ಭಾನುವಾರವೂ ಹೆಚ್ಚಿಲ್ಲ ‘ಕಣ್ಣಪ್ಪ’ ಕಲೆಕ್ಷನ್; ನೂರಾರು ಕೋಟಿ ರೂ. ನೀರಲ್ಲಿ ಹೋಮ
‘ಕಣ್ಣಪ್ಪ’ ಚಿತ್ರ ಬಹು ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿದ್ದರೂ, ಅದರ ಬಾಕ್ಸ್ ಆಫೀಸ್ ಗಳಿಕೆ ನಿರಾಶಾದಾಯಕವಾಗಿದೆ. ಮೊದಲ ಮೂರು ದಿನಗಳಲ್ಲಿ ಕೇವಲ 23.75 ಕೋಟಿ ರೂಪಾಯಿ ಮಾತ್ರ ಗಳಿಸಿದೆ. ದೊಡ್ಡ ಬಜೆಟ್ ಈ ಚಿತ್ರಕ್ಕೆ ನಕಾರಾತ್ಮಕ ವಿಮರ್ಶೆಗಳು ಕೂಡ ಒಂದು ಕಾರಣ. ಚಿತ್ರದಲ್ಲಿ ಭಕ್ತಿ ಕಥೆಗಿಂತ ರೊಮ್ಯಾಂಟಿಕ್ ಅಂಶಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಟೀಕಿಸಲಾಗಿದೆ.

ಸಾಕಷ್ಟು ಹೈಪ್ಗಳೊಂದಿಗೆ ‘ಕಣ್ಣಪ್ಪ’ ಸಿನಿಮಾ (Kannappa Movie) ಜೂನ್ 27ರಂದು ರಿಲೀಸ್ ಆಯಿತು. ಈ ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆ ಕೊಟ್ಟರೆ ಸೂಕ್ತ ಕ್ರಮ ಕೈಗೊಳ್ಳೋದಾಗಿ ಈ ಚಿತ್ರದ ನಟ ಹಾಗೂ ನಿರ್ಮಾಪಕ ವಿಷ್ಣು ಮಂಚು ಅವರು ಎಚ್ಚರಿಕೆ ನೀಡಿದ್ದರು. ಆದರೆ, ‘ಕಣ್ಣಪ್ಪ’ ಬಗ್ಗೆ ಹಬ್ಬುತ್ತಿರೋ ನೆಗೆಟಿವ್ ವಿಮರ್ಶೆಗಳನ್ನು ತಡೆಯಲು ಅಸಾಧ್ಯ ಎಂಬಂತಾಗಿದೆ. ಇದರಿಂದ ಸಿನಿಮಾದ ಗಳಿಕೆಯೂ ತಗ್ಗಿದೆ. ದೊಡ್ಡ ಬಜೆಟ್ ಸಿನಿಮಾ ಆಗಿರುವುದರಿಂದ ಗಳಿಕೆ ಕೂಡ ತಗ್ಗಿದೆ.
‘ಕಣ್ಣಪ್ಪ’ ಸಿನಿಮಾದಲ್ಲಿ ಹೆಚ್ಚು ಗಮನ ಹರಿಸಬೇಕಿದ್ದಿದ್ದು ಭಕ್ತಿ ಕಥೆಯ ಮೇಲೆ. ಆದರೆ, ಇಲ್ಲಿ ರೊಮ್ಯಾಂಟಿಕ್ ಟ್ರ್ಯಾಕ್ ಮೇಲೆ ಕಥೆ ಹೆಚ್ಚು ಸಾಗಿದೆ. ಈ ಕಾರಣದಿಂದಲೇ ಸಿನಿಮಾನ ಎಲ್ಲರೂ ಟೀಕಿಸುತ್ತಿದ್ದಾರೆ. ಈ ಚಿತ್ರ ಸೂಪರ್ ಹಿಟ್ ಆಗಲಿದೆ ಎಂದು ತಂಡ ಭಾವಿಸಿದ್ದಿರಬಹುದು. ಆದರೆ, ಅದು ಸುಳ್ಳಾಗಿದೆ. ಸಿನಿಮಾ ಹೀನಾಯವಾಗಿ ಸೋಲುವ ಲಕ್ಷಣ ಕಾಣುತ್ತಿದೆ.
‘ಕಣ್ಣಪ್ಪ’ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರ. ಆದಾಗ್ಯೂ ಮೊದಲ ದಿನ 9.35 ಕೋಟಿ ರೂಪಾಯಿ, ಎರಡನೇ ದಿನ 7.15 ಕೋಟಿ ರೂಪಾಯಿ ಹಾಗೂ ಭಾನುವಾರ 7.25 ಕೋಟಿ ರೂಪಾಯಿ ಮಾತ್ರ ಗಳಿಕೆ ಮಾಡಿದೆ. ಈ ಮೂಲಕ ಸಿನಿಮಾದ ಕಲೆಕ್ಷನ್ 23.75 ಕೋಟಿ ರೂಪಾಯಿ ಆಗಿದೆ. ವಾರಾಂತ್ಯದಲ್ಲೇ ಇಷ್ಟು ಹೀನಾಯ ಕಲೆಕ್ಷನ್ ಮಾಡಿದರೆ ಎಂದರೆ ಚಿತ್ರ ವಾರದ ದಿನಗಳಲ್ಲಿ ಇನ್ನೆಷ್ಟು ಕಲೆಕ್ಷನ್ ಮಾಡಬಹುದು ಎಂಬ ಸ್ಪಷ್ಟ ಚಿತ್ರಣ ಸಿಕ್ಕಿದೆ.
ಇದನ್ನೂ ಓದಿ: ‘ಕಣ್ಣಪ್ಪ’ ಚಿತ್ರದಲ್ಲಿ ಸಂಭಾವನೆ ಪಡೆಯದೆ ನಟಿಸಿದ ಕಲಾವಿದರು ಇವರು..
‘ಕಣ್ಣಪ್ಪ’ ಸಿನಿಮಾದ ಬಜೆಟ್ ವಿಚಾರ ಗೊತ್ತೇ ಇದೆ. ಈ ಸಿನಿಮಾ 300 ಕೋಟಿ ರೂಪಾಯಿ ಹಣದಲ್ಲಿ ನಿರ್ಮಾಣಗೊಂಡಿದೆ. ವಿಎಫ್ಎಕ್ಸ್ಗೆ ಹೆಚ್ಚಿನ ಹಣ ಸುರಿಯಲಾಗಿದೆ. ಹೀಗಾಗಿ, ಇಷ್ಟು ಸಣ್ಣ ಗಳಿಕೆಯಿಂದ ಚಿತ್ರಕ್ಕೆ ಹೆಚ್ಚಿನ ಲಾಭವೇನು ಆಗೋದಿಲ್ಲ. ಒಟಿಟಿ ಹಾಗೂ ಸೆಟಲೈಟ್ಸ್ ಹಕ್ಕುಗಳ ಮಾರಾಟದಿಂದ ಚಿತ್ರಕ್ಕೆ ಒಳ್ಳೆಯ ಮೊತ್ತ ಸಿಕ್ಕಿರಬಹುದು. ಆದರೆ, ಥಿಯೇಟರ್ನಲ್ಲಿ ಕಲೆಕ್ಷನ್ ಆಗದೆ ಚಿತ್ರಕ್ಕೆ ಗೆಲುವು ಸಿಗೋದು ಅನುಮಾನ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








