AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದ ಪ್ರಶಾಂತ್ ನೀಲ್ ಜೊತೆ ಕೈ ಜೋಡಿಸಿದ ಅಲ್ಲು ಅರ್ಜುನ್? ಚಿತ್ರಕ್ಕೆ ಖಡಕ್ ಟೈಟಲ್

ಪ್ರಶಾಂತ್ ನೀಲ್ ಅವರು ತೆಲುಗು ಚಿತ್ರರಂಗದಲ್ಲಿ ತಮ್ಮ ಹೆಸರನ್ನು ಮುದ್ರಿಸಿಕೊಂಡಿದ್ದಾರೆ. ಅವರು ಜೂನಿಯರ್ ಎನ್‌ಟಿಆರ್ ಜೊತೆ ಒಂದು ಚಿತ್ರವನ್ನು ಮಾಡುತ್ತಿದ್ದಾರೆ. ಹೀಗಿರುವಾಗಲೇ ಅಲ್ಲು ಅರ್ಜುನ್ ಜೊತೆಗೆ ಅವರು ಹೊಸ ಚಿತ್ರ ಒಂದನ್ನು ಮಾಡುತ್ತಿದ್ದಾರೆ. ಈ ಬಗ್ಗೆ ವದಂತಿಗಳು ಹಬ್ಬಿವೆ. ಈ ಹೊಸ ಚಿತ್ರಕ್ಕೆ ‘ರಾವಣಂ’ ಎಂಬ ಶೀರ್ಷಿಕೆ ಇಡಲಾಗಿದೆ ಎನ್ನಲಾಗಿದೆ.

ಕನ್ನಡದ ಪ್ರಶಾಂತ್ ನೀಲ್ ಜೊತೆ ಕೈ ಜೋಡಿಸಿದ ಅಲ್ಲು ಅರ್ಜುನ್? ಚಿತ್ರಕ್ಕೆ ಖಡಕ್ ಟೈಟಲ್
ಪ್ರಶಾಂತ್​ ನೀಲ್-ಅಲ್ಲು ಅರ್ಜುನ್
ರಾಜೇಶ್ ದುಗ್ಗುಮನೆ
|

Updated on: Jun 25, 2025 | 6:59 AM

Share

ಕನ್ನಡದ ಪ್ರಶಾಂತ್ ನೀಲ್ (Prashanth Neel) ಅವರು ಸದ್ಯ ತೆಲುಗಿನಲ್ಲಿ ಬ್ಯುಸಿ ಇದ್ದಾರೆ. ಅಲ್ಲಿ ಅವರಿಗೆ ಸಾಕಷ್ಟು ಆಫರ್​ಗಳು ಬರುತ್ತಿವೆ. ‘ಕೆಜಿಫ್ 2’ ಬಳಿಕ ಅವರು ತೆಲುಗಿನಲ್ಲಿ ‘ಸಲಾರ್’ ಮಾಡಿದರು. ಈಗ ಜೂನಿಯರ್ ಎನ್​ಟಿಆರ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದಾದ ಬಳಿಕ ಅವರು ‘ಸಲಾರ್ 2’ ಕೂಡ ಮಾಡಬೇಕಿದೆ. ‘ಪುಷ್ಪ 3’ ಚಿತ್ರದ ಅಪ್​ಡೇಟ್ ಸದ್ಯಕ್ಕಂತೂ ಸಿಗೋ ಸೂಚನೆ ಇಲ್ಲ. ಹೀಗಿರುವಾಗಲೇ ಅವರಿಗೆ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡೋ ಆಫರ್ ಸಿಕ್ಕಿದೆ ಎಂದು ವರದಿ ಆಗಿದೆ. ಈ ಚಿತ್ರಕ್ಕೆ ಖಡಕ್ ಟೈಟಲ್ ಕೂಡ ಇಡಲಾಗಿದೆ ಎಂದು ಹೇಳಲಾಗುತ್ತಿದೆ.

ಅಲ್ಲು ಅರ್ಜುನ್ ಅವರು ಸದ್ಯ ಅಟ್ಲಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸದ್ಯ ‘AA22xA6’ ಎನ್ನುವ ಶೀರ್ಷಿಕೆ ಇಡಲಾಗಿದೆ. ಅಂದರೆ ಅಲ್ಲು ಅರ್ಜುನ್ ಅವರ 22ನೇ ಸಿನಿಮಾ ಹಾಗೂ ಅಟ್ಲಿ ಅವರ ಆರನೇ ಸಿನಿಮಾ ಇದು ಎಂಬುದನ್ನು ಸೂಚಿಸುತ್ತದೆ. ಇನ್ನು ಪ್ರಶಾಂತ್ ನೀಲ್ ಅವರು ಜೂನಿಯರ್ ಎನ್​ಟಿಆರ್ ಸಿನಿಮಾ ಶೂಟ್​​ಗಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟದಲ್ಲಿದ್ದಾರೆ. ಈಗ ಪ್ರಶಾಂತ್ ನೀಲ್ ಅವರು ಅಲ್ಲು ಜೊತೆ ಕೈ ಜೋಡಿಸುತ್ತಿದ್ದಾರೆ ಎನ್ನಲಾಗಿದೆ.

ಪ್ರಶಾಂತ್ ನೀಲ್ ಸಿನಿಮಾ ಟೈಟಲ್ ಭಿನ್ನವಾಗಿರುತ್ತದೆ. ಪ್ಯಾನ್ ಇಂಡಿಯಾಗೆ ಹೊಂದಿಕೆ ಆಗುವ ಶೀರ್ಷಿಕೆಯನ್ನು ಅವರು ಆಯ್ಕೆ ಮಾಡುತ್ತಾರೆ. ಈಗ ಅವರು ತಮ್ಮ ಹೊಸ ಚಿತ್ರಕ್ಕೆ ‘ರಾವಣಂ’ ಎಂದು ಟೈಟಲ್ ಇಟ್ಟಿದ್ದಾರೆ ಎನ್ನಲಾಗಿದೆ. ಈ ಸಿನಿಮಾನ ದಿಲ್ ರಾಜು ಅವರು ನಿರ್ಮಾಣ ಮಾಡೋ ಸಾಧ್ಯತೆ ಇದೆ.

ಇದನ್ನೂ ಓದಿ
Image
ಫಸ್ಟ್​ ಲವ್, ಫಸ್ಟ್ ಕಾರ್; ಎಲ್ಲಾ ಮೊದಲುಗಳ ಬಗ್ಗೆ ಮಾತನಾಡಿದ ರಶ್ಮಿಕಾ
Image
ಸೋಮವಾರದ ಪರೀಕ್ಷೆಯಲ್ಲಿ ‘ಕುಬೇರ’, ‘ಸಿತಾರೇ ಜಮೀನ್ ಪರ್’ ಪಾಸ್
Image
ವಿಷ್ಣು ಜನ್ಮದಿನವನ್ನು ‘ಯಜಮಾನರ ಅಮೃತ ಮಹೋತ್ಸವ’ ಆಗಿ ಆಚರಣೆ
Image
ನಿಜವಾದ ವಿಷಕಾರಿ ಜಂತುಗಳ ಜೊತೆ ರಾಜ್​ಕುಮಾರ್ ಶೂಟ್; ಇದಕ್ಕೆ ಗುಂಡಿಗೆ ಬೇಕು

ಇದನ್ನೂ ಓದಿ: ಪ್ರಶಾಂತ್ ನೀಲ್ ಸಿನಿಮಾಗಳ ಬಗ್ಗೆ ಸಂದೀಪ್ ರೆಡ್ಡಿ ವಂಗಾ ಹೇಳಿದ್ದೇನು? ನೀವು ಇದನ್ನು ಒಪ್ಪುತ್ತೀರ?

ಆದರೆ, ಈ ಬಗ್ಗೆ ಪ್ರಶಾಂತ್ ನೀಲ್ ಆಗಲಿ, ಅಲ್ಲು ಅರ್ಜುನ್ ಅಥವಾ ದಿಲ್ ರಾಜು ಆಗಲಿ ಸ್ಪಷ್ಟನೆ ನೀಡಿಲ್ಲ. ಈ ಸಿನಿಮಾ ‘ಕೆಜಿಎಫ್’ ಹಾಗೂ ‘ಸಲಾರ್’ ಫ್ರಾಂಚೈಸ್​ಗಿಂತ ದೊಡ್ಡದಾಗಿರುತ್ತದೆ ಎಂದು ಹೇಳಲಾಗಿದೆ.  ಜೂನಿಯರ್ ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ ಸಿನಿಮಾಗೆ ‘ಡ್ರ್ಯಾಗನ’ ಟೈಟಲ್ ಇಡಲಾಗಿದೆ ಎನ್ನಲಾಗಿದೆ. ಈ ಸಿನಿಮಾ 2026ರ ಜೂನ್ 25ರಂದು ತೆರೆಗೆ ಬರಲಿದೆ. ಅಂದರೆ ಇಂದಿಗೆ ಸರಿಯಾಗಿ ಒಂದು ವರ್ಷಕ್ಕೆ ಈ ಚಿತ್ರ ಬಿಡುಗಡೆ ಕಾಣಲಿದೆ. ಈ ಚಿತ್ರಕ್ಕೆ ಕನ್ನಡದ ರುಕ್ಮಿಣಿ ವಸಂತ್ ನಾಯಕಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.