ಇಂದಿನಿಂದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಪ್ರಯಾಣಿಕರ ಸುಖಕರ ಪಯಣಕ್ಕಾಗಿ ಒದಗಿಸುತ್ತಿದೆ ‘ಪಲ್ಲಕ್ಕಿ ಉತ್ಸವ!’
ಪಲ್ಲಕ್ಕಿ ಉತ್ಸವ ಬಸ್ ಗಳು ಪಲ್ಲಕ್ಕಿಯಲ್ಲಿ ಸಾಗುವಾಗ ಸಿಗಬಹುದಾಗಿದ್ದ ಸಂತೋಷವನ್ನು ಪ್ರಯಾಣಿಕರಿಗೆ ನೀಡುತ್ತವೆ; ಹಾಗಾಗಿ, ಸಂತೋಷ ಪ್ರಯಾಣಿಸುತ್ತಿದೆ ಎಂಬ ಟ್ಯಾಗ್ ಲೈನ್ ವಾಹನಗಳಿಗೆ ನೀಡಲಾಗಿದೆ. ಬಸ್ ಗಳ ಪಾರ್ಶ್ವದಲ್ಲಿ ಪಲ್ಲಕ್ಲಿ ಹೊತ್ತಿರುವ ಚಿತ್ರವನ್ನೂ ನೋಡಬಹುದು. ಅನ್ಬುಕುಮಾರ್ ಹೇಳುವ ಹಾಗೆ ಬಸ್ ಅರಾಮದಾಯಕ ಪ್ರಯಾಣದ ಫೀಲ್ ಪ್ರಯಾಣಿಕರಿಗೆ ನೀಡುತ್ತವೆ ಮತ್ತು ಅವರ ಪರ್ಸ್ ಮೇಲೆ ಹೊರೆಯೆನಿಸಲ್ಲ.
ಬೆಂಗಳೂರು: ಕರ್ನಾಟಕ ಸರ್ಕಾರ ಶಕ್ತಿ ಯೋಜನೆ (Shakti Scheme) ಅಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದ್ದರೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಷ್ಟ ಅನುಭವಿಸುತ್ತಿರುವಂತೇನೂ ಕಾಣುತ್ತಿಲ್ಲ. ಈ ವಿಡಿಯೋದಲ್ಲಿ ನೀವು ನೋಡುವ ಹಾಗೆ ಕೆಎಸ್ ಅರ್ ಟಿಸಿ ಪಲ್ಲಕ್ಕಿ ಉತ್ಸವ (Pallakki uTsava) ಹೆಸರಲ್ಲಿ ಹೊಸ ಮಾದರಿಯ ಐಶಾರಾಮಿ ಎಸಿ ಮತ್ತು ನಾನ್ ಎಸಿ ಬಸ್ ಗಳನ್ನು ಲಾಂಚ್ ಮಾಡಿದೆ. ಇವು ಸ್ಲೀಪರ್ ಕೋಚ್ ಗಳು. 5-6 ಗಂಟೆಗಳಷ್ಟು ಅವಧಿ ಪ್ರಯಾಣಕ್ಕೆ ಸ್ಲೀಪರ್ ವ್ಯವಸ್ಥೆಯ ಬಸ್ ಬೇಕೆಂದು ಸಾರ್ವಜನಿಕರ ಆಗ್ರಹ ಮೇರೆಗೆ ಬಸ್ ಗಳನ್ನು ರಸ್ತೆಗಿಳಿಸಲಾಗುತ್ತಿದೆ ಎಂದು ಸಂಸ್ಥೆಯ ಎಂಡಿ ಅನ್ಬುಕುಮಾರ್ (V Anbukumar) ಹೇಳುತ್ತಾರೆ. ಅವರೊಂದಿಗೆ ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಹೊಸ ಮಾದರಿ ಬಸ್ ಗಳ ಮಾತಾಡಿದ್ದು ಅಧಿಕಾರಿ ಎಲ್ಲ ವಿವರಣೆ ನೀಡಿದ್ದಾರೆ. ಪಲ್ಲಕ್ಕಿ ಉತ್ಸವ ಬಸ್ ಗಳು ಪಲ್ಲಕ್ಕಿಯಲ್ಲಿ ಸಾಗುವಾಗ ಸಿಗಬಹುದಾಗಿದ್ದ ಸಂತೋಷವನ್ನು ಪ್ರಯಾಣಿಕರಿಗೆ ನೀಡುತ್ತವೆ; ಹಾಗಾಗಿ, ಸಂತೋಷ ಪ್ರಯಾಣಿಸುತ್ತಿದೆ ಎಂಬ ಟ್ಯಾಗ್ ಲೈನ್ ವಾಹನಗಳಿಗೆ ನೀಡಲಾಗಿದೆ.
ಬಸ್ ಗಳ ಪಾರ್ಶ್ವದಲ್ಲಿ ಪಲ್ಲಕ್ಲಿ ಹೊತ್ತಿರುವ ಚಿತ್ರವನ್ನೂ ನೋಡಬಹುದು. ಅನ್ಬುಕುಮಾರ್ ಹೇಳುವ ಹಾಗೆ ಬಸ್ ಅರಾಮದಾಯಕ ಪ್ರಯಾಣದ ಫೀಲ್ ಪ್ರಯಾಣಿಕರಿಗೆ ನೀಡುತ್ತವೆ ಮತ್ತು ಅವರ ಪರ್ಸ್ ಮೇಲೆ ಹೊರೆಯೆನಿಸಲ್ಲ. ಅಂದಹಾಗೆ, ಇವು ಸ್ಲೀಪರ್ ವ್ಯವಸ್ಥೆಯ ವಾಹನಗಳಾಗಿರುವುದರಿಂದ ಶಕ್ತಿ ಸ್ಕೀಮ್ ಅನ್ವಯವಾಗಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ