‘ನಾನು ಫಾತಿಮಾಗೆ ಲವರ್, ತಂದೆ ಎರಡೂ ಅಲ್ಲ’; ಆಮಿರ್ ಖಾನ್ ನೇರ ಮಾತು
‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದ ವೈಫಲ್ಯದ ಹಿಂದಿನ ಕಾರಣಗಳ ಬಗ್ಗೆ ಆಮೀರ್ ಖಾನ್ ಅವರು ಇತ್ತೀಚೆಗೆ ಮಾತನಾಡಿದ್ದಾರೆ. ದೀಪಿಕಾ, ಆಲಿಯಾ, ಶ್ರದ್ಧಾ ಮೊದಲಾಗಿ ಹಲವು ನಟಿಯರು ನಿರಾಕರಿಸಿದ ಪಾತ್ರವನ್ನು ಫಾತಿಮಾ ಸನಾ ಶೇಖ್ ನಿರ್ವಹಿಸಿದ್ದಾರೆ. ಚಿತ್ರದ ಮೂಲ ಕಥೆ ಬದಲಾಗಿದೆ ಎಂದು ಅವರು ಹೇಳಿದ್ದಾರೆ.

ಬಾಲಿವುಡ್‌ನ ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಎಂದೇ ಖ್ಯಾತಿ ಪಡೆದ ಆಮಿರ್ ಖಾನ್ (Aamir Khan), ತಮ್ಮ 25 ವರ್ಷಗಳ ವೃತ್ತಿಜೀವನದಲ್ಲಿ ಹೆಚ್ಚು ಫ್ಲಾಪ್ ಚಿತ್ರಗಳನ್ನು ನೋಡಿಲ್ಲ. ಆದ್ದರಿಂದ ಅವರ ‘ಥಗ್ಸ್ ಆಫ್ ಹಿಂದೂಸ್ತಾನ್’ ಬಾಕ್ಸ್ ಆಫೀಸ್‌ನಲ್ಲಿ ಸೋತಾಗ ಎಲ್ಲರೂ ಆಶ್ಚರ್ಯಚಕಿತರಾದರು. ಚಿತ್ರವು ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿತು. ಆದರೆ ಅದಾದ ಕೆಲವೇ ದಿನಗಳಲ್ಲಿ ಪ್ರೇಕ್ಷಕರು ನಕಾರಾತ್ಮಕ ಪ್ರತಿಕ್ರಿಯೆ ನೀಡಲು ಪ್ರಾರಂಭಿಸಿದರು. ಇತ್ತೀಚಿನ ಸಂದರ್ಶನವೊಂದರಲ್ಲಿ, ಆಮಿರ್ ಚಿತ್ರದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ, ನಟಿಯರಾದ ದೀಪಿಕಾ ಪಡುಕೋಣೆ, ಆಲಿಯಾ ಭಟ್ ಮತ್ತು ಶ್ರದ್ಧಾ ಕಪೂರ್ ತಿರಸ್ಕರಿಸಿದ ಪಾತ್ರವನ್ನು ನಂತರ ’ದಂಗಲ್ ಹುಡುಗಿ’ ಫಾತಿಮಾ ಸನಾ ಶೇಖ್ ಪಡೆದರು ಎಂದು ಅವರು ಹೇಳಿದ್ದಾರೆ.
‘ದಂಗಲ್’ ಚಿತ್ರದಲ್ಲಿ ಫಾತಿಮಾ ಅವರ ತಂದೆಯ ಪಾತ್ರವನ್ನು ಅಮೀರ್ ನಿರ್ವಹಿಸಿದ್ದರು. ‘ಥಗ್ಸ್ ಆಫ ಹಿಂದೂಸ್ತಾನ್’ ಚಿತ್ರದಲ್ಲಿ ಆಮಿರ್ ಪ್ರೇಮಿಯ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ಈ ಕಾರಣದಿಂದಾಗಿ, ನಿರ್ದೇಶಕ ವಿಜಯ್ ಅವರ ಒಂದು ಲವ್ ಸಾಂಗ್ನ ಚಿತ್ರದಿಂದ ತೆಗೆದುಹಾಕಿದ್ದರು. ಫಾತಿಮಾ ಅವರೊಂದಿಗಿನ ಸಂಬಂಧದ ಕಾರಣದಿಂದ ಆಮಿರ್ ಅವರು ಒಂದು ಪಾತ್ರವನ್ನು ಅವರಿಗೆ ನೀಡಿದ್ದಾರೆ ಎಂದು ಸಾಕಷ್ಟು ಚರ್ಚೆ ನಡೆದಿತ್ತು . ಇದಕ್ಕೆ ಆಮಿರ್ ಕೂಡ ತೀವ್ರವಾಗಿ ಪ್ರತಿಕ್ರಿಯಿಸಿದರು.
‘ಯಾವ ನಟಿಯೂ ಜಫೀರಾ ಪಾತ್ರಕ್ಕೆ ಹೌದು ಎಂದು ಹೇಳುತ್ತಿರಲಿಲ್ಲ. ದೀಪಿಕಾ, ಆಲಿಯಾ, ಶ್ರದ್ಧಾ ಈಗಾಗಲೇ ನಿರಾಕರಿಸಿದ್ದರು. ಇಡೀ ಚಿತ್ರರಂಗಕ್ಕೆ ಆ ಪಾತ್ರವನ್ನು ನೀಡಲಾಗಿತ್ತು, ಆದರೆ ಯಾರೂ ಅದನ್ನು ಮಾಡಲು ಸಿದ್ಧರಿರಲಿಲ್ಲ’ ಎಂದು ಆಮಿರ್ ಹೇಳಿದರು. ಆ ಪಾತ್ರಕ್ಕಾಗಿ ಫಾತಿಮಾ ಅವರನ್ನು ಆಡಿಷನ್ ಮಾಡಿದ ನಂತರ, ನಿರ್ಮಾಪಕರು ಅವರನ್ನು ಆಯ್ಕೆ ಮಾಡಿದರು. ಆದರೆ ಚಿತ್ರದಲ್ಲಿ ಫಾತಿಮಾ ಅವರೊಂದಿಗೆ ಒಂದು ಲವ್ ಸಾಂಗ್ ಮಾಡಲು ಆಮಿರ್ ನಿರಾಕರಿಸಿದ್ದರು.
‘ಇದೆಲ್ಲದರಲ್ಲೂ ನನಗೆ ನಂಬಿಕೆ ಇಲ್ಲ. ನಾನು ಅವಳ ನಿಜವಾದ ತಂದೆ ಅಥವಾ ನಿಜವಾದ ಗೆಳೆಯನಲ್ಲ. ನಾವು ಸಿನಿಮಾ ಮಾಡುತ್ತಿದ್ದೇವೆ ಮತ್ತು ಪ್ರೇಕ್ಷಕರು ನಾನೇ ಅವಳ ನಿಜವಾದ ತಂದೆ ಎಂದು ಭಾವಿಸುವಷ್ಟು ಮೂರ್ಖರಲ್ಲ. ನಾವು ಪ್ರೇಕ್ಷಕರನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದೇವೆ. ಅವಳು ನನ್ನ ಲವರ್ ಪಾತ್ರ ಮಾಡಿದಳು ಎಂಬ ಕಾರಣಕ್ಕೆ ಸ್ಕ್ರಿಪ್ಟ್‌ನಲ್ಲಿನ ನಿರಂತರ ಬದಲಾವಣೆಗಳಿಂದಾಗಿ ಚಿತ್ರದ ಮೂಲ ಕಥೆ ಕಳೆದುಹೋಗಿದೆ’ ಎಂದು ಆಮಿರ್ ವಿಷಾದ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮನೆಯ ನಾಯಿಗೆ ಶಾರುಖ್ ಖಾನ್ ಎಂದು ಹೆಸರು ಇಟ್ಟಿದ್ದ ಆಮಿರ್ ಖಾನ್
ಮೂಲ ಕಥೆಯಲ್ಲಿ, ಅಮಿತಾಬ್ ಭಚ್ಚನ್ ನಿರ್ವಹಿಸಿದ ಪಾತ್ರವು ಮಧ್ಯಂತರದ ಸಮಯದಲ್ಲಿ ಸಾಯಬೇಕಿತ್ತಂತೆ. ಆದರೆ ನಿರಂತರ ಬದಲಾವಣೆಗಳಿಂದಾಗಿ, ಚಿತ್ರದ ಮೂಲ ಕಥೆ ಸಂಪೂರ್ಣವಾಗಿ ಕಳೆದುಹೋಗಿತ್ತು. ಅಷ್ಟೇ ಅಲ್ಲ, ಆಮಿರ್ ಚಿತ್ರದ ಶೀರ್ಷಿಕೆಯನ್ನು ಸಹ ಇಷ್ಟಪಡಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







