ಟಿವಿ9 ಮತ್ತೊಂದು ಇಂಪ್ಯಾಕ್ಟ್: ಬಿಎಂಟಿಸಿಯ 10 ಭ್ರಷ್ಟ ಅಧಿಕಾರಿಗಳು ಅಮಾನತು

ಬಿಎಂಟಿಸಿ (BMTC) ದಕ್ಷಿಣ ವಿಭಾಗದ ಬನಶಂಕರಿ ಡಿಪೋ-20ರ ಕಮರ್ಷಿಯಲ್ ವಿಭಾಗದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಭದ್ರತಾ ‌ಮತ್ತು ಜಾಗೃತ ‌ದಳದ ತನಿಖೆಯಲ್ಲಿ 10 ನೌಕರರ ಅಕ್ರಮ ಬಯಲಾಗಿದ್ದು, ಎಲ್ಲರನೂ ಬಿಎಂಟಿಸಿ ಸಸ್ಪೆಂಡ್​​ ಮಾಡಿದೆ.

ಟಿವಿ9 ಮತ್ತೊಂದು ಇಂಪ್ಯಾಕ್ಟ್: ಬಿಎಂಟಿಸಿಯ 10 ಭ್ರಷ್ಟ ಅಧಿಕಾರಿಗಳು ಅಮಾನತು
ಪ್ರಾತಿನಿಧಿಕ ಚಿತ್ರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Oct 07, 2023 | 6:58 PM

ಬೆಂಗಳೂರು, ಅ.07: ಬಿಎಂಟಿಸಿ (BMTC) ದಕ್ಷಿಣ ವಿಭಾಗದ ಬನಶಂಕರಿ ಡಿಪೋ-20ರ ಕಮರ್ಷಿಯಲ್ ವಿಭಾಗದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಭದ್ರತಾ ‌ಮತ್ತು ಜಾಗೃತ ‌ದಳದ ತನಿಖೆಯಲ್ಲಿ 10 ನೌಕರರ ಅಕ್ರಮ ಬಯಲಾಗಿದ್ದು, ಎಲ್ಲರನೂ ಬಿಎಂಟಿಸಿ ಸಸ್ಪೆಂಡ್​​ ಮಾಡಿದೆ. ಇದರಲ್ಲಿ ಒಂಬತ್ತು ಅಧಿಕಾರಿಗಳು ತಮ್ಮ ‌ತಂದೆ, ತಾಯಿಯ ಅನುಕಂಪದ ಆಧಾರದ ಮೇಲೆ ಬಿಎಂಟಿಸಿ ಕೆಲಸಕ್ಕೆ ಸೇರಿದ್ದರು. ಆ ಬಳಿಕ ಕಂಡಕ್ಟರ್, ಡ್ರೈವರ್ ಹಾಗೂ ‌ಮೆಕ್ಯಾನಿಕ್​ಗಳಿಗೆ ಮಾನಸಿಕವಾಗಿ ಹಿಂಸೆ ನೀಡಿ, ಅವರಿಂದ ಪ್ರತಿ ವಾರ ಐನೂರು, ಸಾವಿರ ಕಲೆಕ್ಷನ್ ಮಾಡಿ, ಒಟ್ಟು ಹದಿನೇಳು ಲಕ್ಷ ರೂಪಾಯಿ ಹಣವನ್ನು ಬಿಟ್ ಕಾಯಿನ್‌ ದಂಧೆಯಲ್ಲಿ ಹೂಡಿಕೆ ಮಾಡಿದ್ದರು.

ಅಮಾನತ್ತಾದ ಅಧಿಕಾರಿಗಳು

  1. ಮಹೇಶ್.ವಿ, (ಕಿರಿಯ ಸಹಾಯಕ )
  2. ಪವನ್‌ಕುಮಾರ್.ಎಂ, (ಕಿರಿಯ ಸಹಾಯಕ)
  3. ರಘುವರನ್, (ಕಿರಿಯ ಸಹಾಯಕ)
  4. ಸತೀಶ್ ಪತ್ತಾರ್, (ಕಿರಿಯ ಸಹಾಯಕ)
  5. .ಡಿ.ಸಂತೋಷಕುಮಾರ್, (ಕೆ.ಎಸ್.ಟಿ. ಕಾನ್ಸ್‌ಟೇಬಲ್)
  6. ಶ್ರೀ ಮದನ್, (ಕಿರಿಯ ಸಹಾಕ)
  7. ಅರುಣ್‌ಕುಮಾರ್, (ಕಿರಿಯ ಸಹಾಯಕ)
  8. ವೀರೇಶ್, (ಕಿರಿಯ ಸಹಾಯಕ)
  9. ಪಿ.ಮಂಜುನಾಥ, (ಕಿರಿಯ ಸಹಾಯಕ)
  10. ರಾಕೇಶ್, (ಕಿರಿಯ ಸಹಾಯಕ)

ಇದನ್ನೂ ಓದಿ:ಕೋಟಿ ಕೋಟಿ ಹಣ ಅಕ್ರಮ: ಬಿಎಂಟಿಸಿಯ 7 ಅಧಿಕಾರಿಗಳ ವಿರುದ್ಧ ಎಫ್ಐಆರ್, ಓರ್ವ ಆಫೀಸರ್ ಅರೆಸ್ಟ್

ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟಿ ಕೋಟಿ ಹಣ ವಂಚನೆ

ಇನ್ನು ಇಂತಹುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅ.04 ರಂದು ಬಿಎಂಟಿಸಿ ಏಳು ಅಧಿಕಾರಿಗಳ ವಿರುದ್ದ ಎಫ್​ಐಆರ್​ ದಾಖಲಾಗಿದ್ದು, ಓರ್ವ ಅಧಿಕಾರಿಯನ್ನು ಅರೆಸ್ಟ್​ ಮಾಡಲಾಗಿತ್ತು. ಹಿಂದಿನ ಬಿಎಂಟಿಸಿ ಎಂಡಿ ಶಿಖಾ ಮತ್ತು ಹಿಂದಿನ ಬಿಎಂಟಿಸಿಯ ಭದ್ರತಾ ಮತ್ತು ಜಾಗೃತ ದಳದ ನಿರ್ದೇಶಕ ಅರುಣ್. ಕೆ ಸಹಿಗಳನ್ನು ಕಲರ್ ಜೆರಾಕ್ಸ್ ಮಾಡುವ ಮೂಲಕ ನಕಲಿ ದಾಖಲೆಗಳನ್ನು ಸೃಷ್ಟಿ ಕೋಟ್ಯಂತರ ಹಣ ವಂಚನೆ ಮಾಡಿದ್ದಾರೆ  ಎಂದು ಆರೋಪಿಸಲಾಗಿತ್ತು. ಅಸಿಸ್ಟೆಂಟ್ ಸೆಕ್ಯುರಿಟಿ ಅಂಡ್ ವಿಜಿಲೆನ್ಸ್ ಅಧಿಕಾರಿ ಸಿ.ಕೆ ರಮ್ಯ ನೀಡಿದ ದೂರಿನ ಅನ್ವಯ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೋಲಿಸ್ ಠಾಣೆಯಲ್ಲಿ ಏಳು ಜನ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಬಳಿಕ ಎ1 ಆರೋಪಿ ಶ್ರೀರಾಮ್ ಮುಲ್ಕಾವನ್ ಎನ್ನುವರನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದರು.

ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ  ‘ಟಿವಿ‌9 ರಹಸ್ಯ ಕಾರ್ಯಾಚರಣೆ ಬಳಿಕ BMTC ಎಂಡಿ ತನಿಖೆಗೆ ಆದೇಶಿಸಿದ್ದರು. ಸಾಕಷ್ಟು ಬಾರಿ ವಾರ್ನಿಂಗ್ ನೀಡಿದರೂ ಅಲ್ಲಲ್ಲಿ ಅಕ್ರಮ ನಡೆಯುತ್ತಲೆ ಇತ್ತು. ಅಧಿಕಾರಿಗಳು ಗೂಗಲ್​ಪೇ, ಫೋನ್​ಪೇ ಮೂಲಕ 4-5 ಲಕ್ಷ ರೂ. ಲಂಚ ತೆಗೆದುಕೊಂಡಿರುವುದು ಸಾಬೀತಾಗಿದೆ. ಈ ಪ್ರಕರಣ ಸಂಬಂಧ 7 ಅಧಿಕಾರಿಗಳು, ಸಿಬ್ಬಂದಿ ಅಮಾನತು ಮಾಡಿದ್ದಾರೆ. ಅಮಾನತು ಮಾಡಿದ್ರೆ ಸಾಕಾಗಲ್ಲ, ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:27 pm, Sat, 7 October 23

ಮನೆಯೊಂದರ ಬೆಡ್​ರೂಂನಲ್ಲಿ 2 ಹಾವುಗಳ ಜಗಳ; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್
ಮನೆಯೊಂದರ ಬೆಡ್​ರೂಂನಲ್ಲಿ 2 ಹಾವುಗಳ ಜಗಳ; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ