AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದ ಬಗ್ಗೆ ವಿವಾದ ಮಾಡಿಕೊಂಡ ಕಮಲ್ ಹಾಸನ್​ಗೆ ಹೊಸ ನಿರ್ಬಂಧ ಹೇರಿದ ಕೋರ್ಟ್

ಕಮಲ್ ಹಾಸನ್ ಅವರು "ಥಗ್ ಲೈಫ್" ಚಿತ್ರದ ಪ್ರಚಾರದ ವೇಳೆ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈಗ ನ್ಯಾಯಾಲಯವು ಅವರ ಮೇಲೆ ನಿರ್ಬಂಧ ವಿಧಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅರ್ಜಿಯನ್ನು ನ್ಯಾಯಾಲಯ ಒಪ್ಪಿಕೊಂಡು ಕನ್ನಡ ನೆಲ, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೇಳಿಕೆ ನೀಡದಂತೆ ಸೂಚಿಸಿದೆ. ಈ ಆದೇಶವನ್ನು ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆ ಆಗುತ್ತದೆ.

ಕನ್ನಡದ ಬಗ್ಗೆ ವಿವಾದ ಮಾಡಿಕೊಂಡ ಕಮಲ್ ಹಾಸನ್​ಗೆ ಹೊಸ ನಿರ್ಬಂಧ ಹೇರಿದ ಕೋರ್ಟ್
Kamal Haasan
Ramesha M
| Updated By: ರಾಜೇಶ್ ದುಗ್ಗುಮನೆ|

Updated on:Jul 05, 2025 | 7:08 AM

Share

ನಟ ಕಮಲ್ ಹಾಸನ್ (Kamal Haasan) ಅವರು ಇತ್ತೀಚೆಗೆ ಬೇಡದ ಕಾರಣಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. ‘ಥಗ್ ಲೈಫ್’ ಸಿನಿಮಾ ರಿಲೀಸ್ ವೇಳೆ ಅವರು ಎಡವಟ್ಟೊಂದನ್ನು ಮಾಡಿಕೊಂಡಿದ್ದರು. ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂಬ ಹೇಳಿಕೆ ನೀಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಈ ವಿವಾದ ಇನ್ನೂ ಕಡಿಮೆ ಆಗಿಲ್ಲ. ಅವರ ಬಗ್ಗೆ ಕೋರ್ಟ್​ನಲ್ಲಿ ಕೇಸ್​ಗಳು ನಡೆಯುತ್ತಲೇ ಇವೆ. ಈಗ ಕನ್ನಡದ ಬಗ್ಗೆ ಹೇಳಿಕೆ ನೀಡದಂತೆ ಕಮಲ್​ ಹಾಸನ್​ಗೆ ಕೋರ್ಟ್ ನಿರ್ಬಂಧ ಹೇರಿದೆ. ಒಂದೊಮ್ಮೆ ಅವರು ಆದೇಶ ಮೀರಿದರೆ ನ್ಯಾಯಾಂಗ ನಿಂದನೆ ಮಾಡಿದಂತೆ ಆಗುತ್ತದೆ.

ಕಮಲ್ ಹಾಸನ್ ಅವರು ‘ಥಗ್ ಲೈಫ್’ ಸಿನಿಮಾ ಪ್ರಚಾರದ ವೇಳೆ ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂದಿದ್ದರು. ಇದಕ್ಕೆ ವಿರೋಧ ವ್ಯಕ್ತವಾಯಿತು. ಈ ಸಿನಿಮಾ ರಿಲೀಸ್ ಆಗಲು ಕರ್ನಾಟಕದಲ್ಲಿ ಅವಕಾಶ ನೀಡಿರಲೇ ಇಲ್ಲ. ಸಿನಿಮಾ ರಿಲೀಸ್​ಗೆ ಕರ್ನಾಟಕದಲ್ಲಿ ಅಸಹಕಾರ ತೋರಿಸಲಾಯಿತು. ಇದನ್ನು ಬ್ಯಾನ್ ಎಂದು ಚಿತ್ರತಂಡದವರು ಕರೆದರು. ಈ ಕಾರಣದಿಂದ ನೇರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು.

ಹಲವು ದಿನಗಳ ಹೋರಾಟಗಳ ಬಳಿಕ ಪ್ರಕರಣ ಕಮಲ್ ಹಾಸನ್ ಪರ ಆಯಿತು. ಆದಾಗ್ಯೂ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಿಯೇ ಇಲ್ಲ. ಈಗ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ಹೇಳಿಕೆ ನೀಡದಂತೆ ನಿರ್ಬಂಧ ಹೇರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಕೋರ್ಟ್ ಎದುರು ಕೋರಿತ್ತು. ಇದಕ್ಕೆ ಕೋರ್ಟ್ ಒಪ್ಪಿ ಕನ್ನಡ ನೆಲ, ಭಾಷೆ, ಸಂಸ್ಕೃತಿ ಬಗ್ಗೆ ಹೇಳಿಕೆ ನೀಡದಂತೆ ನಿರ್ಬಂಧ ಹೇರಿ ಬೆಂಗಳೂರಿನ 31ನೇ ಸಿಟಿ ಸಿವಿಲ್ ಕೋರ್ಟ್​ ಆದೇಶ ನೀಡಿದೆ.

ಇದನ್ನೂ ಓದಿ
Image
‘ನಾನು ಫಾತಿಮಾಗೆ ಲವರ್, ತಂದೆ ಎರಡೂ ಅಲ್ಲ’; ಆಮಿರ್ ಖಾನ್ ನೇರ ಮಾತು
Image
ನೀಲಿ ತಾರೆಯ ಅನುಮಾನಾಸ್ಪದ ಸಾವು; ಶವ ಸಂಸ್ಕಾರಕ್ಕೆ ಹಣ ಕೇಳಿದ ಕುಟುಂಬ
Image
ಲವ್ ಇನ್ ದಿ ಏರ್; ಮಗುವಿನಂತೆ ಯಶ್​​ನ ತಬ್ಬಿ ಕುಳಿತ ರಾಧಿಕಾ ಪಂಡಿತ್
Image
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ

ಇದನ್ನೂ ಓದಿ: ಒಪ್ಪಂದ ಮುರಿದ ಕಮಲ್ ಹಾಸನ್, ಮುಂಚಿತವಾಗಿ ಒಟಿಟಿಗೆ ಬಂತು ‘ಥಗ್ ಲೈಫ್’

ಕಮಲ್ ಹಾಸನ್ ‘ಥಗ್ ಲೈಫ್’ ಸಿನಿಮಾ ಒಟಿಟಿಗೆ ಬಂದಿದೆ. ಜುಲೈ 2ರಂದು ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ತಮಿಳು, ಕನ್ನಡ, ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಪ್ರಸಾರ ಕಂಡಿದೆ. ಈ ಚಿತ್ರ ಕನ್ನಡ ವರ್ಷನ್ ಸಿದ್ಧವಿದ್ದರೂ ಅದನ್ನು ಈ ಮೊದಲು ರಿಲೀಸ್ ಮಾಡಲು ತಂಡ ಮುಂದೆ ಬಂದಿರಲಿಲ್ಲ. ಈಗ ಒಟಿಟಿಯಲ್ಲಿ ಕನ್ನಡ ವರ್ಷನ್ ರಿಲೀಸ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:03 am, Sat, 5 July 25