Bengaluru Traffic Today: ಬೆಂಗಳೂರಿನಲ್ಲಿ ಇಂದು ಈ ರಸ್ತೆಗಳನ್ನು ಬಳಸದಿರಿ, ಸಂಚಾರ ರದ್ದು; ಪರಿಯಾಯ ಮಾರ್ಗ ಹೀಗಿದೆ
62ನೇ ಓಪನ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮ್ಯಾರಥಾನ್ ಈವೆಂಟ್ ಹಿನ್ನೆಲೆ ಬೆಂಗಳೂರು ಸಂಚಾರ ಪೊಲೀಸರು ಕಸ್ತೂರ್ಬಾ ರಸ್ತೆ, ಎಂಜಿ ರಸ್ತೆ, ಮಲ್ಯ ರಸ್ತೆ, ಡಾ ಬಿಆರ್ ಅಂಬೇಡ್ಕರ್ ರಸ್ತೆ ಮತ್ತು ಕ್ವೀನ್ಸ್ ರಸ್ತೆಯನ್ನು ಇಂದು ಬೆಳಿಗ್ಗೆ 11 ಗಂಟೆಯವರೆಗೆ ಬಂದ್ ಮಾಡಿದ್ದಾರೆ.
ಬೆಂಗಳೂರು, ಅ.8: 62ನೇ ಓಪನ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮ್ಯಾರಥಾನ್ ಈವೆಂಟ್ ಹಿನ್ನೆಲೆ ಬೆಂಗಳೂರು (Bangalore) ಸಂಚಾರ ಪೊಲೀಸರು ಕಸ್ತೂರ್ಬಾ ರಸ್ತೆ, ಎಂಜಿ ರಸ್ತೆ, ಮಲ್ಯ ರಸ್ತೆ, ಡಾ ಬಿಆರ್ ಅಂಬೇಡ್ಕರ್ ರಸ್ತೆ ಮತ್ತು ಕ್ವೀನ್ಸ್ ರಸ್ತೆಯನ್ನು ಇಂದು ಬೆಳಿಗ್ಗೆ 11 ಗಂಟೆಯವರೆಗೆ ಬಂದ್ ಮಾಡಿದ್ದಾರೆ.
ಪರ್ಯಾಯವಾಗಿ, ಹಲಸೂರಿನಿಂದ ಸಿಟಿ ಮಾರ್ಕೆಟ್ ಕಡೆಗೆ ಬರುವ ರಸ್ತೆ ಬಳಕೆದಾರರು ಮೇಯೋ ಹಾಲ್ ನಲ್ಲಿ ಎಡಕ್ಕೆ ಗರುಡ ಮಾಲ್ ಕಡೆಗೆ ಹೋಗಿ ಕಮಿಷನರೇಟ್ ರಸ್ತೆ ಮೂಲಕ ರಿಚ್ಮಂಡ್ ವೃತ್ತವನ್ನು ತಲುಪಬಹುದು. ನಗರದ ಮಾರುಕಟ್ಟೆಯಿಂದ ಹಲಸೂರು ಕಡೆಗೆ ತೆರಳುವವರು ದೇವಾಂಗ ಹಾಸ್ಟೆಲ್ ರಸ್ತೆ, ರಿಚ್‌ಮಂಡ್ ವೃತ್ತ, ರೆಸಿಡೆನ್ಸಿ ರಸ್ತೆ, ಮೇಯೊ ಹಾಲ್ ಮೂಲಕ ಹೋಗಬೇಕು.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ 190 ಕಿ.ಮೀ. ಸುರಂಗ ಮಾರ್ಗ ನಿರ್ಮಾಣ: ಡಿಕೆ ಶಿವಕುಮಾರ್
ಆಡುಗೋಡಿಯಿಂದ ಶಿವಾಜಿನಗರ ಕಡೆಗೆ ತೆರಳುವ ವಾಹನಗಳು ಅಶೋಕನಗರ ಸಿಗ್ನಲ್ ಲೈಟ್‌ನಲ್ಲಿ ಎಡ ತಿರುವು ಪಡೆದು ರಿಚ್‌ಮಂಡ್ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್, ಕೆಆರ್ ಸರ್ಕಲ್ ಮೂಲಕ ಮುಂದೆ ಸಾಗಬೇಕು. ಕೆಹೆಚ್ ರಸ್ತೆಯಿಂದ, ವಾಹನಗಳು ರಿಚ್ಮಂಡ್ ರಸ್ತೆ, ಹಡ್ಸನ್ ವೃತ್ತ ಮತ್ತು ಕೆಆರ್ ವೃತ್ತದ ಮೂಲಕ ಹೋಗಬೇಕು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗಲು, ಆಡುಗೋಡಿಯಿಂದ ವಾಹನಗಳು ರಿಚ್ಮಂಡ್ ರಸ್ತೆ, ಕೆ.ಜಿ.ರಸ್ತೆ ಮತ್ತು ಅರಮನೆ ರಸ್ತೆ ಮೂಲಕ ಚಲಿಸಬಹುದು. ಶಿವಾಜಿನಗರದಿಂದ ಸಿಟಿ ಮಾರ್ಕೆಟ್ ಕಡೆಗೆ, ವಾಹನಗಳು ಕ್ವೀನ್ಸ್ ರಸ್ತೆ, ಸಿಟಿಒ, ಕಬ್ಬನ್ ರಸ್ತೆ, ಮಣಿಪಾಲ್ ಸೆಂಟರ್, ವೆಬ್ಸ್ ಜಂಕ್ಷನ್ ಮೂಲಕ ಹೋಗಬೇಕು ಮತ್ತು ಗರುಡಾ ಮಾಲ್ ಕಡೆಗೆ ಮೇಯೋ ಹಾಲ್ ಜಂಕ್ಷನ್‌ನಿಂದ ಎಡಕ್ಕೆ ಸಾಗಬೇಕು. ಮೆಜೆಸ್ಟಿಕ್‌ನಿಂದ ಹೊಸೂರು ರಸ್ತೆ ಕಡೆಗೆ, ವಾಹನಗಳು ಹಡ್ಸನ್ ವೃತ್ತ, ಸುಬ್ಬಯ್ಯ ವೃತ್ತ, ಲಾಲ್‌ಬಾಗ್ ಮೂಲಕ ಮುಂದೆ ಸಾಗಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ