ಪರೀಕ್ಷಾ ಅಕ್ರಮ ತಡೆಯಲು ದೇಶದಲ್ಲಿಯೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆಗೆ ಮುಂದಾದ ರಾಜೀವ್ ಗಾಂಧಿ ವಿಶ್ವವಿದ್ಯಾಲಯ
ಈ ವರ್ಷ ಚನ್ನಾಗಿ ಓದಿಲ್ಲ ಅಂತಾ ಹೆಂಗೋ ಕಾಫಿ ಮಾಡ್ಕೊಂಡು ಪರೀಕ್ಷೆಯಲ್ಲಿ ಪ್ರೆಂಡ್ಸ್ ನ ಕೇಳಿಕೊಂಡು ಅಷ್ಟೋ ಇಷ್ಟೊ ಉತ್ತರ ಬರೆದು ಪಾಸ್ ಆಗಿಬೀಡೋನಾ ಅಂತಾ ಪ್ಲಾನ್ ಮಾಡಿದ್ರೆ ಈಗಲೇ ಆ ಆಲೋಚನೆ ಕೈಬಿಟ್ಟು ಬಿಡಿ ಯಾಕಂದ್ರೆ ಇನ್ಮುಂದೆ ಪರೀಕ್ಷಾ ಕೊಠಡಿಯಲ್ಲಿ ಕೆಮ್ಮಿದ್ರೂ ಸಿಕ್ಕಿಬೀಳ್ತೀರಿ ಹುಷಾರ್.
ಬೆಂಗಳೂರು, ಅ.08: ಇತ್ತೀಚಿನ ದಿನಗಳಲ್ಲಿ ಪರೀಕ್ಷೆಯಲ್ಲಿ (Exams) ನಕಲು ಹೆಚ್ಚಾಗುತ್ತಿದೆ. ನಕಲು ಜೊತೆಗೆ ತಂತ್ರಜ್ಞಾನಗಳ ಬಳಕೆ ಮೂಲಕ ಕಾಪಿ ಮಾಡಲಾಗುತ್ತಿದೆ. ಹೀಗಾಗಿ ಎಕ್ಸಾಂನಲ್ಲಿ ಕಾಪಿ ಮಾಡುವುದನ್ನು ಪತ್ತೆ ಮಾಡಲು ಹಾಗೂ ಪರೀಕ್ಷಾ ಅಕ್ರಮ ತಡೆಯುವುದಕ್ಕಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ಎಐ ತಂತ್ರಜ್ಞಾನ (AI) ಬಳಕೆಗೆ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ (Rajiv Gandhi University of Health Sciences) ಮುಂದಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಎಐ ತಂತ್ರಜ್ಞಾನ ಬಳಕೆಗೆ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮುಂದಾಗಿದ್ದು ಇನ್ಮುಂದೆ ಪರೀಕ್ಷಾ ಕೊಠಡಿಯಲ್ಲಿನ ನಕಲು ತಡೆಗೆ ಮಾಸ್ಟರ್ ಪ್ಲಾನ್ ಮಾಡಿದೆ.
ಪರೀಕ್ಷಾ ಅಕ್ರಮ ತಡೆಯುವುದಕ್ಕಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆಗೆ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಮುಂದಾಗಿದೆ. ಕೊಠಡಿಯಲ್ಲಿ ಪಿಸುಮಾತಿನಲ್ಲಿ ಮಾತನಾಡುವ ಮಾತುಗಳು ಹಾಗೂ ಅಕ್ರಮವಾಗಿ ಅಭ್ಯರ್ಥಿಯು ಬದಲಿ ಅಭ್ಯರ್ಥಿ ಪರೀಕ್ಷೆ ಬರೆಯುತ್ತಿದ್ದರೆ ಈ ತಂತ್ರಜ್ಞಾನ ಪತ್ತೆ ಹಚ್ಚಲಿದೆ. ತಂತ್ರಜ್ಞಾನದಿಂದ ಪರೀಕ್ಷಾ ಕೇಂದ್ರಕ್ಕೆ ಬದಲಿ ಅಭ್ಯರ್ಥಿ ಹಾಜರಾದರೆ ಸಿಗ್ನಲ್‌ಗಳ ಮೂಲಕ ಅಲರ್ಟ್ ಸಿಗಲಿದೆ. ಇದರಿಂದ ಸಂಬಂಧಪಟ್ಟ ಅಭ್ಯರ್ಥಿಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ. ಅಭ್ಯರ್ಥಿಯು ಪರೀಕ್ಷಾ ಕೇಂದ್ರದ ಒಳಗೆ ಮಾತ್ರವಲ್ಲದೆ, ವೈದ್ಯಕೀಯ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನಗಳಾದ ಬ್ಲುಟೂತ್‌ನಲ್ಲಿ ಪರೀಕ್ಷಾ ಕೇಂದ್ರದ ಹೊರಗಿರುವವರ ಜೊತೆಗೆ ಮಾತನಾಡಿದರೂ ಸಂಭಾಷಣೆಯ ಧ್ವನಿಯು ರಿಕಾರ್ಡ್ ಆಗಲಿದೆ. ಇದರಿಂದ ವಿದ್ಯಾರ್ಥಿಯ ನಿಖರವಾಗಿ ನಕಲು ಮಾಡಿರುವುದನ್ನು ಪತ್ತೆ ಹಚ್ಚಬಹುದಾಗಿದೆ ಎಂದು ರಾಜೀವಗಾಂಧಿ ವಿವಿ ಕುಲಪತಿ ಡಾ. ಎಂ.ಕೆ. ರಮೇಶ್ ಮಾಹಿತಿ ನೀಡಿದರು.
ಇದನ್ನೂ ಓದಿ: ಸಿಇಒ ಆಗಿ ಮಿಕವನ್ನು ತಂದು ಕೂರಿಸಿದ ಹೆಂಡದ ಕಂಪನಿ; ಈ ಮಿಕಾ ಅಂತಿಂಥದ್ದಲ್ಲ, ಕೃತಕ ಬುದ್ಧಿಮತ್ತೆಯ ಶಕ್ತಿ ಇರುವ ರೋಬೋ ಹೆಣ್ಣು
ಡಿಸೆಂಬರ್‌ನಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಮೊದಲ ಬಾರಿಗೆ ಈ ನೂತನ ತಂತ್ರಜ್ಞಾನ ಜಾರಿಯಾಗಲಿದೆ. ಇದು ಆರ್‌ಜಿಯುಎಚ್‌ಎಸ್ ವ್ಯಾಪ್ತಿಯಲ್ಲಿರುವ ಎಲ್ಲ ವೈದ್ಯಕೀಯ ದಂತ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳಿಗೂ ಅನ್ವಯವಾಗಲಿದೆ. ಪ್ರತಿ ವರ್ಷ ಕನಿಷ್ಠ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು ಅಂತಾ ರಾಜೀವಗಾಂಧಿ ವಿವಿ ಈ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.
ಒಟ್ನಲ್ಲಿ ಇನ್ಮುಂದೆ ಪರೀಕ್ಷೆಯಲ್ಲಿ ನಕಲು ಮಾಡುಲು ಮುಂದಾದ್ರೆ ಸಿಕ್ಕಿ ಬೀಳೊದು ಫಿಕ್ಸ್. ಅಷ್ಟೇ ಅಲ್ದೆ ಅಕ್ರಮವಾಗಿ ಅಭ್ಯರ್ಥಿಯು ಬದಲಿ ಅಭ್ಯರ್ಥಿ ಪರೀಕ್ಷೆ ಬರೆಯುತ್ತಿದ್ದರೂ ಈ ತಂತ್ರಜ್ಞಾನ ಪತ್ತೆ ಹಚ್ಚಲಿದ್ದು ತಂತ್ರಜ್ಞಾನಗಳ ಸಹಾಯದಿಂದ ಬ್ಲುಟೂತ್‌ನಲ್ಲಿ ಪರೀಕ್ಷಾ ಕೇಂದ್ರದ ಹೊರಗಿರುವವರ ಜೊತೆಗೆ ಮಾತನಾಡಿದರೂ ಸಿಕ್ಕಿಬೀಳ್ತೀರಾ ಹುಷಾರ್.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ