ಪಿಯುಸಿಯಲ್ಲಿ ಟಾಪರ್, ಐಎಎಸ್ ಓದಬೇಕಿದ್ದ ಯುವತಿ ನಟಿಯಾದ ಕಥೆ
ಈ ನಟಿ ಪಿಯುಸಿಯಲ್ಲಿ ಟಾಪರ್ ಆಗಿದ್ದರು. ಅವರು ಐಎಎಸ್ ಆಕಾಂಕ್ಷಿ, ಈಗ ಯಶಸ್ವಿನಿ ನಟಿಯಾಗಿದ್ದಾರೆ. ಅತ್ಯುತ್ತಮ ಅಂಕಗಳನ್ನು ಪಡೆದ ಅವರು, ತಮ್ಮ ಕನಸಿನ ವೃತ್ತಿಯನ್ನು ಬದಲಾಯಿಸಿಕೊಂಡು ಚಿತ್ರರಂಗಕ್ಕೆ ಪ್ರವೇಶಿಸಿದರು. ಮಾಡೆಲಿಂಗ್ ಮತ್ತು ಜಾಹೀರಾತುಗಳ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಅವರು ದಕ್ಷಿಣ ಭಾರತ ಮತ್ತು ಬಾಲಿವುಡ್‌ನಲ್ಲಿ ಯಶಸ್ಸು ಕಂಡಿದ್ದಾರೆ.

ನಾವು ಈಗ ಹೇಳುತ್ತಿರುವ ನಟಿ ದ್ವಿತೀಯ ಪಿಯುಸಿಯಲ್ಲಿ ಟಾಪರ್ ಆದರು. ಅವರ ಕನಸು ಇದ್ದಿದ್ದು ಐಎಎಸ್ (IAS) ಅಧಿಕಾರಿ ಆಗಬೇಕು ಎಂದು. ಆದರೆ, ಕೊನೆಗೆ ಅವರು ಆಗಿದ್ದು ನಟಿ. ಈಗ ನಾವು ಹೇಳುತ್ತಿರುವುದು ಬೇರಾರ ಬಗ್ಗೆಯೂ ಅಲ್ಲ. ನಟಿ ರಾಶಿ ಖನ್ನಾ ಬಗ್ಗೆ. ದಕ್ಷಿಣ ಭಾರತ ಹಾಗೂ ಬಾಲಿವುಡ್ ಮತ್ತು ಒಟಿಟಿಯಲ್ಲಿ ಹವಾ ಸೃಷ್ಟಿ ಮಾಡಿರುವ ಈ ನಟಿಯ ಕನಸು ಬೇರೆಯದೇ ಇತ್ತು. ಆದರೆ, ಈಗ ಅವರು ನಟಿಯಾಗಿ ಮೆರೆಯುತ್ತಿದ್ದಾರೆ. ಆಗಿದ್ದೆಲ್ಲ ಒಳ್ಳೆದಕ್ಕೆ ಎಂದು ಅವರು ಬಲವಾಗಿ ನಂಬಿದ್ದಾರೆ.
ರಾಶಿ ಖನ್ನಾ ಅವರು ದೆಹಲಿಯವರು. ಅವರು ಬಾಲಿವುಡ್ಗೆ ಬರೋದಕ್ಕೆ ಮಲದಲು ಅಡ್ವಟೈಸ್ಮೆಂಟ್ ಏಜೆನ್ಸಿಗಳಲ್ಲಿ ಕೆಲಸ ಮಾಡಿದರು. ಅವರು ಚಿತ್ರರಂಗಕ್ಕೆ ಬಂದ ಬಳಿಕ ಸಾಕಷ್ಟು ಜನಪ್ರಿಯತೆ ಪಡೆದರು. ಅವರಿಗೆ ಸೌಂದರ್ಯದ ಜೊತೆ ಬುದ್ಧಿವಂತಿಕೆಯೂ ಇದೆ. ಈ ಕಾರಣದಿಂದಲೇ ಅವರು ಹೆಚ್ಚು ಇಷ್ಟ ಆಗುತ್ತಾರೆ.
ರಾಶಿ ಖನ್ನಾ ಅವರು ಆರಂಭದಲ್ಲಿ ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡಲು ಬಯಸಿದ್ದರು. ಶಿಕ್ಷಣ ಪಡೆಯುವಾಗ ಇದುವೇ ಅವರ ಗೋಲ್ ಆಗಿತ್ತು. ಆದರೆ, ದೇವರು ಬೇರೆಯದೇ ಪ್ಲ್ಯಾನ್ನ ರೆಡಿ ಮಾಡಿ ಇಟ್ಟಂತೆ ಕಾಣುತ್ತದೆ. ಅವರು ಬಣ್ಣದ ಲೋಕವನ್ನು ಆಯ್ಕೆ ಮಾಡಿಕೊಂಡರು ಮತ್ತು ಇಲ್ಲಿ ಮಿಂಚಲು ಆರಂಭಿಸಿದರು.
ರಾಶಿ ಖನ್ನಾ ಅವರು ದಕ್ಷಿಣ ಭಾರತ ಹಾಗೂ ಬಾಲಿವುಡ್‌ನಲ್ಲಿ ಬೇಡಿಕೆಹೊಂದಿದ್ದಾರೆ. ಅವರು ವೆಬ್ ಸೀರಿಸ್ ಮೂಲಕ ಒಟಿಟಿಯಲ್ಲೂ ಹೆಸರು ಮಾಡಿದ್ದನ್ನು ನೀವು ಗಮನಿಸಿರಬಹುದು. ಈ ಬಗ್ಗೆ ಅವರಿಗೆ ಖುಷಿ ಇದೆ. ರಾಶಿ ಖನ್ನಾ ಅವರು 12ನೇ ತರಗತಿ ಬೋರ್ಡ್ ಎಕ್ಸಾಮ್ನಲ್ಲಿ ಟಾಪರ್ ಆದರು. ಅವರು ಶಿಕ್ಷಣವನ್ನು ದೆಹಲಿಯಲ್ಲಿ ಪಡೆದರು. ಸಿವಿಲ್ ಪರೀಕ್ಷೆ ಬರೆಯಬೇಕು ಎಂಬುದು ಅವರ ಆಸೆ ಆಗಿತ್ತು.
ಅವರು ಕಾಲೇಜು ದಿನಗಳಲ್ಲೇ ಐಎಎಸ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಕೊನೆಗೆ ಅವರಿಗೆ ನಟನೆ ಕೈ ಹಿಡಿಯಿತು. ಅಡ್ವಟೈಸ್ಮೆಂಟ್ ಏಜೆನ್ಸಿ ಬಳಿಕ ಮಾಡೆಲಿಂಗ್ ಪ್ರಯತ್ನಿಸಿ ಯಶಸ್ಸು ಕಂಡರು. ಆ ಬಳಿಕ ನಟನೆಯಲ್ಲಿ ಗೆಲುವು ಕಂಡರು.
ಇದನ್ನೂ ಓದಿ: ರಾಶಿ ಖನ್ನಾ ಮೂಗಲ್ಲಿ ರಕ್ತ; ಅಯ್ಯೋ ಅವರಿಗೇನಾಯ್ತು?
ರಾಶಿ ಖನ್ನಾ ಅವರು ಮದ್ರಾಸ್ ಕೆಫೆ ಚಿತ್ರದ ಮೂಲಕ ಗಮನ ಸೆಳೆದರು. ಜಾನ್ ಅಬ್ರಹಾಮ್ ಈ ಚಿತ್ರದ ಹೀರೋ. ಆ ಬಳಿಕ ಅಜಯ್ ದೇವಗನ್ ಮೊದಲಾದವರ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:55 am, Fri, 27 June 25







