ಗೆಳತಿಯ ತುಟಿಗೆ ಮುತ್ತು; ಸೆನ್ಸೇಷನ್ ಸೃಷ್ಟಿ ಮಾಡಿದ ಸಂಯುಕ್ತಾ ಹೆಗಡೆ
ನಟಿ ಸಂಯುಕ್ತಾ ಹೆಗಡೆ ಅವರು ಆಗಾಗ ಏನಾದರೂ ಒಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಈಗ ಅವರ ಫೋಟೋ ಮೂಲಕ ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ. ಅವರ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.
ನಟಿ ಸಂಯುಕ್ತಾ ಹೆಗಡೆ ಅವರು ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡುತ್ತಲೇ ಇರುತ್ತಾರೆ. ಒಂದಲ್ಲಾ ಒಂದು ವಿಚಾರಕ್ಕೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗುತ್ತಾರೆ. ಈಗ ಅವರ ಫೋಟೋ ಒಂದು ವೈರಲ್ ಆಗಿ ಗಮನ ಸೆಳೆದಿದೆ.
1 / 5
ಸಂಯುಕ್ತಾ ಹೆಗಡೆ ಆಪ್ತೆ ಎನಿಸಿಕೊಂಡಿರೋ ಪೂಜಿತಾ ಭಾಸ್ಕರ್ ಎಂಬುವವರ ವಿವಾಹ ಆಗಿದೆ. ಈ ವಿವಾಹಕ್ಕೂ ಮೊದಲು ಸಂಯುಕ್ತಾ ಗೆಳತಿಗೆ ಲಿಪ್ ಟು ಲಿಪ್ ಕಿಸ್ ಕೊಟ್ಟಿದ್ದಾರೆ. ಈ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
2 / 5
ಸಾಮಾನ್ಯವಾಗಿ ನಟಿಯರು ಈ ರೀತಿ ಫೋಟೋ ಹಂಚಿಕೊಂಡಾಗ ಟ್ರೋಲ್ ಆಗೋದು ಸಾಮಾನ್ಯ. ಆದರೆ, ನಟಿ ಇದಕ್ಕೆಲ್ಲ ತಲೆ ಕೆಡಸಿಕೊಂಡಿಲ್ಲ. ಈ ಫೋಟೋ ಪೋಸ್ಟ್ ಮಾಡಿದ್ದೂ ಅಲ್ಲದೆ, ಕಮೆಂಟ್ ಬಾಕ್ಸ್ನ ಆನ್ ಇಟ್ಟಿದ್ದಾರೆ ಅನ್ನೋದು ವಿಶೇಷ.
3 / 5
ಈ ಫೋಟೋ ನೋಡಿದ ಅನೇಕರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ನಟಿಯನ್ನು ಟೀಕಿಸಿದ್ದಾರೆ. ‘ಹಿಂಭಾಗದಲ್ಲಿ ಇರೋ ವರ ಶಾಕ್ನಲ್ಲಿ ಇದ್ದಾನೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಇವರಿಗೆಲ್ಲ ಏನಾಗಿದೆ’ ಎಂದು ಕೇಳಿದ್ದಾರೆ.
4 / 5
ಇನ್ನೂ ಕೆಲವರು ‘ನಿಮ್ಮದೇ ಮದುವೆ ಆಯಿತು ಎಂದುಕೊಂಡೆ. ಪುಣ್ಯ ಹಾಗಲ್ಲ’ ಎಂದು ಕೆಲವರು ಹೇಳಿದ್ದಾರೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ನಟಿ ಟ್ರೋಲ್ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.