4 ವರ್ಷದ ಬಳಿಕ 4.32 ಕೋಟಿ ರೂ. ವೆಚ್ಚದಲ್ಲಿ ಮರಗಳ ಗಣತಿ ಮಾಡಲು ಮುಂದಾದ ಬಿಬಿಎಂಪಿ

ಕಳೆದ 2017ರಲ್ಲಿ ಐಐಎಸ್​ಸಿ ವಿಜ್ಞಾನಿಗಳು ಮರಗಳ ಗಣತಿ ಮಾಡಿದ್ರು.‌ ಈ ವೇಳೆ 100 % ಗೆ 3% ರಷ್ಟು ಹಸಿರು ಇರುವ ಬಗ್ಗೆ ಮರಗಣತಿಯಲ್ಲಿ ಮಾಹಿತಿ ಸಿಕ್ಕಿತ್ತು. ಆದಾದ ಬಳಿಕ ಹೈ ಕೋರ್ಟ್ ಮತ್ತೊಮ್ಮೆ ಮತಗಣತಿ ಮಾಡಲು ಸೂಚಿಸಿತ್ತು.‌ ಆದ್ರೆ ಬಿಬಿಎಂಪಿ ನಾಲ್ಕು ವರ್ಷದಿಂದ ಕಾಲಾಹರಣ ಮಾಡಿ ಈ ವರ್ಷ ಮರಗಣತಿ ಮಾಡಲು ಮುಂದಾಗಿದ್ದು, ಟೆಂಡರ್ ಕರೆಯಲು ಮುಂದಾಗಿದೆ.

4 ವರ್ಷದ ಬಳಿಕ 4.32 ಕೋಟಿ ರೂ. ವೆಚ್ಚದಲ್ಲಿ ಮರಗಳ ಗಣತಿ ಮಾಡಲು ಮುಂದಾದ ಬಿಬಿಎಂಪಿ
ಸಾಂದರ್ಭಿಕ ಚಿತ್ರ
Follow us
Poornima Agali Nagaraj
| Updated By: ಆಯೇಷಾ ಬಾನು

Updated on: Oct 07, 2023 | 2:57 PM

ಬೆಂಗಳೂರು, ಅ.07: ಸಿಲಿಕಾನ್ ಸಿಟಿ ದಿನದಿಂದ‌ ದಿನಕ್ಕೆ ಕಾಂಕ್ರೀಟ್ ಕಾಡಾಗಿ ಮಾರ್ಪಾಡಾಗುತ್ತಿದ್ದು, ಮರಗಿಡಗಳ ಸಂಖ್ಯೆನೇ ಕಡಿಮೆಯಾಗಿ ಹೋಗಿದೆ. ಹೀಗಾಗಿ ಹೈಕೋರ್ಟ್ ಮರಗಣತಿ ಮಾಡಲು ಹೇಳಿದ್ದು ನಾಲ್ಕು ವರ್ಷದ ಬಳಿಕ‌ ಬಿಬಿಎಂಪಿ (BBMP) ಮರಗಣತಿ ಮಾಡಲು ಸಜ್ಜಾಗಿದೆ (Tree Census).‌ ರಾಜಾಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದ್ದು, ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆದರೆ ಕಾಮಾಗಾರಿಗಳನ್ನ ಮಾಡುವ ಸಲುವಾಗಿ ಮರಗಳ ಮಾರಾಣ ಹೋಮವೇ ನಡೆಯುತ್ತಿದ್ದು, ಇತ್ತೀಚೆಗಂತೋ ಸಿಲಿಕಾನ್ ಸಿಟಿ (Bengaluru) ಕಾಂಕ್ರೀಟ್ ಕಾಡಾಗಿ ಪರಿಣಮಿಸುತ್ತಿದೆ.

ಕಳೆದ 2017ರಲ್ಲಿ ಐಐಎಸ್​ಸಿ ವಿಜ್ಞಾನಿಗಳು ಮರಗಳ ಗಣತಿ ಮಾಡಿದ್ರು.‌ ಈ ವೇಳೆ 100 % ಗೆ 3% ರಷ್ಟು ಹಸಿರು ಇರುವ ಬಗ್ಗೆ ಮರಗಣತಿಯಲ್ಲಿ ಮಾಹಿತಿ ಸಿಕ್ಕಿತ್ತು. ಆದಾದ ಬಳಿಕ ಹೈ ಕೋರ್ಟ್ ಮತ್ತೊಮ್ಮೆ ಮತಗಣತಿ ಮಾಡಲು ಸೂಚಿಸಿತ್ತು.‌ ಆದ್ರೆ ಬಿಬಿಎಂಪಿ ನಾಲ್ಕು ವರ್ಷದಿಂದ ಕಾಲಾಹರಣ ಮಾಡಿ ಈ ವರ್ಷ ಮರಗಣತಿ ಮಾಡಲು ಮುಂದಾಗಿದ್ದು, ಟೆಂಡರ್ ಕರೆಯಲು ಮುಂದಾಗಿದೆ.

ಹೌದು, ಮರಗಳ ಗಣತಿಗಾಗಿ 4.32 ಕೋಟಿ ರೂ ಮೀಸಲಿಟ್ಟಿದ್ದು, ಗಣತಿ ಕಾರ್ಯಕ್ಕಾಗಿ ಚದರ ಕಿಮೀ ಆಧಾರದಲ್ಲಿ 8 ವಲಯಗಳನ್ನಾಗಿ ವಿಂಗಡಿಸಿರುವ ಬಿಬಿಎಂಪಿ ಅರಣ್ಯ ವಿಭಾಗವು ಪ್ರತಿ ವಲಯಕ್ಕೆ 48.80 ರೂ. ನಿಗದಿ ಪಡಿಸಿದೆ. ಆರು ತಿಂಗಳ ಅವಧಿಯಲ್ಲಿ ಗಣತಿ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಿದ್ದು, ಸಧ್ಯದಲ್ಲೆ ಟೆಂಡರ್ ಆಹ್ವಾನಿಸಲಾಗುತ್ತದ್ಯಂತೆ. ಈ ಗಣತಿಯಲ್ಲಿ ಮರಗಳ ಗಾತ್ರ, ಬಣ್ಣ, ಜಾತಿ, ವಯಸ್ಸುಗಳ ಆಧಾರದ ಮೇಲೆ ನಡೆಯಲಿದ್ದು, ಜನರ ಆಧಾರದ ಮೇಲೆ ಒಟ್ಟು ಎಷ್ಟು ಮರಗಳಿವೆ ಎನ್ನುವುದರ ಆಧಾರದ ಮೇಲೆ ಈ ಮರಗಣತಿ ನಡೆಯಲಿದೆ ಅಂತ ಬಿಬಿಎಂಪಿ ಅರಣ್ಯ ಅಧಿಕಾತಿಗಳು ಟಿವಿ9ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Rosemary Oil: ರೋಸ್ಮರಿ ಎಣ್ಣೆ ಬಳಸಿ, ಕೂದಲ ಸಮಸ್ಯೆಗಳಿಗೆ ಗುಡ್​ಬೈ ಹೇಳಿ

ಅಂದಹಾಗೇ, ಬೆಂಗಳೂರಿನಲ್ಲಿ 2017 ರಲ್ಲಿ ಐಐಎಸ್​ಸಿ ತಜ್ಞ ಟಿವಿ ರಾಮಾಚಂದ್ರ ಅವರ ನೇತ್ವದಲ್ಲಿ ಮರಗಣತಿ ಮಾಡಲಾಗಿತ್ತು.‌ ಈ ವೇಳೆ ಒಂದು ಲಕ್ಷವೆಚ್ಚದಲ್ಲಿ ನಾಲ್ಕು ತಿಂಗಳುಗಳ ಕಾಲ ಮರಗಣತಿಯನ್ನ ಮಾಡಲಾಗಿತ್ತು. ಆಗ 14 ಲಕ್ಷದ 68 ಸಾವಿರದಷ್ಡು ಮರಗಳು ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಬೆಂಗಳೂರು ಜನರ ಪಾಪುಲೇಷನ್ 95 ಲಕ್ಷದಷ್ಟು ಇತ್ತು. ಪ್ರತಿ ಏಳು ಮನುಷ್ಯನಿಗೆ ಒಂದು ಮರ ಇರುವುದು ತಿಳಿದುಬಂದಿತ್ತು.‌ ಪ್ರತಿದಿನ 540 ಗ್ರಾಂ ನಿಂದ 900 ಗ್ರಾಂ ನಷ್ಟು ಕಾರ್ಬಾನ್ ಡೈ ಆಕ್ಸೈಡ್ ಹೊರಗೆ ಹಾಕ್ತಾರೆ. ಸಧ್ಯ ಒಂದು ಮರ 10 ಮರಗಳು ಒಂದು ಮಗುವಿಗೆ ಸಮವಾಗಿರುತ್ತೆ.‌ ಆದ್ರೆ ಇತ್ತೀಚಿಗೆ ಮರಗಳನ್ನ ಕಡಿಯುತ್ತಿರುವುದರಿಂದ ಆ್ಯಕ್ಸಿಜನ್ ಗೆ ಕೊರತೆ ಉಂಟಾಗುತ್ತಿದೆ.‌ ಅಲ್ಲದೇ 50 ವರ್ಷ ಮೇಲ್ಪಟ್ಟವರು ಆ್ಯಕ್ಸಿಜನ್ ಸಿಲಿಂಡರ್ ಬಳಕೆ ಮಾಡುತ್ತಿರುವುದು ಕಂಡುಬರುತ್ತಿದ್ದು, ನೀರಿನ ಸಮಸ್ಯೆಯು ಉಂಟಾಗುತ್ತಿದೆ.

ಇದು ವಾಸ ಮಾಡಲು ಯೋಗ್ಯವಲ್ಲದ ಜಾಗವಾಗಿ ಮಾರ್ಪಾಡುತ್ತಿದೆ.‌ ಕಾಮಾಗಾರಿಗಳನ್ನ ಮಾಡುವಾಗ ಮಿನಿ ಫಾರೆಸ್ಟ್ ಗಳನ್ನ ಮಾಡುವುದರ ಮೂಲಕ ಹಸಿರೀಕರಣ ಮಾಡಬಹುದು. ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟವು ಕುಸಿಯುತ್ತಿದ್ದು, ಮರಗಳು ಇಲ್ಲದಿದ್ದರೆ ಅವನತಿಗೆ ಕಾರಣವಾಗಬಹುದು. ಹೀಗಾಗಿ ಬಿಬಿಎಂಪಿ ಅಧಿಕಾರಿಗಳ ಮರಗಳನ್ನ ನೆಡುವಾಗ ವೈಜ್ಞಾನಿಕವಾಗಿ ಮಾಡಬೇಕು ಅಂತ ಐಐಎಸ್​ಸಿ ತಜ್ಞ ಟಿವಿ ರಾಮಚಂದ್ರ ಅವರು ಸಲಹೆ ನೀಡಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್