ಮಕ್ಕಳ ವಿಶೇಷ ಭೋಜನಕ್ಕೆ ಶಿಕ್ಷಣ ಇಲಾಖೆ ಭಿಕ್ಷೆ ಬೇಡುತ್ತಿದೆ: ಎದುರಾಗಿದೆ ಗಂಭೀರ ವಿರೋಧ

| Updated By: ಆಯೇಷಾ ಬಾನು

Updated on: Dec 15, 2022 | 10:35 AM

ಆಹಾರ ಪದ್ಧತಿಯ ಸಂಸ್ಕೃತಿಯಲ್ಲಿ ಧರ್ಮ ಸೇರಿಸಲು ಮುಂದಾಗಿದೆ. ಅನೇಕ ಜಾತ್ರೆ, ಉತ್ಸವಗಳಲ್ಲಿ ನಾನ್ ವೆಜ್ ಆಹಾರ ಮಾಡ್ತಾರೆ ಅದ್ನಾ ಮಕ್ಕಳು ತಿನ್ನಬಾರದಾ? ಮಕ್ಕಳ ಆಹಾರ ವಿಚಾರದಲ್ಲಿ ಧರ್ಮ ಜಾತಿ ತರುವ ಪ್ರಯತ್ನ ಯಾಕೆ? ಎಂದು ಸರ್ಕಾರ ಯೋಜನೆಗೆ ಜನ ಸಾಮಾನ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಮಕ್ಕಳ ವಿಶೇಷ ಭೋಜನಕ್ಕೆ ಶಿಕ್ಷಣ ಇಲಾಖೆ ಭಿಕ್ಷೆ ಬೇಡುತ್ತಿದೆ: ಎದುರಾಗಿದೆ ಗಂಭೀರ ವಿರೋಧ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯ ಶಿಕ್ಷಣ ಇಲಾಖೆ(Karnataka Education Department) ಒಂದಿಲೊಂದು ವಿವಾದಕ್ಕೆ ಗುರಿಯಾಗುತ್ತಿದೆ. ಶಿಕ್ಷಣ ಇಲಾಖೆಯ ಸುತ್ತ ವಿವಾದಗಳ ಹುತ್ತ ಬೆಳೆದು ನಿಂತಿದೆ. ಕಳೆದ ಒಂದು ವರ್ಷದಿಂದ ಶಿಕ್ಷಣ ಇಲಾಖೆ ಒಂದಲ್ಲಾ ಒಂದು ವಿವಾದಗಳಿಗೆ ಕೇಂದ್ರ ಬಿಂದುವಾಗ್ತಿದೆ. ಹಿಜಾಬ್, ಮದರಸಾ ಬ್ಯಾನ್ ವಿವಾದದ ಬಳಿಕ ಈಗ ಬಿಸಿಯೂಟ(Midday Meal Scheme)  ಆಹಾರ ವಿಚಾರದಲ್ಲಿ ಮತ್ತೊಂದು ವಿವಾದ ಶುರುವಾಗಿದೆ. ಶಿಕ್ಷಣ ಇಲಾಖೆ ಹೊಸದಾಗಿ ಜಾರಿಗೆ ತಂದ ವಿಶೇಷ ಭೋಜನ(Special Meal) ಕಾರ್ಯಕ್ರಮದ ಬಗ್ಗೆ ವಿರೋಧಗಳು ವ್ಯಕ್ತವಾಗುತ್ತಿವೆ. ಶಿಕ್ಷಣ ಇಲಾಖೆ ಆಹಾರ ಹಕ್ಕುಗಳನ್ನು ನಿರ್ಬಂಧಿಸುವ ನಿಷೇಧಿಸುವ ಬಗ್ಗೆ ಗಂಭೀರ ವಿರೋಧ ಎದುರಾಗಿದೆ.

ಶಿಕ್ಷಣ ಇಲಾಖೆ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೂ ಭೀಕ್ಷೆ ಬೇಡಲು ಮುಂದಾಗಿದೆ ಎಂಬ ವಿರೋಧ ಕೇಳಿ ಬರುತ್ತಿದೆ. ಜಾತ್ರೆ, ಹಬ್ಬ, ಉತ್ಸವಗಳಲ್ಲಿನ ಆಹಾರವನ್ನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಅಡಿಯಲ್ಲಿ ವಿಶೇಷ ಭೋಜನೆ ಅಂತಾ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಜಾತ್ರೆ, ಉತ್ಸವಗಳಲ್ಲಿ ಮಕ್ಕಳಿಗೆ ಆಹಾರ ಭಿಕ್ಷೆ ಬೇಡಲು ಮುಂದಾಗಿರೊದಕ್ಕೆ ಶಿಕ್ಷಣ ತಜ್ಞರ ವಿರೋಧ ಕೇಳಿ ಬಂದಿದೆ. ಹಬ್ಬ ಉತ್ಸವ ಜಾತ್ರೆಗಳಲ್ಲಿ ಸಿದ್ಧಪಡಿಸುವ ಸಸ್ಯಾಹಾರ ಆಹಾರವನ್ನ ಮಾತ್ರ ಮಕ್ಕಳಿಗೆ ನೀಡಬೇಕು ಅಂತಾ ಸುತ್ತೋಲೆ ಹೊರಡಿಸಿದೆ. ಆಹಾರ ಪದ್ಧತಿಯ ಸಂಸ್ಕೃತಿಯಲ್ಲಿ ಧರ್ಮ ಸೇರಿಸಲು ಮುಂದಾಗಿದೆ. ಅನೇಕ ಜಾತ್ರೆ, ಉತ್ಸವಗಳಲ್ಲಿ ನಾನ್ ವೆಜ್ ಆಹಾರ ಮಾಡ್ತಾರೆ ಅದ್ನಾ ಮಕ್ಕಳು ತಿನ್ನಬಾರದಾ? ಮಕ್ಕಳ ಆಹಾರ ವಿಚಾರದಲ್ಲಿ ಧರ್ಮ ಜಾತಿ ತರುವ ಪ್ರಯತ್ನ ಯಾಕೆ? ಪೌಷ್ಠಿಕ ಆಹಾರ ನೀಡಲು ಹೆಚ್ಚು ದುಡ್ಡು ಖರ್ಚು ಮಾಡಿ ಒಳ್ಳೆ ಆಹಾರ ನೀಡಿ. ಅದು ಬಿಟ್ಟು ಜಾತ್ರೆ, ಹಬ್ಬ ಉತ್ಸವಗಳಲ್ಲಿನ ಆಹಾರಕ್ಕೆ ಭಿಕ್ಷೆ ಬೇಡುವುದು ಯಾಕೆ? ಎಂದು ಹಲವರು ಅಭಿಪ್ರಾಯ ಪಟ್ಟಿದ್ದು ಇಲಾಖೆಯ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಹಬ್ಬ-ಹರಿದಿನ, ವಿಶೇಷ ಸಂದರ್ಭಗಳಲ್ಲಿ ಶಾಲಾ ಮಕ್ಕಳಿಗೆ ವಿಶೇಷ ಭೋಜನ ಯೋಜನೆ 

ಶಿಕ್ಷಣ ಇಲಾಖೆ ಹಬ್ಬ, ಜಾತ್ರೆ, ಉತ್ಸವ ಹಾಗೂ ವಿಶೇಷ ಸಂದರ್ಭಗಳಲ್ಲಿ ವಿಶೇಷ ಭೋಜನ ಯೋಜನೆಯಡಿ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ವಿಶೇಷ ಭೋಜನ ಮತ್ತು ಶಾಲೆಗಾಗಿ ನಾವು ನೀವು ಕಾರ್ಯಕ್ರಮ ಆಯೋಜಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಕಾರ್ಯಕ್ರಮದಡಿ ಟ್ರಸ್ಟ್, ಸಂಘ ಸಂಸ್ಥೆಗಳು, ಎಸ್‌ಡಿಎಂಸಿಗಳು, ಸಾರ್ವಜನಿಕರೂ ಸೇರಿದಂತೆ ಸಮುದಾಯದವರು ಆರ್ಥಿಕ ನೇರವು, ವಿಶೇಷ ಪೌಷ್ಠಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಹುದು. ಈ ರೀತಿ ನೀಡುವ ಆಹಾರ ಸಂಪೂರ್ಣ ಸಸ್ಯಾಹಾರವಾಗಿರಬೇಕು. ಇಲಾಖೆ ಗುರುತಿಸಿರುವ ಆಹಾರ ಪದಾರ್ಥಗಳ ಪಟ್ಟಿಯಲ್ಲಿರಬೇಕು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ನೀಡಿರುವುದು ಈಗ ವಿರೋಧಕ್ಕೆ ಕಾರಣವಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ