ಬೆಂಗಳೂರು, ಅ.04: ಮಣಿಪಾಲ್ ಆಸ್ಪತ್ರೆ (Manipal Hospitals) ಸಮೂಹವು ಮಂಗಳವಾರ ‘ಎಸ್‌ಒಎಸ್ ಕ್ಯೂಆರ್ ಕೋಡ್’ (SOS QR Code) ಹಾಗೂ ಹೃದಯ ಮತ್ತು ಶ್ವಾಸಕೋಶ ಕಾಯಿಲೆಗೆ ಸಂಬಂಧಿಸಿದ ತರಬೇತಿಗೆ ಚಾಲನೆ ನೀಡಲಾಯಿತು. ಈ ‘ಎಸ್‌ಒಎಸ್ ಕ್ಯೂಆರ್ ಕೋಡ್’ ಹೃದಯಾಘಾತದಂತಹ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸಹಾಯಕ್ಕೆ ಸಹಕಾರಿಯಾಗಿದೆ. ಕಳೆದ ವರ್ಷ ಪರಿಚಯಿಸಿದ್ದ ಎಸ್‌ಒಎಸ್ ಕ್ಯೂಆರ್ ಕೋಡ್ ವ್ಯವಸ್ಥೆಗೆ ಉತ್ತಮ ಸ್ಪಂದನೆ ಸಿಕ್ಕಿತ್ತು. ಹೀಗಾಗಿ ಈ ವರ್ಷ ನಗರದ 37 ಟ್ರಾಫಿಕ್ ಸಿಗ್ನಲ್‌ಗಳಲ್ಲಿ ‘ಎಸ್‌ಒಎಸ್ ಕ್ಯೂಆರ್ ಕೋಡ್’ ಮರುಪರಿಚಯಿಸಲಾಗಿದೆ. ಬಿಬಿಎಂಪಿ (BBMP) ಹಾಗೂ ಬೆಂಗಳೂರು ನಗರ ಸಂಚಾರ ಪೊಲೀಸರ (Bengaluru Traffic Police) ಸಹಯೋಗದಲ್ಲಿ ಈ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.
ಹೃದಯದ ಸಮಸ್ಯೆ ಕಾಣಿಸಿಕೊಂಡಾಗ ಪ್ರಾಥಮಿಕ ಅಥವಾ ತುರ್ತು ಚಿಕಿತ್ಸೆಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ವೈದ್ಯಕೀಯ ಸೇವೆ ಪಡೆಯಬಹುದು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆಯೇ ತುರ್ತು ಸಂಖ್ಯೆಗೆ ಕರೆ ಹೋಗುತ್ತದೆ. ಬಳಿಕ ತಕ್ಷಣ ಕ್ಯೂಆರ್ ಕೋಡ್ ಸ್ಕ್ಯಾನ್ ಆದ ಜಾಗಕ್ಕೆ ಆಂಬುಲೆನ್ಸ್ ಹೋಗಿ ತಲುಪುತ್ತದೆ.
ಇದನ್ನೂ ಓದಿ: ಈ ಬ್ಲಡ್ ಗ್ರೂಪ್ ಹೊಂದಿರುವ ಜನರಲ್ಲಿ ಹೃದಯಾಘಾತದ ಅಪಾಯ ಹೆಚ್ಚು!
ಒಂದು ಸ್ಕ್ಯಾನ್ ಜೀವವನ್ನು ಉಳಿಸಬಹುದು ‘ಗೋಲ್ಡನ್ ಅವರ್’ ಸಮಯದಲ್ಲಿ ಈ ಕ್ಯೂಆರ್ ಕೋಡ್ ಉಪಕಾರಿಯಾಗಲಿದೆ. ಟ್ರಾಫಿಕ್ ಜಂಕ್ಷನ್‌ಗಳು, ಅಪಾರ್ಟ್‌ಮೆಂಟ್ ಸಂಕೀರ್ಣಗಳಲ್ಲಿ ಸೇರಿ ಪ್ರಮುಖ ಸ್ಥಳಗಳಲ್ಲಿ ಕ್ಯೂಆರ್ ಕೋಡ್ ಇರಿಸಲು ಮಣಿಪಾಲ್ ಮುಂದಾಗಿದೆ. ರೋಗಿಗಳು ಅಥವಾ ಅವರನ್ನು ಆರೈಕೆ ಮಾಡುವವರು ತಮ್ಮ ಮೊಬೈಲ್‌ಗಳ ಮೂಲಕ ಸ್ಕ್ಯಾನ್ ಮಾಡಿ, ಸೇವೆ ಪಡೆದುಕೊಳ್ಳಬಹುದು.
ಸ್ಕ್ಯಾನ್ ಮಾಡಿದ ಬಳಿಕ ಮಣಿಪಾಲ್ ಆಂಬುಲೆನ್ಸ್ ರೆಸ್ಪಾನ್ಸ್ ಸರ್ವಿಸ್ ಹಾಗೂ 108 ಆಂಬುಲೆನ್ಸ್ ಗೆ ಸ್ಥಳದ ಮಾಹಿತಿ ರವಾನೆಯಾಗುತ್ತದೆ. ಬಳಿಕ ಆಂಬುಲೆನ್ಸ್ ಹತ್ತಿರದ ಮಣಿಪಾಲ್ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುತ್ತದೆ.
On World Heart Day, Manipal Hospitals Bengaluru Turned the city traffic light into heart shape and launched an emergency SOS QR code. This location enabled QR code is designed to make emergency care available to anyone with a single scan.#ManipalHospitals #YourManipal #LifesOn… pic.twitter.com/PURptFhYh6
— Manipal Hospitals (@ManipalHealth) September 29, 2023
ಇನ್ನು ವಿಶ್ವ ಹೃದಯ ದಿನದ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಈ ಕ್ಯೂಆರ್ ಕೋಡ್ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, ಇಂತಹ ಕಾರ್ಯಕ್ರಮಗಳು ತುರ್ತು ಪರಿಸ್ಥಿತಿ ವೇಳೆ ವೈದ್ಯಕೀಯ ಪ್ರತಿಕ್ರಿಯೆಯ ಬಗೆಗಿನ ಅಭಿಪ್ರಾಯವನ್ನೇ ಬದಲಾಯಿಸಬಹುದು ಎಂದು ಅಭಿಪ್ರಾಯಪಟ್ಟರು. ಬೆಂಗಳೂರು ಭಾರತದ ಟೆಕ್ ಹಬ್ ಆಗಿರುವುದರಿಂದ, ಅಪಾರ ಯಶಸ್ಸಿಗೆ ಸಾಕ್ಷಿಯಾಗಲು ಇಂತಹ ಉಪಕ್ರಮಗಳಿಗೆ ಹೆಚ್ಚಿನ ಅವಕಾಶವಿದೆ ಎಂದು ಅವರು ಹೇಳಿದರು.
ಹೃದಯ ಸ್ತಂಭನಕ್ಕೆ ಒಳಗಾಗುವ ವ್ಯಕ್ತಿಗಳಿಗೆ ನೀಡಬೇಕಾದ ಪ್ರಥಮ ಚಿಕಿತ್ಸೆ ಸಿಪಿಆರ್ ಸೇರಿದಂತೆ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಪಾಠಗಳನ್ನು ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪಠ್ಯದಲ್ಲಿ ಸೇರ್ಪಡೆ ಮಾಡಲು ಆರೋಗ್ಯ ಇಲಾಖೆಯು ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಶಿಕ್ಷಣ ಇಲಾಖೆ ಒಪ್ಪಿಗೆ ಸೂಚಿಸಿದರೆ ಮುಂದಿನ… pic.twitter.com/9IXbKWsOCL
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 3, 2023
ಮತ್ತೊಂದೆಡೆ ಹೃದಯ ಸ್ತಂಭನಕ್ಕೆ ಒಳಗಾಗುವ ವ್ಯಕ್ತಿಗಳಿಗೆ ನೀಡಬೇಕಾದ ಪ್ರಥಮ ಚಿಕಿತ್ಸೆ ಸಿಪಿಆರ್ ಸೇರಿದಂತೆ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಪಾಠಗಳನ್ನು ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪಠ್ಯದಲ್ಲಿ ಸೇರ್ಪಡೆ ಮಾಡಲು ಆರೋಗ್ಯ ಇಲಾಖೆಯು ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಶಿಕ್ಷಣ ಇಲಾಖೆ ಒಪ್ಪಿಗೆ ಸೂಚಿಸಿದರೆ ಮುಂದಿನ ವರ್ಷವೇ ಆರೋಗ್ಯದ ಮಹತ್ವದ ಕುರಿತಾದ ಪಠ್ಯ ಸೇರ್ಪಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:55 pm, Wed, 4 October 23