‘ಆರ್ಯನ್ ಯಾವಾಗಲೂ ನಾನು ಮುಸ್ಲಿಂ ಎಂದೇ ಹೇಳುತ್ತಾನೆ’; ಗೌರಿ ಖಾನ್
ಶಾರುಖ್ ಖಾನ್ ಮತ್ತು ಗೌರಿ ಖಾನ್ ಎರಡೂ ಧರ್ಮಗಳನ್ನು ಗೌರವಿಸುತ್ತಿದ್ದಾರೆ. ಅವರು ತಮ್ಮ ಮಕ್ಕಳಿಗೆ ಧಾರ್ಮಿಕ ಸಹಿಷ್ಣುತೆಯನ್ನು ಬೋಧಿಸುತ್ತಿದ್ದಾರೆ. ಆರ್ಯನ್ ಖಾನ್ ತನ್ನ ಮುಸ್ಲಿಂ ಧರ್ಮವನ್ನು ಬಲವಾಗಿ ನಂಬುತ್ತಾನೆ ಎಂದು ಗೌರಿ ಖಾನ್ ಹಂಚಿಕೊಂಡಿದ್ದಾರೆ. ಶಾರುಖ್ ಅವರ ಧಾರ್ಮಿಕ ಸಹಿಷ್ಣುತೆ ಅವರ ಜೀವನದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಶಾರುಖ್ ಖಾನ್ (Shah Rukh Khan) ಹಾಗೂ ಗೌರಿ ಖಾನ್ ಅವರು ವಿವಾಹ ಆಗಿ ಹಲವು ವರ್ಷಗಳು ಕಳೆದಿವೆ. ಶಾರುಖ್ ಖಾನ್ ಮುಸ್ಲಿಂ ಮತ್ತು ಗೌರಿ ಹಿಂದು. ಈ ವಿವಾಹದ ಬಳಿಕ ಶಾರುಖ್ ಖಾನ್ ಅವರು ಗೌರಿಗೆ ಹೆಸರು ಬದಲಿಸಿಕೊಳ್ಳುವಂತೆ ಒತ್ತಾಯ ಹೇರಿಲ್ಲ. ಗೌರಿ ಅವರು ಹಿಂದೂ ಧರ್ಮವನ್ನು ಅನುಸರಿಸಬಾರದು ಎಂದು ಹೇಳಿಲ್ಲ. ಬದಲಿಗೆ ಶಾರುಖ್ ಖಾನ್ ಅವರೇ ಹಿಂದೂ ದೇವರನ್ನೂ ಆರಾಧಿಸುವುದನ್ನು ನೀವು ಕಾಣಬಹುದು. ಇಬ್ಬರು ಎರಡೂ ಧರ್ಮ ಅನುಸರಿಸಿದರೂ ಆರ್ಯನ್ ಖಾನ್ ಮಾತ್ರ ತಾವು ಮುಸ್ಲಿಂ ಎಂದು ಬಲವಾಗಿ ನಂಬುತ್ತಾರಂತೆ.
ಆರ್ಯನ್ ಖಾನ್ ಬಗ್ಗೆ ಗೌರಿ ಖಾನ್ ಅವರು ಕಾಫಿ ವಿತ್ ಕರಣ್ ಶೋನಲ್ಲಿ ಒಮ್ಮೆ ಹೇಳಿಕೊಂಡಿದ್ದರು. ‘ಆರ್ಯನ್ ಖಾನ್, ಶಾರುಖ್ ಖಾನ್ ಧರ್ಮವನ್ನು ಬಲವಾಗಿ ನಂಬುತ್ತಾನೆ. ಅವನು ಯಾವಾಗಲೂ ನಾನು ಮುಸ್ಲಿಂ ಎಂದು ಹೇಳುತ್ತಾನೆ’ ಎಂದು ಹೇಳಿಕೊಂಡಿದ್ದರು. ಈ ವಿಚಾರದಲ್ಲಿ ಗೌರಿ ಖಾನ್ ಅವರು ಸಾಕಷ್ಟು ಶಾಕ್ಗೆ ಒಳಗಾಗುತ್ತಾರಂತೆ. ಆದರೆ, ಒಂದು ಕುಟುಂಬವಾಗಿ ನೋಡಿಕೊಂಡು ಅವರು ಮುಂದಕ್ಕೆ ನಡೆಯುತ್ತಾರೆ.
‘ಪ್ರತಿಯೊಬ್ಬರೂ ಒಬ್ಬ ವ್ಯಕ್ತಿ ಮತ್ತು ಅವರ ಸ್ವಂತ ಧರ್ಮವನ್ನು ಅನುಸರಿಸುತ್ತಾರೆ ಎಂದಿದ್ದ ಗೌರಿ ಅವರು, ಶಾರುಖ್ ಕೂಡ ಯಾವಾಗಲೂ ತಮ್ಮ ನಂಬಿಕೆಗಳಿಗೆ ಸಮಾನ ಗೌರವವನ್ನು ತೋರಿಸಿದ್ದಾರೆ ಎಂದು ಹೇಳಿದ್ದರು.
ಶಾರುಖ್ ಖಾನ್ ಹಾಗೂ ಗೌರಿ ಖಾನ್ ಅವರು ಕುಟುಂಬದಲ್ಲಿ ಎರಡೂ ಧರ್ಮ ಫಾಲೋ ಮಾಡುತ್ತಾರೆ. ಗೌರಿ ಖಾನ್ಗಾಗಿ ಶಾರುಖ್ ಖಾನ್ ಅವರು ಹಿಂದೂ ಧರ್ಮವನ್ನು ಪರಿಪಾಲಿಸುತ್ತಾರೆ. ಈ ಕಾರಣದಿಂದಲೇ ಶಾರುಖ್ ಖಾನ್ ಅವರ ಮನೆಯಲ್ಲಿ ನೀವು ಗಣಪತಿ ಹಬ್ಬ ಇತ್ಯಾದಿಯನ್ನು ಆಚರಿಸೋದನ್ನು ನೋಡಬಹುದು. ಶಾರುಖ್ ಖಾನ್ ಅವರು ಈ ಮೊದಲು ಹಿಂದೂ ದೇವಾಲಯಗಳಿಗೆ ಭೇಟಿ ನೀಡಿದ್ದರು.
ಇದನ್ನೂ ಓದಿ: ಶಾರುಖ್ ಖಾನ್ ‘ಕಿಂಗ್’ ಚಿತ್ರಕ್ಕಾಗಿ ಸಾಂಗ್ ಮಾಡಿದ ಇಂಗ್ಲಿಷ್ ಸಿಂಗರ್ ಎಡ್ ಶೀರನ್
ಶಾರುಖ್ ಖಾನ್ ಹಾಗೂ ಗೌರಿ 1991ರ ಅಕ್ಟೋಬರ್ 25ರಂದು ವಿವಾಹ ಆದರು. ಈ ದಂಪತಿಗೆ ಆರ್ಯನ್, ಸುಹಾನಾ ಹಾಗೂ ಅಬ್ರಾಮ್ ಹೆಸರಿನ ಮಕ್ಕಳಿದ್ದಾರೆ. ಆರ್ಯನ್ ಖಾನ್ ಅವರು ಈಗಾಗಲೇ ವೆಬ್ ಸೀರಿಸ್ ಒಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಸುಹಾನಾ ಖಾನ್ ಈಗ ಸಿನಿಮಾ ಒಂದರಲ್ಲಿ ನಟಿಸಿಯಾಗಿದೆ. ಅವರು ‘ಕಿಂಗ್’ ಹೆಸರಿನ ಸಿನಿಮಾದಲ್ಲಿ ನಟಿಸಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







