದ್ದಾರೆ. ಇಷ್ಟೆಲ್ಲ ಆದ ಬಳಿಕ ನೇಪಾಳದಲ್ಲಿ ಪ್ರೇಯಸಿ ಎಂಟ್ರಿ ಕೊಡುತಿದ್ದಂತೆ ಪ್ರಿಯಕರ ನೇಪಾಳಕ್ಕೆ ಹಾರಿದ್ದ. ನೇಪಾಳದಲ್ಲಿ ಮದುವೆಯಾಗಿ ಅಕ್ರಮವಾಗಿ ಗಡಿ ದಾಟಿ ಬಿಹಾರದ ಮೂಲಕ ಭಾರತಕ್ಕೆ ಈ ಲವ್ ಬರ್ಡ್ಸ್ ಎಂಟ್ರಿ ಕೊಟ್ಟಿದ್ದರು. ಯುವತಿ ಭಾರತಕ್ಕೆ ಬರುವ ಸಂಪೂರ್ಣ ವೆಚ್ಚವನ್ನು ಪ್ರಿಯಕರನೇ ಭರಿಸಿದ್ದ.

ಸದ್ಯ ಮುಲಾಯಂ ಸಿಂಗ್ ಯಾದವ್ ಕಸ್ಟಡಿಗೆ ಪಡೆಯಲು ಬೆಳ್ಳಂದೂರು ಪೊಲೀಸರು ತಯಾರಿ ನಡೆಸಿದ್ದಾರೆ. ಗಡಿ ದಾಟಿದ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ. ಇದೇ ವಿಚಾರವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಂದಲೂ ಮುಲಾಯಂ ಸಿಂಗ್ ಯಾದವ್ ವಿಚಾರಣೆಗೆ ಸಿದ್ದತೆ ನಡೆದಿದೆ. ಕಳೆದ ಏಳು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಮುಲಾಯಂ ಸಿಂಗ್ ಯಾದವ್, ನಗರದ ಹಲವೆಡೆ ಸೆಕ್ಯೂರಿಟಿ ಕೆಲಸ ಮಾಡಿದ್ದ. ಸದ್ಯ ಹಲವು ಆಯಾಮಗಳಲ್ಲಿ ಬೆಳ್ಳಂದೂರು ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada