AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮೋಜಿ ಫಿಲ್ಮ್​ ಸಿಟಿಯಲ್ಲಿ ದೆವ್ವ ಇದೆ ಎಂದು ಹೇಳಿ ಉಲ್ಟಾ ಹೊಡೆದ ಕಾಜೋಲ್

Kajol: ಬಾಲಿವುಡ್ ನಟಿ ಕಾಜೊಲ್, ‘ಮಾಮ್’ ಹಾರರ್ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾದ ಪ್ರಚಾರದ ವೇಳೆ ತಮಗೆ ಆದ ಹಾರರ್​ ಅನುಭವದ ಬಗ್ಗೆ ಹೇಳುತ್ತಾ ಹೈದರಾಬಾದ್​​ನ ಜನಪ್ರಿಯ ರಾಮೋಜಿ ಫಿಲಂ ಸಿಟಿಯಲ್ಲಿ ದೆವ್ವ ಇದೆ ಅನಿಸಿತ್ತು, ಸೆಟ್ ಬಿಟ್ಟು ಓಡಿ ಹೋಗಿದ್ದೆ ಎಂದಿದ್ದರು. ಆದರೆ ಕಾಜೊಲ್ ಹೇಳಿಕೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೆ, ನಟಿ ಹೇಳಿಕೆ ಬದಲಿಸಿದ್ದಾರೆ.

ರಾಮೋಜಿ ಫಿಲ್ಮ್​ ಸಿಟಿಯಲ್ಲಿ ದೆವ್ವ ಇದೆ ಎಂದು ಹೇಳಿ ಉಲ್ಟಾ ಹೊಡೆದ ಕಾಜೋಲ್
Kajol Devgn
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 24, 2025 | 6:40 PM

Share

ಇತ್ತೀಚೆಗೆ ಕಾಜೋಲ್ (Kajol) ಅವರು ಒಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಅವರು ‘ಮಾ’ ಹೆಸರಿನ ಹಾರರ್ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಪ್ರಚಾರದ ವೇಳೆ ಅವರು ‘ರಾಮೋಜಿ ಫಿಲ್ಮ್ ಸಿಟಿ’ ಬಗ್ಗೆ ಹೇಳಿಕೆ ನೀಡಿದ್ದರು. ಇದನ್ನು ಅವರು ದೆವ್ವದ ಜಾಗ ಎಂದು ಕರೆದಿದ್ದರು. ಅವರ ಹೇಳಿಕೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಈಗ ಅವರು ತಮ್ಮ ಹೇಳಿಕೆಗೆ ತೇಪೆ ಹಚ್ಚುವ ಕೆಲಸವನ್ನು ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಕಾಜೋಲ್ ಹೇಳಿಕೆ ಏನು?

ಹೈದರಾಬಾದ್​ನಲ್ಲಿ ರಾಮೋಜಿ ಫಿಲ್ಮ್ ಸಿಟಿ ಇದೆ. ಇಲ್ಲಿ ತೆಲುಗು ಸಿನಿಮಾಗಳ ಜೊತೆ ಕನ್ನಡ, ಹಿಂದಿ, ತಮಿಳು ಮೊದಲಾದ ಭಾಷೆಯ ಚಿತ್ರಗಳನ್ನು ಶೂಟ್ ಮಾಡಲಾಗಿದೆ. ಅಲ್ಲಿ ವಿವಿಧ ರೀತಿಯ ಸೆಟ್​ಗಳನ್ನು ನೀವು ಕಾಣಬಹುದು. ಒಮ್ಮೆ ಒಳ ಹೊಕ್ಕಿದರೆ ಸಂಪೂರ್ಣ ಶೂಟ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಬರಬಹುದು. ಕಾಜೋಲ್ ಕೂಡ ಅನೇಕ ಚಿತ್ರಗಳ ಶೂಟ್​ನ ಇಲ್ಲಿ ಮಾಡಿದ್ದಾರೆ. ಅಲ್ಲಿ ತಮಗೆ ಆದ ಅನುಭವ ಹೇಗಿತ್ತು ಎಂಬುದನ್ನು ಅವರು ಹೇಳಿಕೊಂಡಿದ್ದರು.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದ ಕಾಜೋಲ್. ‘ಭಯ ಆಗೋ ಅನೇಕ ಸ್ಥಳಗಳು ಇವೆ. ಹೈದರಾಬಾದ್​ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿ ಅದಕ್ಕೆ ಉತ್ತಮ ಉದಾಹರಣೆ. ಜಗತ್ತಿನಲ್ಲಿ ಹೆಚ್ಚು ಭಯಬೀಳಿಸುವ ಸ್ಥಳಗಳಲ್ಲಿ ಇದು ಕೂಡ ಒಂದು ಎಂದು ಪರಿಗಣಿಸಲಾಗುತ್ತದೆ. ನನಗೆ ಒಳಗೆ ಹೋದಾಗ ಭಯ ಆಯಿತು ಮತ್ತು ಹೊರ ಬಂದರೆ ಸಾಕು ಎನಿಸುತ್ತಿತ್ತು’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ:Kajol: ಬಾಲಿವುಡ್‌ ಕೃಷ್ಣ ಸುಂದರಿ ಕಾಜೊಲ್‌ ನ್ಯೂ ಲುಕ್​​ ಇಲ್ಲಿದೆ ನೋಡಿ

ಸ್ಪಷ್ಟೀಕರಣ ನೀಡಿದ್ರಾ ಕಾಜೋಲ್?

ಈಗ ನಟಿ ಸ್ಪಷ್ಟನೆ ನೀಡಿದರೇ ಎನ್ನುವ ಪ್ರಶ್ನೆ ಮೂಡಿದೆ. ‘ನನ್ನ ಮಾ ಚಿತ್ರದ ಪ್ರಚಾರದ ಸಂದರ್ಭದಲ್ಲಿ ರಾಮೋಜಿ ಫಿಲ್ಮ್ ಸಿಟಿಯ ಬಗ್ಗೆ ಹೇಳಿಕೆ ನೀಡಿದ್ದೆ. ಅದರ ಬಗ್ಗೆ ನಾನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ನಾನು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅನೇಕ ಸಿನಿಮಾಗಳ ಶೂಟ್ ಮಾಡಿದ್ದೇನೆ. ನಾನು ಹಲವು ಬಾರಿ ಅಲ್ಲಿಯೇ ಉಳಿದುಕೊಂಡಿದ್ದೇನೆ. ಸಿನಿಮಾ ನಿರ್ಮಾಣಕ್ಕೆ ಇದು ಒಳ್ಳೆಯ ಜಾಗ. ಪ್ರವಾಸಿಗರು ಇಲ್ಲಿ ಎಂಜಾಯ್ ಮಾಡೋದನ್ನು ನೋಡಿದ್ದೇನೆ. ಇದು ಉತ್ತಮ ಸ್ಥಳ. ಕುಟುಂಬಗಳು ಮತ್ತು ಮಕ್ಕಳಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ’ ಎಂದು ಕಾಜೋಲ್ ಹೇಳಿದ್ದಾರೆ.

ಕಾಜೋಲ್ ಈ ಮೊದಲು ನೀಡಿದ್ದ ಹೇಳಿಕೆ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಈ ಕಾರಣದಿಂದ ನಟಿ ಈ ರೀತಿಯ ಹೇಳಿಕೆ ನೀಡಿರಬಹುದು ಎಂದು ಅನೇಕರು ಊಹಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ