AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯಾಘಾತ, ಇಂಜಂಕ್ಷನ್ ಎರಡೂ ಅಲ್ಲ; ಶೆಫಾಲಿ ಸಾವಿನ ಹಿಂದಿನ ರಹಸ್ಯ ತಿಳಿಸಿದ ವೈದ್ಯರು

42ನೇ ವಯಸ್ಸಿನಲ್ಲಿ ನಟಿ ಶೆಫಾಲಿ ಜರಿವಾಲ ಅವರು ನಿಧನರಾಗಿದ್ದಾರೆ. ಅವರು ಹಲವು ಮಾತ್ರೆಗಳನ್ನು ಸೇವಿಸುತ್ತಿದ್ದರು ಎಂದು ಕುಟುಂಬ ತಿಳಿಸಿದೆ. ಯಂಗ್ ಆಗಿ ಕಾಣಿಸುವಂತೆ ನೋಡಿಕೊಳ್ಳಲು ಅವರು ತೆಗೆದುಕೊಳ್ಳುತ್ತಿದ್ದ ಮಾತ್ರೆಗಳು ಸಿಕ್ಕಿವೆ. 'ಕಾಂಟ ಲಗ' ಹಾಡು ಮತ್ತು 'ಹುಡುಗರು' ಚಿತ್ರದ ಹಾಡಿನ ಮೂಲಕ ಅವರು ಜನಪ್ರಿಯರಾಗಿದ್ದರು.

ಹೃದಯಾಘಾತ, ಇಂಜಂಕ್ಷನ್ ಎರಡೂ ಅಲ್ಲ; ಶೆಫಾಲಿ ಸಾವಿನ ಹಿಂದಿನ ರಹಸ್ಯ ತಿಳಿಸಿದ ವೈದ್ಯರು
ಶೆಫಾಲಿ
ರಾಜೇಶ್ ದುಗ್ಗುಮನೆ
|

Updated on: Jun 30, 2025 | 6:54 AM

Share

ಶೆಫಾಲಿ ಜರಿವಾಲ (Shefali Jariwala) ಅವರು ನಿಧನ ಹೊಂದಿದ್ದಾರೆ. ಕೇವಲ 42ನೇ ವಯಸ್ಸಿಗೆ ಅವರು ಕೊನೆಯುಸಿರು ಎಳೆದಿದ್ದಾರೆ. ಅವರ ಸಾವಿಗೆ ಈವರೆಗೆ ಅಸಲಿ ಕಾರಣ ತಿಳಿದಿಲ್ಲ. ಕೆಲವರು ಅವರಿಗೆ ಹೃದಯಾಘಾತ ಆಗಿದೆ ಎಂದರು. ಇನ್ನೂ ಕೆಲವರು ವಯಸ್ಸಾಗದಂತೆ ನೋಡಿಕೊಳ್ಳಲು ಅವರು ಮಾತ್ರೆ​​ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಲಾಯಿತು. ಈಗ ಶೆಫಾಲಿ ಜರಿವಾಲ ಸಾವಿನ ಬಗ್ಗೆ ವೈದ್ಯರು ಹೊಸ ಮಾಹಿತಿ ನೀಡಿದ್ದಾರೆ. ಆದರೆ, ಈ ಕಾರಣವನ್ನು ಯಾರೂ ಊಹಿಸಿರಲಿಲ್ಲ.

ಶುಕ್ರವಾರ (ಜೂನ್ 27) ರಾತ್ರಿ ಶೆಫಾಲಿ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದರು. ಈ ವೇಳೆ ಜೊತೆಯಲ್ಲೇ ಇದ್ದ ಅವರ ಪತಿ ಪರಾಗ್ ತ್ಯಾಗಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ, ಆಸ್ಪತ್ರೆಗೆ ಬರೋ ಮೊದಲೆಯೇ ಅವರು ನಿಧನ ಹೊಂದಿದ್ದಾಗಿ ವೈದ್ಯರು ಘೋಷಿಸಿದರು. ಆ ಬಳಿಕ ಅವರ ಶವವನ್ನು ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

ಏಕಾಏಕಿ ಬಿಪಿ ಲೋ ಆಗಿದ್ದರಿಂದ ಶೆಫಾಲಿ ನಿಧನ ಹೊಂದಿದರು ಎಂದು ವೈದ್ಯರು ಶಂಕಿಸಿದ್ದಾರೆ. ಭಾನುವಾರ ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದರು. ಇದಕ್ಕಾಗಿ ನಟಿ ಉಪವಾಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ
Image
‘ಪಂಕಜಾ..’ ಹಾಡಿಗೆ ಕುಣಿದಿದ್ದ ಶೆಫಾಲಿ ಜರಿವಾಲ ಹೃದಯಘಾತದಿಂದ ಸಾವು  
Image
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ
Image
ಪಿಯುಸಿಯಲ್ಲಿ ಟಾಪರ್, ಐಎಎಸ್ ಓದಬೇಕಿದ್ದ ಯುವತಿ ನಟಿಯಾದ ಕಥೆ
Image
ವಿಚ್ಛೇದನ ಹಂತದಲ್ಲಿದ್ದ ನಟಿ ಈಗ ಪ್ರೆಗ್ನೆಂಟ್; ಆದರೆ, ಪತಿಗೇ ಗೊತ್ತೇ ಇಲ್ಲ

ಮನೆಯಲ್ಲಿ ಸಿಕ್ಕ ವಸ್ತುಗಳೇನು?

ಪೊಲೀಸರು ನಟಿಯ ಪತಿ ಮತ್ತು ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಅವರ ಮನೆ ಪರಿಶೀಲಿಸುವಾಗ ವಯಸ್ಸಾಗದಂತೆ ತಡೆಯಲು ಬಳಕೆ ಮಾಡುವ ಮಾತ್ರೆ, ಚರ್ಮಕ್ಕೆ ಹೊಳಪು ಕೊಡೋ ಮಾತ್ರೆಗಳು, ವಿಟಮಿನ್ ಮಾತ್ರೆಗಳನ್ನು ಸಿಕ್ಕಿವೆ. ಶೆಫಾಲಿ ಅವರು ವೈದ್ಯರ ಸಂಪರ್ಕಿಸದೆ ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಕುಟುಂಬ ತಿಳಿಸಿದೆ. ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದ ಕಾರಣಕ್ಕೆ ಅವರಿಗೆ ಈವರೆಗೆ ಯಾವುದೇ ತೊಂದರೆ ಆಗಿರಲಿಲ್ಲವಂತೆ.

ಇದನ್ನೂ ಓದಿ: ಸಾವಿಗೆ ಮುಂಚೆ ಆ ಇಂಜೆಕ್ಷನ್ ಪಡೆದಿದ್ದ ಶೆಫಾಲಿ, ಅದೇ ಕಾರಣವಾಯ್ತ?

ಶೆಫಾಲಿ ಅವರು ‘ಕಾಂಟ ಲಗ’ ಹಾಡಿನ ಮೂಲಕ ಸಖತ್ ಫೇಮಸ್ ಆದರು. ಅವರು ಕನ್ನಡದಲ್ಲೂ ಗುರುತಿಸಿಕೊಂಡಿದ್ದಾರೆ. ‘ಹುಡುಗರು’ ಸಿನಿಮಾದ ‘ಪಂಕಜಾ..’ ಹಾಡಿಗೆ ಅವರು ಭರ್ಜರಿ ಸ್ಟೆಪ್ ಹಾಕಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.