ಬೆಂಗಳೂರು: ಪ್ರೀತಿಗೆ ಮನೆಯವರ ವಿರೋಧ; ಮನನೊಂದ ಯುವತಿ ನೇಣಿಗೆ ಶರಣು
ನೆಲಮಂಗಲ ಬಸವೇಶ್ವರ ಪದವಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ವೇಳೆ, ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ಪ್ರೀಯಕರ ಸಂತೋಷ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ, ಇದಕ್ಕೆ ಮನೆಯವರು ವಿರೋಧ ಪಡಿಸಿದ ಹಿನ್ನಲೆ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬೆಂಗಳೂರು, ಅ.07: ಪ್ರೀತಿಗೆ ಮನೆಯವರೇ ಅಡ್ಡಿ ಎಂದು ತಿಳಿದು ಯುವತಿಯೋರ್ವಳು ನೇಣಿಗೆ ಶರಣಾದ ಘಟನೆ ಬೆಂಗಳೂರಿನ (Bengaluru) ಟಿ.ದಾಸರಹಳ್ಳಿಯಲ್ಲಿ ನಡೆದಿದೆ. ಸ್ನೇಹ(20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಇವರು ನೆಲಮಂಗಲ ಬಸವೇಶ್ವರ ಪದವಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದು, ಈ ವೇಳೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ಪ್ರೀಯಕರ ಸಂತೋಷ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ, ಇದಕ್ಕೆ ಮನೆಯವರು ವಿರೋಧ ಪಡಿಸಿದ ಹಿನ್ನಲೆ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪ್ರೀತಿ ವಿಷಯ ತಿಳಿದು ಅಜ್ಜಿ ಮನೆಗೆ ಶಿಪ್ಟ್ ಮಾಡಿದ್ದ ಪೋಷಕರು
ಹೌದು, ಆಗಸ್ಟ್ 16 ರಂದು ಕಾಲೇಜಿನಿಂದಲೇ ಸ್ನೇಹ, ಯುವಕನೊಂದಿಗೆ ಪರಾರಿಯಾಗಿದ್ದರು. ಈ ಸಂಬಂಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಮೂರು ದಿನಗಳ ಬಳಿಕ ಜೋಡಿಯನ್ನು ಪೊಲೀಸರು ಮಂಡ್ಯದಲ್ಲಿ ಪತ್ತೆ ಹಚ್ಚಿದರು. ಆ ಬಳಿಕ ಯುವತಿ ಪೋಷಕರು ಸ್ನೇಹಳನ್ನು ನೆಲಮಂಗಲದಿಂದ ಅಜ್ಜಿ ಮನೆಗೆ ಕಳುಹಿಸಿದ್ದರು. ಇದಾದ ಕೆಲ ತಿಂಗಳು ಬೇರೆ ಬೇರೆಯಾಗಿದ್ದ ಸಂತೋಷ್ ಮತ್ತು ಯುವತಿ ಸ್ನೇಹ. ಇದೀಗ ಎರಡು ತಿಂಗಳ ಬಳಿಕ ಅಜ್ಜಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ತುಮಕೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಬೆಂಗಳೂರಿನಿಂದ ಹೋಗಿ ರೈಲಿಗೆ ತಲೆ ಕೊಟ್ರು
ಲಾರಿ, ಬೈಕ್ ಡಿಕ್ಕಿ; ಫುಡ್ ಡೆಲಿವರಿಬಾಯ್ ದುರ್ಮರಣ
ಬೆಂಗಳೂರು: ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಫುಡ್ ಡೆಲಿವರಿಬಾಯ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೈಸ್ ರಸ್ತೆಯಲ್ಲಿ ನಡೆದಿದೆ. ರಮೇಶ್ ನಾಯ್ಕ್(37) ಮೃತ ವ್ಯಕ್ತಿ. ಇತ ಗ್ರಾಹಕರಿಗೆ ಊಟ ತೆಗೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಲಾರಿ ಚಾಲಕನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ