Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಲ್ಲಕ್ಕಿ ಉತ್ಸವ ಬಸ್: ಬಲಭಾಗದ ಸ್ಲೀಪರ್ ಸೀಟಲ್ಲಿ ಗಂಡ-ಹೆಂಡತಿ ಮಲಗಬಹುದೆಂದು ಶಿವಕುಮಾರ್ ಹೇಳಿದಾಗ ಸಿದ್ದರಾಮಯ್ಯ ಕಷ್ಟಪಟ್ಟು ನಗು ತಡೆದರು!

ಪಲ್ಲಕ್ಕಿ ಉತ್ಸವ ಬಸ್: ಬಲಭಾಗದ ಸ್ಲೀಪರ್ ಸೀಟಲ್ಲಿ ಗಂಡ-ಹೆಂಡತಿ ಮಲಗಬಹುದೆಂದು ಶಿವಕುಮಾರ್ ಹೇಳಿದಾಗ ಸಿದ್ದರಾಮಯ್ಯ ಕಷ್ಟಪಟ್ಟು ನಗು ತಡೆದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 07, 2023 | 1:22 PM

ಶಿವಕುಮಾರ್ ಮಾತು ಕೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಗು ಒತ್ತರಿಸಿ ಬರುತ್ತಾದರೂ ಪಕ್ಕದಲ್ಲೇ ಟಿವಿ9 ಕೆಮೆರಾಮನ್ ಇದ್ದಿದ್ದುರಿಂದ ಸಣ್ಣದಾಗಿ ಅಂದರೆ ಕಂಡೂ ಕಾಣದ ಹಾಗೆ ಮುಗಳ್ನುಗುತ್ತಾರೆ! ಬಸ್ಸಲ್ಲಿ ಇವರಿಬ್ಬರಲ್ಲದೆ, ರಾಮಲಿಂಗಾರೆಡ್ಡಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೆಎಸ್ ಆರ್ ಟಿಸಿ ಎಂಡಿ ವಿ ಅನ್ಬುಕುಮಾರ್ ಮೊದಲಾದವರಿದ್ದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ಕೆಎಸ್ ಆರ್ ಟಿಸಿಯ ಹೊಸ ಐಷಾರಾಮಿ ಪಲ್ಲಕ್ಕಿ ಉತ್ಸವ ಬಸ್ ಸೇವೆಯನ್ನು ಉದ್ಘಾಟಿಸಿದ ಬಳಿಕ ವಾಹನದಲ್ಲಿರುವ ಸೌಲಭ್ಯಗಳನ್ನು ವೀಕ್ಷಿಸಿದರು. ಗಮನಿಸಬೇಕಾದ ಅಂಶವೆಂದರೆ, ಬಸ್ಸಿನ ವಿಶೇಷತೆಗಳ ಬಗ್ಗೆ ಮುಖ್ಯಮಂತ್ರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಬದಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿವರಣೆ ನೀಡಿದರು. ಪಲ್ಲಕ್ಕಿ ಉತ್ಸವದ ನಾನ್ ಎಸಿ ಬಸ್ ಗಳಲ್ಲಿ ಸ್ಲೀಪರ್ ವ್ಯವಸ್ಥೆ ಇದೆ. ಬಸ್ಸಿನ ಬಲಭಾಗದಲ್ಲಿ ಇಬ್ಬರು ಮಲಗಲು ವ್ಯವಸ್ಥೆ ಇದ್ದರೆ ಎಡಭಾಗದ ಸ್ಲೀಪರ್ ನಲ್ಲಿ ಒಬ್ಬರು ಮಲಗಬಹುದು. ಸ್ಲೀಪರ್ ಗಳ ವಿವರಣೆ ನೀಡುವಾಗ ಶಿವಕುಮಾರ್ ತಮ್ಮ ಎಡಭಾಗದ ಕಡೆ ಕೈ ಮಾಡಿ, ಇದು ಇಬ್ಬರು ಮಲಗುವ ಸ್ಲೀಪರ್ ತೋರಿಸಿ ಸರ್, ಇದರಲ್ಲಿ ಗಂಡ ಹೆಂಡತಿ ಮಲಗಬಹುದು ಅನ್ನತ್ತಾರೆ! ಅವರ ಮಾತು ಕೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಗು ಒತ್ತರಿಸಿ ಬರುತ್ತಾದರೂ ಪಕ್ಕದಲ್ಲೇ ಟಿವಿ9 ಕೆಮೆರಾಮನ್ ಇದ್ದಿದ್ದುರಿಂದ ಸಣ್ಣದಾಗಿ ಅಂದರೆ ಕಂಡೂ ಕಾಣದ ಹಾಗೆ ಮುಗಳ್ನುಗುತ್ತಾರೆ! ಬಸ್ಸಲ್ಲಿ ಇವರಿಬ್ಬರಲ್ಲದೆ, ರಾಮಲಿಂಗಾರೆಡ್ಡಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೆಎಸ್ ಆರ್ ಟಿಸಿ ಎಂಡಿ ವಿ ಅನ್ಬುಕುಮಾರ್ ಮೊದಲಾದವರಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ