ಬೆಂಗಳೂರು: ಭಾವನೇ ನಾದಿನಿಯ ಮೇಲೆ ಕಣ್ಣು ಹಾಕಿದ್ದ. ಅಕ್ಕನ ಮದುವೆಯಾಗಿದ್ದ ಆಸಾಮಿ ತಂಗಿಯನ್ನೂ ಬಯಸಿದ್ದ. ಪತ್ನಿಯ ತಂಗಿಯನ್ನು ಮದುವೆಯಾಗಬೇಕು ಎಂದು ಆ ಯುವತಯನ್ನು ಕಿಡ್ನಾಪ್ ಮಾಡಿದ್ದ. ಕಿಡ್ನಾಪ್ ಮಾಡಿದ್ದ ಆರೋಪಿ ದೇವರಾಜ್ ಎಂಬಾತನನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ದೇವರಾಜ್ ಸೇರಿ ಮೂವರು ಆರೋಪಿಗಳು ಅಂಧರ್ ಆಗಿದ್ದಾರೆ. ಕೊಡಿಗೆಹಳ್ಳಿಯ ರಾಯಲ್ ಮಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಬರುವಾಗ ಆರೋಪಿಗಳು ಕಾರ್ ನಲ್ಲಿ ಬಂದು ಕಿಡ್ನಾಪ್ ಮಾಡಿದ್ದರು. ಜನವರಿ 22 ರಂದು ಯುವತಿಯನ್ನು ಅಪಹರಿಸಿಕೊಂಡು ಹೋಗಲಾಗಿತ್ತು. ಹಾಸನದ ಸಕಲೇಶಪುರದಲ್ಲಿ ಇಂದು ಆರೋಪಿಗಳ ಬಂಧನವಾಗಿದ್ದು, ಯುವತಿಯನ್ನು ರಕ್ಷಣೆ ಮಾಡಲಾಗಿದೆ.
ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ ದೇವರಾಜ ಹೆಂಡತಿಯ ಜೊತೆಗೆ ಆಕೆಯ ತಂಗಿಯನ್ನೂ ಪ್ರೀತಿಸ್ತಿದ್ದ. ಆದ್ರೆ 20 ವರ್ಷದ ಯುವತಿ ಇದಕ್ಕೆ ಒಪ್ಪಿರಲಿಲ್ಲ. ಆಗ ಕಿಡ್ನಾಪ್ ಮಾಡಿಕೊಂಡು ಮದುವೆ ಮಾಡೊ ಪ್ಲಾನ್ ನಲ್ಲಿದ್ದ ದೇವರಾಜ.
ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು
ಮಂಡ್ಯ: ಮಗನ ಸಾವಿನ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ತಾಯಿ-ಮಗ ಹೀಗೆ ಸಾವಿನಲ್ಲಿ ಒಂದಾಗಿದ್ದಾರೆ. ಲೋ ಬಿಪಿಯಿಂದಾಗಿ 45 ವರ್ಷದ ಕುಶಾಲ್ ಮೃತಪಟ್ಟಿದ್ದ. ಮಗನ ಸಾವಿನ ಸುದ್ದಿ ಕೇಳಿ ತಾಯಿ ಲಕ್ಷ್ಮಮ್ಮ(69) ಸಹ ಇಹಲೋಕ ತ್ಯಜಿಸಿದ್ದಾರೆ.
ನಿನ್ನೆ ಮನೆಯಲ್ಲಿ ಟಿವಿ ನೋಡುವ ವೇಳೆ ಕುಶಾಲ್‌ಗೆ ಲೋ ಬಿಪಿ ಆಗಿದೆ. ರಕ್ತದೊತ್ತಡ ಕುಸಿದು ಒದ್ದಾಡುತ್ತಿದ್ದ ಕುಶಾಲ್‌ನನ್ನು ಸ್ಥಳೀಯರು ಮನೆಯ ಹೊರಗೆ ತಂದಿದ್ದಾರೆ. ಈ ವೇಳೆ ಕುಶಾಲ್ ಮನೆಯ ಮುಂದೆ ಪ್ರಾಣ ಬಿಟ್ಟಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಲಕ್ಷ್ಮಮ್ಮ ಮಗನ ಸಾವು ನೋಡಿ ಹೃದಯಾಘಾತಕ್ಕೆಈಡಾಗಿದ್ದಾರೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 9:21 am, Mon, 24 January 22