ಬೆಂಗಳೂರು, ಅ.8: ಅಕ್ಟೋಬರ್ 11 ರಂದು ಬೆಂಗಳೂರಿನಿಂದ (Bangalore) ಹೊರಡುವ ಮೇನ್‌ಲೈನ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್ (MEMU) ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಯಲಹಂಕ-ಧರ್ಮಾವರಂ ವಿಭಾಗದಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವ ಕಾರಣ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೈಲು ಸಂಖ್ಯೆಗಳು 06515/06516 KSR ಬೆಂಗಳೂರು-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ-KSR ಬೆಂಗಳೂರು MEMU ವಿಶೇಷ ಮತ್ತು 06595/06596 KSR ಬೆಂಗಳೂರು-ಧರ್ಮಾವರಂ-KSR ಬೆಂಗಳೂರು MEMU ರೈಲುಗಳ ಸಂಚಾರವನ್ನು ಅ. 11 ರಂದು ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: Bengaluru Traffic Today: ಬೆಂಗಳೂರಿನಲ್ಲಿ ಇಂದು ಈ ರಸ್ತೆಗಳನ್ನು ಬಳಸದಿರಿ, ಸಂಚಾರ ರದ್ದು; ಪರಿಯಾಯ ಮಾರ್ಗ ಹೀಗಿದೆ
ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಮೆಮು ರೈಲುಗಳು ಮೈಸೂರು ನಗರ ನಿಲ್ದಾಣದ ಬದಲು ಅಶೋಕಪುರಂ ನಿಲ್ದಾಣದಿಂದ ಸಂಚಾರ ನಡೆಸಲಿವೆ. ದಸರಾ ಸಂದರ್ಭದಿಂದ ಎಲ್ಲಾ ರೈಲುಗಳು ಮೈಸೂರು ನಗರದ 2ನೇ ಅತಿ ದೊಡ್ಡ ನಿಲ್ದಾಣ ಅಶೋಕಪುರಂನಿಂದಲೇ ಹೊರಡಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ