Anna Bhagya: ಅನ್ನಭಾಗ್ಯ ಯೋಜನೆ ಜುಲೈ 1 ರಿಂದ ಜಾರಿಯಾಗುವುದು ಅನುಮಾನ?

ಜುಲೈ ಒಂದರಿಂದ ಜಾರಿಯಾಗಬೇಕಿದ್ದ ಅನ್ನಭಾಗ್ಯ ಯೋಜನೆಗೆ ಬ್ರೇಕ್ ಬೀಳುತ್ತಾ? ಎಂಬ ಪ್ರಶ್ನೆ ಉದ್ಭವಿಸಿದೆ. ಏಫ್​ಸಿಐ ನಿರ್ಧಾರದಿಂದಾಗಿ ಆಹಾರ ಇಲಾಖೆಗೆ ದೊಡ್ಡ ಟೆಕ್ಷನ್ ಶುರುವಾಗಿದೆ.

Anna Bhagya: ಅನ್ನಭಾಗ್ಯ ಯೋಜನೆ ಜುಲೈ 1 ರಿಂದ ಜಾರಿಯಾಗುವುದು ಅನುಮಾನ?
ಅನ್ನಭಾಗ್ಯ ಯೋಜನೆ
Follow us
ಆಯೇಷಾ ಬಾನು
|

Updated on: Jun 15, 2023 | 10:30 AM

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ(Congress Guarantee) ಒಂದಾದ ಅನ್ನಭಾಗ್ಯ ಯೋಜನೆ ಜುಲೈ 1 ರಿಂದ ಜಾರಿಯಾಗುವುದು ಅನುಮಾನ ಎನ್ನಲಾಗುತ್ತಿದೆ. ನಿನ್ನೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ(Siddaramaiah), ಡೆಪ್ಯುಟಿ ಮ್ಯಾನೇಜರ್ ಜೂನ್ 12 ರಂದು ತಮಗೆ ಪತ್ರ ಬರೆದು ಹೆಚ್ಚುವರಿ ಅಕ್ಕಿ ಕೊಡುವುದಾಗಿ ತಿಳಿಸಿದ್ದರು. ಇದಾದ ಬಳಿಕ ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದು, ಅಕ್ಕಿ ಸಂಗ್ರಹ ಇದ್ದರೂ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಹೀಗಾಗಿ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದ ನಿರ್ಧಾರ ಸಂಕಷ್ಟ ತಂದೊಡ್ಡುತ್ತ ಎನ್ನಲಾಗುತ್ತಿದೆ.

ಜುಲೈ ಒಂದರಿಂದ ಜಾರಿಯಾಗಬೇಕಿದ್ದ ಅನ್ನಭಾಗ್ಯ ಯೋಜನೆಗೆ ಬ್ರೇಕ್ ಬೀಳುತ್ತಾ? ಎಂಬ ಪ್ರಶ್ನೆ ಉದ್ಭವಿಸಿದೆ. ಏಫ್​ಸಿಐ ನಿರ್ಧಾರದಿಂದಾಗಿ ಆಹಾರ ಇಲಾಖೆಗೆ ದೊಡ್ಡ ಟೆಕ್ಷನ್ ಶುರುವಾಗಿದೆ. ಅನ್ನ ಭಾಗ್ಯ ಯೋಜನೆಗೆ ಎಫ್​ಸಿಐ ನಿಂದ ಅಕ್ಕಿ ರವಾನೆ ಮಾಡಿಕೊಳ್ಳಲು ಆಹಾರ ಇಲಾಖೆ ಸಿದ್ದತೆ ನಡೆಸಿತ್ತು. ಏಫ್​ಸಿಐಯ ಮೇಲೆಯೇ ಆಹಾರ ಇಲಾಖೆ ಡಿಪೆಂಡ್ ಆಗಿತ್ತು. ಆದ್ರೀಗಾ ಎಫ್​ಸಿಐನಿಂದ ಅಕ್ಕಿ ಸ್ಥಗಿತ ಮಾಡಿದ್ದು ಜುಲೈ ಒಂದರಿಂದ ಅನ್ನಭಾಗ್ಯ ಯೋಜನೆ ಜಾರಿಯಾಗುತ್ತ ಎನ್ನುವ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯ ಅಂತಿಮ ವರದಿ ಸಿದ್ಧ: ಯಾವ ಪಠ್ಯಗಳಿಗೆ ಬೀಳಲಿದೆ ಕತ್ತರಿ?

ಸಧ್ಯ ನಮ್ಮ ರಾಜ್ಯದಲ್ಲಿ 1.26 ಕೋಟಿಯಷ್ಟು ಬಿಪಿಎಲ್ ದಾರರು ಇದ್ದಾರೆ. ಇವರಿಗೆ ಒಂದು ತಿಂಗಳಿಗೆ 2 ಲಕ್ಷದ 40 ಸಾವಿರ ಮೆಟ್ರಿಕ್ ಟನ್ ನಷ್ಟು ಅಕ್ಕಿ ಬೇಕಾಗುತ್ತದೆ. ಇದಕ್ಕೆ 600 ಕೋಟಿಯಷ್ಟು ಹಣ ವ್ಯಯಾ ಮಾಡಬೇಕಾಗುತ್ತದೆ. ಈ ಹಿಂದೆ 2 ಲಕ್ಷದ 17 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತಿತ್ತು. ಅದಕ್ಕೆ 360 ಕೋಟಿಯಷ್ಡು ಹಣ ವ್ಯಯ ಮಾಡಲಾಗುತ್ತಿತ್ತು. ಇದೀಗಾ 240 ಕೋಟಿಯಷ್ಟು ಹಣ ಹೆಚ್ಚುವರಿಯಾಗಿ ಖರ್ಷು ಬರುತ್ತಿದೆ. ಆದ್ರೆ ಸರ್ಕಾರದಿಂದ ಹಣ ಖರ್ಚುಮಾಡುವುದಕ್ಕೆ ರೆಡಿಯಾದ್ರು ರಾಜ್ಯದಲ್ಲಿ ಅಕ್ಕಿಯ ಸ್ಟಾಕ್ ಇಲ್ಲ. ಸಧ್ಯ ತೆಲಂಗಾಣದಲ್ಲಿ, ಕೇಂದ್ರೀಯ ಭಂಡಾರ, ನಾಫೇಡ್, ಎನ್​ಸಿಸಿಎಫ್, ಮಾರ್ಕ್ ಫೇಡ್, ಕನ್ಸುಮರ್ ರೈಸೆ ಫೆಡರೇಷನ್​ಗಳಂತ ದೊಡ್ಡ ಏಜೆನ್ಸಿಗಳೊಂದಿಗೆ ಆಹಾರ ಇಲಾಖೆ ಚರ್ಚಿಸುತ್ತಿದ್ದು, ಈ ಏಜೆನ್ಸಿಗಳೊಂದಿಗೆ ಅಕ್ಕಿಯ ಗುಣಮಟ್ಟ, ಬೆಲೆ, ಶೇಖರಣೆ ಕುರಿತಾಗಿ ಅಧಿಕಾರಿಗಳು ಚರ್ಚಿಸುತ್ತಿದೆ. ಈ ವಾರ ಅಥವಾ ಮುಂದಿನ ವಾರದಲ್ಲಿ ಟೆಂಡರ್ ನೀಡುವ ಸಾಧ್ಯತೆ ಇದೆ. ಆದ್ರೆ ಟೆಂಡರ್ ನೀಡಿದರು ಆ ಪ್ರಕ್ರಿಯೆ ಮುಗಿಯುವುದಕ್ಕೆ 15 ದಿನ ಬೇಕಾಗುತ್ತದೆ. ಸಧ್ಯ ಜುಲೈ 1ಕ್ಕೆ ಕೇವಲ 15 ದಿನಗಳು ಮಾತ್ರ ಬಾಕಿ ಉಳಿದಿದ್ದು 15 ದಿನಗಳಲ್ಲಿ ಅನ್ನಭಾಗ್ಯ ಯೋಜನೆಗೆ ಅಕ್ಕಿ ಶೇಖರಣೆಯಾಗುತ್ತ ಎನ್ನುವ ಬಗ್ಗೆ ಅನುಮಾನ ಉಂಟಾಗಿದೆ.

ಪಡಿತರ ಚೀಟಿಗಳಿಗೆ ನೀಡಲಾಗುತ್ತಿರುವ ಧಾನ್ಯಗಳು

ಬಿಪಿಲ್ ಆಧ್ಯಾತ ಕುಟುಂಬಗಳಿಗೆ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿಕೊಡಲಾಗುತ್ತಿದೆ. ಅಂತ್ಯೋದಯ ಕಾರ್ಡ್ ದಾರಿಗೆ ಒಂದು ಕಾರ್ಡ್ ಗೆ 35 kg ಅಕ್ಕಿ ಕೊಡಲಾಗುತ್ತದೆ. ಇದ್ರಲ್ಲಿ 19 ಜಿಲ್ಲೆಗಳಿಗೆ 2 kg ರಾಗಿ, 3 kg ಅಕ್ಕಿ ಕೊಡಲಾಗುತ್ತಿದೆ. ಇನ್ನು ಉಳಿದ ಉತ್ತರ ಕರ್ನಾಟಕದ 5 ಭಾಗಗಕ್ಕೆ 2 kg ಜೋಳ, 3 kg ಅಕ್ಕಿ ಕೊಡಲಾಗುತ್ತಿದೆ. ಬಾಕಿ ಉಳಿದ ಜಿಲ್ಲೆಗಳಿಗೆ 5 ಕೆಜಿ ಅಕ್ಕಿಯನ್ನ ನೀಡಲಾಗುತ್ತಿದೆ. ಸಧ್ಯ ರಾಗಿ ಹಾಗೂ ಜೋಳ ಸ್ವಲ್ಪಮಟ್ಟಿಗೆ ಸ್ಟಾಕ್ ಇದೆ. 4.54 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಯಾಗಿದೆ. 77 ಸಾವಿರ ಮೆಟ್ರಿಕ್ ಟನ್ ನಷ್ಟು ಜೋಳ ಖರೀದಿಯಾಗಿದೆ. 6 ತಿಂಗಳಿಗೆ ರಾಗಿ ಹಾಗೂ ಜೋಳಕ್ಕೆ ಕೊರತೆ ಇಲ್ಲ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ