AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮನೆ ಬಾಡಿಗೆ ಏರಿದಂತೆ..’; ಬಿಗ್ ಬಾಸ್ ಸಂಭಾವನೆ ಬಗ್ಗೆ ಕಿಚ್ಚ ಸುದೀಪ್ ನೇರ ಮಾತು

ಬಿಗ್ ಬಾಸ್ ಕನ್ನಡದ ನಿರೂಪಕ ಕಿಚ್ಚ ಸುದೀಪ್ ಅವರ ಸಂಭಾವನೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಅವರು ಮನೆ ಬಾಡಿಗೆ ಹೆಚ್ಚಳದ ಹೋಲಿಕೆಯನ್ನು ಉಲ್ಲೇಖಿಸಿ ತಮ್ಮ ಸಂಭಾವನೆಯನ್ನು ರಹಸ್ಯವಾಗಿಟ್ಟಿದ್ದಾರೆ. ಶೋನ ಬಜೆಟ್, ಸ್ಪರ್ಧಿಗಳ ಸಂಭಾವನೆ ಇವೆಲ್ಲ ನೋಡಿ ಸಂಭಾವನೆ ಪಡೆಯಬೇಕಾಗುತ್ತದೆ ಎಂದು ಹೇಳಿದ್ದಾರೆ.

‘ಮನೆ ಬಾಡಿಗೆ ಏರಿದಂತೆ..’; ಬಿಗ್ ಬಾಸ್ ಸಂಭಾವನೆ ಬಗ್ಗೆ ಕಿಚ್ಚ ಸುದೀಪ್ ನೇರ ಮಾತು
ಸುದೀಪ್
ರಾಜೇಶ್ ದುಗ್ಗುಮನೆ
|

Updated on: Jul 01, 2025 | 7:34 AM

Share

ಕಿಚ್ಚ ಸುದೀಪ್ ಅವರು ಬಿಗ್ ಬಾಸ್​ಗೆ (Bigg Boss) ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ವಿಚಾರ ಯಾವಾಗಲೂ ರಿವೀಲ್ ಆಗಿಲ್ಲ. ಪ್ರತಿಬಾರಿ ಸುದ್ದಿಗೋಷ್ಠಿ ಆಯೋಜನೆ ಆದಾಗ ಈ ಬಗ್ಗೆ ಪ್ರಶ್ನೆ ಮಾಡಲಾಗುತ್ತದೆ. ಈ ಬಾರಿಯ ಬಿಗ್ ಬಾಸ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಸುದೀಪ್ ಅವರು ಇದಕ್ಕೆ ಜಾಣತನದ ಉತ್ತರ ನೀಡಿದ್ದಾರೆ. ಸುದೀಪ್ ಅವರು ಈ ಮೊದಲು ಬಿಗ್ ಬಾಸ್ ನಿರೂಪಣೆ ಮಾಡಲ್ಲ ಎಂದು ಟ್ವೀಟ್ ಮಾಡಿದ್ದರು. ಆದರೆ, ಈಗ ಅವರು ನಿರ್ಧಾರವನ್ನು ಬದಲಿಸಿದ್ದಾರೆ.

ಕಲರ್ಸ್​ ಕನ್ನಡದ ಬ್ಯುಸಿನೆಸ್​ ಹೆಡ್ ಪ್ರಶಾಂತ್ ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಯಿತು. ಆದರೆ, ಅವರು ಇದು ವೈಯಕ್ತಿಕ ಎಂದರು. ಅಲ್ಲದೆ, ಈ ಪ್ರಶ್ನೆ ಉತ್ತರಿಸಲು ಸಾಧ್ಯವಿಲ್ಲ ಎಂದರು. ‘ಮನೆ ಬಾಡಿಗೆಗೆ ಹೋದರೆ 10 ಪರ್ಸೆಂಟ್ ಇನ್​ಕ್ರಿಮೆಂಟ್ ಇರುತ್ತೆ. ನಾನು ಲೀಸ್​ಗೂ ಅಲ್ಲ, ರೆಂಟ್​ಗೂ ಅಲ್ಲ. ನಮ್ಮದೊಂದು ಇರುತ್ತೆ ತಾನೇ’ ಎಂದರು ಸುದೀಪ್.

‘ಟ್ವೀಟ್ ಮಾಡುವಾಗ ಸಂಭಾವನೆ ವಿಚಾರ ತಲೆಯಲ್ಲಿ ಇರಲಿಲ್ಲ. ಟ್ವೀಟ್ ಮಾಡದೆಯೂ ಸಂಭಾವನೆ ಹೆಚ್ಚು ಬೇಕು ಎಂದು ಕೇಳಬಹುದಲ್ಲ. ಅದು ಪಬ್ಲಿಕ್​ನಲ್ಲಿ ಮಾತನಾಡುವ ವಿಚಾರ ಅಲ್ಲ. ಹಣ ಅನ್ನೋದು ಲಾಸ್ಟ್. ನಾನು ಸಿನಿಮಾದಲ್ಲಿ ಎಷ್ಟು ಸಂಭಾವನೆ ಪಡೆಯುತ್ತೇನೆ ಎಂಬ ಸರಿಯಾದ ಲೆಕ್ಕ ಯಾರಿಗೂ ಸಿದಲ್ಲ. ಏಕೆಂದರೆ ಪ್ರತಿ ಚಿತ್ರವೂ ಭಿನ್ನ, ಪ್ರತಿ ಚಿತ್ರದ ಬಜೆಟ್ ಕೂಡ ಬೇರೆ ಬೇರೆ ಇರುತ್ತದೆ’ ಎಂದು ಸುದೀಪ್ ಹೇಳಿದ್ದಾರೆ.

ಇದನ್ನೂ ಓದಿ
Image
‘ಒಳ ಉಡುಪು ಹಾಕಿದ್ದೀನಾ, ಇಲ್ಲವಾ ಎಂಬುದನ್ನು ನೀವು ನೋಡಿದ್ದೀರಾ?’;ಖುಷಿ
Image
ಚಿರಂಜೀವಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್; ಅಸಮಾಧಾನ ಹೊರಹಾಕಿದ ಫ್ಯಾನ್ಸ್
Image
ಭಾನುವಾರವೂ ಹೆಚ್ಚಿಲ್ಲ ಕಣ್ಣಪ್ಪ ಕಲೆಕ್ಷನ್; ನೂರಾರು ಕೋಟಿ ರೂ. ನೀರಲ್ಲಿ ಹೋಮ
Image
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ

‘ನಾನು ರೇಟ್ ಕಟ್ಟೋಕೆ ಹೋಗಲ್ಲ. ನಾನು ಚೀಪ್ ಅಲ್ಲ. ದೊಡ್ಡ ಬಜೆಟ್ ಸಿನಿಮಾ ಇದ್ದಾಗ ನಾವು ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು. ಮೊದಲ ಸೀಸನ್​​ನಲ್ಲಿ ಪಡೆದಿದ್ದ ಸಂಭಾವನೆಯನ್ನು ಈಗಲೂ ಪಡೆಯೋಕೆ ಆಗುತ್ತಾ? ಹೆಚ್ಚು ಬೇಕಾಗುತ್ತದೆ. ಪ್ರತಿ ಶೋಗೂ ಅದರದ್ದೇ ಆದ ಬಜೆಟ್ ಇರುತ್ತದೆ. ಸ್ಪರ್ಧಿಗಳಿಗೂ ಸಂಭಾವನೆ ಕೊಡಬೇಕು’ ಎಂದಿದ್ದಾರೆ ಅವರು.

ಇದನ್ನೂ ಓದಿ: ಬಿಗ್ ಬಾಸ್ ಬಗ್ಗೆ ಸುದೀಪ್​ಗೆ ಇದ್ದ ಅಸಮಾಧಾನ ಏನು? ನೇರವಾಗಿ ವಿವರಿಸಿದ ಕಿಚ್ಚ

ಈ ಮೊದಲು ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಮಾಡಲ್ಲ ಎಂದು ಟ್ವೀಟ್ ಮಾಡಿದ್ದರು. ಆದರೆ, ಆ ಬಳಿಕ ಅವರು ಮನಸ್ಸು ಬದಲಿಸಿದ್ದಾರೆ. ಶೋನಲ್ಲಿ ಕನ್ನಡಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ