AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮ ಮಧ್ಯೆ ಅದು ನಡೆದಿಲ್ಲ’; ಹಾರ್ದಿಕ್ ಜೊತೆಗಿನ ಲವ್ವಿ-ಡವ್ವಿ ಬಗ್ಗೆ ಇಶಾ ಗುಪ್ತಾ ನೇರ ಮಾತು

2018ರಲ್ಲಿ ನಟಿ ಇಶಾ ಗುಪ್ತಾ ಮತ್ತು ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಅವರ ಡೇಟಿಂಗ್ ವದಂತಿಗಳು ಹಬ್ಬಿದ್ದವು. ಇಶಾ ಅವರು ಈ ವದಂತಿಗಳನ್ನು ನಿರಾಕರಿಸಿದ್ದಾರೆ. ಎರಡು ತಿಂಗಳ ಕಾಲ ಮಾತನಾಡಿದ್ದರೂ ಡೇಟಿಂಗ್ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ 'ಕಾಫಿ ವಿತ್ ಕರಣ್' ಶೋನಲ್ಲಿನ ಹೇಳಿಕೆಯನ್ನು ಇಶಾ ಖಂಡಿಸಿದ್ದರು.

‘ನಮ್ಮ ಮಧ್ಯೆ ಅದು ನಡೆದಿಲ್ಲ’; ಹಾರ್ದಿಕ್ ಜೊತೆಗಿನ ಲವ್ವಿ-ಡವ್ವಿ ಬಗ್ಗೆ ಇಶಾ ಗುಪ್ತಾ ನೇರ ಮಾತು
ಹಾರ್ದಿಕ್-ಇಶಾ
ರಾಜೇಶ್ ದುಗ್ಗುಮನೆ
|

Updated on:Jun 25, 2025 | 7:31 AM

Share

ಸೆಲೆಬ್ರಿಟಿಗಳು ಎಂದಮೇಲೆ ಅವರ ಹೆಸರುಗಳು ಆಗಾಗಾ ಡೇಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಆಗುತ್ತವೆ. ಒಬ್ಬರ ಜೊತೆ ಒಬ್ಬರು ಕಾಣಿಸಿಕೊಂಡರೆ ಸಾಕು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬುತ್ತದೆ. ಈ ಮೊದಲು ನಟಿ ಇಶಾ ಗುಪ್ತಾ (Esha Gupta) ಹಾಗೂ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಮಧ್ಯೆ ಡೇಟಿಂಗ್ ನಡೆದಿದೆ ಎಂಬ ಸುದ್ದಿ ಹಬ್ಬಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಇಶಾ ಅವರು ಸ್ಪಷ್ಟನೆ ನೀಡಿದ್ದು, ನಮ್ಮ ಮಧ್ಯೆ ಅಂಥದ್ದೇನು ನಡೆದಿಲ್ಲ ಎಂದಿದ್ದಾರೆ.

ಅದು 2018ರ ಸಮಯ. ಇಶಾ ಗುಪ್ತಾ ಹಾಗೂ ಹಾರ್ದಿಕ್ ಪಾಂಡ್ಯ ಪಾರ್ಟಿ ಒಂದರಲ್ಲಿ ಭೇಟಿ ಆದರು. ಈ ವೇಳೆ ಇಬ್ಬರ ಮಧ್ಯೆ ಪರಿಚಯ ಬೆಳೆಯಿತು ಎನ್ನಲಾಗಿದೆ. ಆದರೆ, ಇದು ಹೆಚ್ಚು ದಿನ ಉಳಿಯಲಿಲ್ಲ. ಅಚ್ಚರಿ ಎಂದರೆ ‘ಕಾಫಿ ವಿತ್ ಕರಣ್’ ಶೋನಲ್ಲಿ ಹಾರ್ದಿಕ್ ಪಾಂಡ್ಯ ಅವರು ಅಶ್ಲೀಲ ಕಮೆಂಟ್ ಮಾಡಿದಾಗ ಅದನ್ನು ಇಶಾ ಗುಪ್ತಾ ಖಂಡಿಸಿದ್ದರು. ಹಾಗಾದರೆ ಇವರ ಮಧ್ಯೆ ನಡೆದಿದ್ದು ಏನು? ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ಹೌದು, ನಾವು ಸ್ವಲ್ಪ ಸಮಯದಿಂದ ಮಾತನಾಡುತ್ತಾ ಇದ್ದಿದ್ದು ನಿಜ. ಆದರೆ, ನಾವು ಡೇಟಿಂಗ್ ಮಾಡುತ್ತಿರಲಿಲ್ಲ. ಎರಡು ತಿಂಗಳ ಕಾಲ ನಮ್ಮ ಮಧ್ಯೆ ಮಾತುಕತೆ ಇತ್ತು. ನಮ್ಮ ಮಧ್ಯೆ ಹೊಂದಾಣಿಕೆ ಆಗಬಹುದು ಅಥವಾ ಆಗದೇ ಇರಬಹುದು ಎಂಬ ಹಂತದಲ್ಲೇ ಇದ್ದೆವು. ನಮ್ಮ ಮಧ್ಯೆ ಡೇಟಿಂಗ್ ನಡೆಯುವ ಮೊದಲೇ ಅದು ಕೊನೆಗೊಂಡಿತು. ಹೀಗಾಗಿ ನಮ್ಮ ಮಧ್ಯೆ ಡೇಟಿಂಗ್ ಎಂಬುದು ನಡೆದಿಲ್ಲ. ನಾವು ಎರಡು ಬಾರಿ ಮಾತ್ರ ಭೇಟಿ ಆಗಿದ್ದೆವು ಅಷ್ಟೇ. ಆ ಬಳಿಕ ಅದು ಕೊನೆ ಆಯಿತು’ ಎಂದಿದ್ದಾರೆ ಇಶಾ.

ಇದನ್ನೂ ಓದಿ
Image
ಕನ್ನಡದ ಪ್ರಶಾಂತ್ ನೀಲ್ ಜೊತೆ ಕೈ ಜೋಡಿಸಿದ ಅಲ್ಲು ಅರ್ಜುನ್? ಖಡಕ್ ಟೈಟಲ್
Image
ಫಸ್ಟ್​ ಲವ್, ಫಸ್ಟ್ ಕಾರ್; ಎಲ್ಲಾ ಮೊದಲುಗಳ ಬಗ್ಗೆ ಮಾತನಾಡಿದ ರಶ್ಮಿಕಾ
Image
ಸೋಮವಾರದ ಪರೀಕ್ಷೆಯಲ್ಲಿ ‘ಕುಬೇರ’, ‘ಸಿತಾರೇ ಜಮೀನ್ ಪರ್’ ಪಾಸ್
Image
ನಿಜವಾದ ವಿಷಕಾರಿ ಜಂತುಗಳ ಜೊತೆ ರಾಜ್​ಕುಮಾರ್ ಶೂಟ್; ಇದಕ್ಕೆ ಗುಂಡಿಗೆ ಬೇಕು

ಇದನ್ನೂ ಓದಿ: ನಿರ್ಮಾಪಕನಿಂದ ಪಾರಾಗಲು ಮೇಕಪ್​ ಮ್ಯಾನ್ ಜೊತೆ ರೂಂ ನಲ್ಲಿ ಮಲಗಿದ್ದೆ: ನಟಿ ಇಶಾ ಗುಪ್ತಾ

2019ರ ‘ಕಾಫಿ ವಿತ್ ಕರಣ್’ ಶೋನಲ್ಲಿ ಹಾರ್ದಿಕ್ ಪಾಂಡ್ಯ ನೀಡಿದ ಹೇಳಿಕೆ ಇಶಾಗೆ ಬೇಸರ ಮೂಡಿಸಿತ್ತೇ? ಈ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ‘ಅದು ನನಗೆ ಯಾವುದೇ ಹಾನಿ ಮಾಡಿಲ್ಲ. ಏಕೆಂದರೆ ನಾವು ಆಗಲೇ ಮಾತನಾಡುವುದನ್ನು ನಿಲ್ಲಿಸಿದ್ದೆವು’ ಎಂದಿದ್ದಾರೆ ಅವರು. ಹಾರ್ದಿಕ್ ಪಾಂಡ್ಯ ಅವರ ಹೇಳಿಕೆಯನ್ನು ಕೆಲವೇ ಕೆಲವು ಸೆಲೆಬ್ರಿಟಿಗಳು ಖಂಡಿಸಿದ್ದರು. ಅದರಲ್ಲಿ ಇಶಾ ಕೂಡ ಇದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:30 am, Wed, 25 June 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ