ಖ್ಯಾತ ನೀಲಿ ತಾರೆಯ ಅನುಮಾನಾಸ್ಪದ ಸಾವು; ಶವ ಸಂಸ್ಕಾರಕ್ಕೆ ಹಣ ಕೇಳಿದ ಕುಟುಂಬ
ನೀಲಿ ಚಿತ್ರಗಳಲ್ಲಿ ಖ್ಯಾತಿ ಗಳಿಸಿದ್ದ ಕೈಲಿ ಪೇಜ್ ಅವರು ನಿಧನರಾಗಿದ್ದಾರೆ. ಅವರ ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಲಾಸ್ ಏಂಜಲೀಸ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅವರು ಮೃತಪಟ್ಟರು. ಕುಟುಂಬ ಅಂತ್ಯಕ್ರಿಯೆಗೆ ಹಣ ಸಂಗ್ರಹಿಸಲು GoFundMe ಅಭಿಯಾನ ಆರಂಭಿಸಿದೆ.

ನೀಲಿ ಚಿತ್ರ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಕೈಲಿ ಪೇಜ್ ಅವರು ನಿಧನ ಹೊಂದಿದ್ದಾರೆ. ಅವರಿಗೆ 28 ವರ್ಷ ವಯಸ್ಸಾಗಿತ್ತು. ಅವರು 200ಕ್ಕೂ ಅಧಿಕ ಅಡಲ್ಟ್ ಸಿನಿಮಾಗಳಲ್ಲಿ ನಟಿಸಿದ್ದರು. ಅವರು ನೆಟ್ಫ್ಲಿಕ್ಸ್ನ (Netflix) ‘ಹಾಟ್ ಗರ್ಲ್ಸ್ ವಾಂಟೆಡ್’ ಡಾಕ್ಯುಮೆಂಟ್ ಸೀರಿಸ್ನಲ್ಲಿ ಅವರು ಕಾಣಿಸಿಕೊಂಡಿದ್ದರು. ಲಾಸ್ ಏಂಜಲೀಸ್‌ನಲ್ಲಿರುವ ಅವರ ಮನೆಯಲ್ಲಿ ಪ್ರಜ್ಞೆ ಇಲ್ಲದೆ ಬಿದ್ದಿದ್ದರು. ಅವರ ಸಾವಿಗೆ ಕಾರಣವನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.
ಕೈಲಿಯವರ ನಿಧನದಿಂದ ಅವರ ಕುಟುಂಬ ಮತ್ತು ಸ್ನೇಹಿತರು ತೀವ್ರ ದುಃಖಿತರಾಗಿದ್ದಾರೆ. ಅವರ ದೇಹವನ್ನು ಮಿಡ್‌ವೆಸ್ಟ್‌ಗೆ ಸಾಗಿಸಲು ಹಾಗೂ ಅಂತ್ಯಸಂಸ್ಕಾರಕ್ಕೆ ಹಣ ನೀಡಿ ಎಂದು ಕುಟುಂಬದವರು GoFundMe ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಕೆಲವರು ಹಣ ನೀಡಲು ಮುಂದೆ ಬಂದಿದ್ದಾರೆ.
ಕೈಲೀ ಪೇಜ್ ಅವರು ನೀಲಿ ಸಿನಿಮಾಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಅವರು ಬ್ರೇಜರ್ಸ್ ನಿರ್ಮಾಣ ಸಂಸ್ಥೆ ಜೊತೆ ಹೆಚ್ಚು ಕೆಲಸ ಮಾಡಿದ್ದರು. ಅವರ ಸಾವಿನ ಸುದ್ದಿ ಹೊರ ಬಿದ್ದ ನಂತರ, ಸ್ಟುಡಿಯೋದವರು ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಗೌರವ ಸಲ್ಲಿಸಿ ಪೋಸ್ಟ್ ಮಾಡಿದ್ದಾರೆ.
ಕೈಲಿಗೆ ಇನ್ನೂ 28 ವರ್ಷ. ಅವರು ಬದುಕಿ ಬಾಳಬೇಕಿತ್ತು. ಆದರೆ, ಅವರು ನಿಧನ ಹೊಂದಿದ್ದು ಅನೇಕರಿಗೆ ಶಾಕಿಂಗ್ ಎನಿಸಿದೆ. ಅವರ ಸಾವಿನ ಹಿಂದೆ ಹಲವು ಅನುಮಾಗಳು ಕೂಡ ಹುಟ್ಟಿಕೊಂಡಿವೆ. ಯಾರಾದರೂ ಅವರನ್ನು ಕೊಲೆ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ. ಡ್ರಗ್ಸ್ ಓವರ್ ಡೋಸ್ ಆಗಿ ಈ ರೀತಿ ಆಗಿರಬಹುದು ಎಂದು ಕೂಡ ಹೇಳಲಾಗುತ್ತಿದೆ. ಎಲ್ಲದಕ್ಕೂ ತನಿಖೆಯ ಬಳಿಕವೇ ಉತ್ತರ ಸಿಗಬೇಕಿದೆ.
ಸಾಕ್ಷ್ಯ ಚಿತ್ರದಲ್ಲಿ ನಟನೆ
2017ರಲ್ಲಿ ಸಾಕ್ಷ್ಯಚಿತ್ರ-ಸರಣಿ ‘ಹಾಟ್ ಗರ್ಲ್ಸ್ ವಾಂಟೆಡ್: ಟರ್ನ್ಡ್ ಆನ್’ನಲ್ಲಿ ಕೈಲಿ ಕಾಣಿಸಿಕೊಂಡರು. ಇದರಲ್ಲಿ ಮಾದಕ ದ್ರವ್ಯ ಸೇವನೆ ಸೇರಿದಂತೆ ಅಡಲ್ಟ್ ಸ್ಟಾರ್ಗಳ ಅನುಭವಗಳು ಮತ್ತು ಹೋರಾಟಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.
ಇದನ್ನೂ ಓದಿ: 12 ಗಂಟೆಯಲ್ಲಿ ಬರೋಬ್ಬರಿ 1,057 ಪುರುಷರ ಜೊತೆ ಮಲಗುವ ಮೂಲಕ ವಿಶ್ವ ದಾಖಲೆ ಬರೆದ ನೀಲಿ ತಾರೆ
ಕಳೆದ ವರ್ಷ, ಪೆರುವಿಯನ್ ನೀಲಿ ಚಿತ್ರ ತಾರೆ ಥೈನಾ ಫೀಲ್ಡ್ಸ್ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಪೋರ್ನ್ ಉದ್ಯಮದಲ್ಲಿ ಸಾಕಷ್ಟು ದೌರ್ಜನ್ಯ ಇದೆ ಎಂದು ಅವರು ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಅವರು ನಿಧನ ಹೊಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:20 pm, Wed, 2 July 25








