AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿ ಫ್ಯಾಮಿಲಿ ಮ್ಯಾನ್ 3’ ಮೇಲಿನ ನಿರೀಕ್ಷೆ ಹೆಚ್ಚಿಸಿದ ಹೊಸ ಪೋಸ್ಟರ್

‘ದಿ ಫ್ಯಾಮಿಲಿ ಮ್ಯಾನ್ 3’ ಯಾವಾಗ ಬರಲಿದೆ ಎಂದು ಕಾದಿದ್ದ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ವೆಬ್ ಸರಣಿಯಿಂದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಜನರ ಕೌತುಕ ಹೆಚ್ಚಿಸಲಾಗಿದೆ. ಮನೋಜ್ ಬಾಜಪೇಯಿ, ಪ್ರಿಯಾಮಣಿ ಮುಂತಾದವರು ನಟಿಸಿರುವ ‘ದಿ ಫ್ಯಾಮಿಲಿ ಮ್ಯಾನ್’ ಮೂರನೇ ಸೀಸನ್​ಗೆ ರಾಜ್ ಮತ್ತು ಡಿಕೆ ನಿರ್ದೇಶನ ಮಾಡುತ್ತಿದ್ದಾರೆ.

‘ದಿ ಫ್ಯಾಮಿಲಿ ಮ್ಯಾನ್ 3’ ಮೇಲಿನ ನಿರೀಕ್ಷೆ ಹೆಚ್ಚಿಸಿದ ಹೊಸ ಪೋಸ್ಟರ್
Manoj Bajpayee
ಮದನ್​ ಕುಮಾರ್​
|

Updated on: Jun 24, 2025 | 10:51 PM

Share

ಭಾರತದ ವೆಬ್ ಸಿರೀಸ್​ಗಳಲ್ಲಿ ‘ದಿ ಫ್ಯಾಮಿಲಿ ಮ್ಯಾನ್’ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಎರಡು ಸೀಸನ್​ಗಳಲ್ಲಿ ಈ ವೆಬ್ ಸರಣಿ ಯಶಸ್ವಿ ಆಗಿದೆ. ‘ದಿ ಫ್ಯಾಮಿಲಿ ಮ್ಯಾನ್’ ಮತ್ತು ‘ದಿ ಫ್ಯಾಮಿಲಿ ಮ್ಯಾನ್ 2’ ಯಶಸ್ಸಿನ ಬಳಿಕ ‘ದಿ ಫ್ಯಾಮಿಲಿ ಮ್ಯಾನ್ 3’ (The Family Man Season 3) ಬರುತ್ತಿದೆ. ಈ ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಮನೆ ಮಾಡಿದೆ. ನಟ ಮನೋಜ್ ಬಾಜಪಾಯಿ (Manoj Bajpayee) ಅವರು ಈ ಬಾರಿ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇದರ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಲಾಗಿದೆ. ‘ಅಮೇಜಾನ್ ಪ್ರೈಂ ವಿಡಿಯೋ’ (Amazon Prime Video) ಮೂಲಕ ‘ದಿ ಫ್ಯಾಮಿಲಿ ಮ್ಯಾನ್ 3’ ಪ್ರಸಾರ ಆಗಲಿದೆ.

‘ದಿ ಫ್ಯಾಮಿಲಿ ಮ್ಯಾನ್ ಮತ್ತೆ ಬರುತ್ತಿದ್ದಾನೆ’ ಎಂಬ ಬರಹ ಈ ಪೋಸ್ಟರ್​ನಲ್ಲಿದೆ. 3ನೇ ಸೀಸನ್ ನೋಡಲು ಒಟಿಟಿ ಪ್ರೇಕ್ಷಕರು ಕಾದಿದ್ದಾರೆ. ನಟ ಮನೋಜ್ ಬಾಜಪೇಯಿ ಅವರು ಈ ಬಾರಿ ಕೂಡ ಶ್ರೀಕಾಂತ್ ತಿವಾರಿ ಪಾತ್ರದಲ್ಲಿ ಮಿಂಚಲಿದ್ದಾರೆ. 2 ಸೀಸನ್​ಗಳ ಯಶಸ್ಸಿನ ಬಳಿಕ ಅಭಿಮಾನಿಗಳ ನಿರೀಕ್ಷೆ ಜಾಸ್ತಿ ಆಗಿದೆ. ಹಾಗಾಗಿ 3ನೇ ಸೀಸನ್ ಭರ್ಜರಿಯಾಗಿರಲಿದೆ ಎಂಬುದಕ್ಕೆ ಈ ಪೋಸ್ಟರ್ ಸಾಕ್ಷಿಯಾಗಿದೆ.

ಇದನ್ನೂ ಓದಿ
Image
ಪ್ರಸಾರಭಾರತಿಯಿಂದ ವೇವ್ಸ್ ಒಟಿಟಿ; ಕೇಬಲ್ ಆಪರೇಟರ್ಸ್​ಗೆ ಆತಂಕ
Image
ಕನ್ನಡ ಸಿನಿಮಾಗಳಿಗೆ ಕಡಿಮೆ ದರದ ಹೊಸ ಒಟಿಟಿ ವೇದಿಕೆ
Image
ಅಸಭ್ಯ ಮತ್ತು ಅಶ್ಲೀಲ ವಿಷಯಗಳಿರುವ 18 OTT ಪ್ಲಾಟ್‌ಫಾರ್ಮ್​​ಗೆ ನಿರ್ಬಂಧ
Image
ಸರ್ಕಾರದಿಂದಲೇ ಶುರುವಾಗಲಿದೆ ಹೊಸ ಒಟಿಟಿ; ಭಾರತದಲ್ಲಿ ಇದು ಮೊದಲ ಪ್ರಯತ್ನ

‘ಅಮೇಜಾನ್ ಪ್ರೈಂ ವಿಡಿಯೋ’ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ‘ದಿ ಫ್ಯಾಮಿಲಿ ಮ್ಯಾನ್ 3’ ವೆಬ್ ಸರಣಿಯ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಇದಕ್ಕೆ ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಪ್ರತಿಕ್ರಿಯಿಸಿದ್ದಾರೆ. ನಟಿ ಸಮಂತಾ ರುತ್ ಪ್ರಭು ಕೂಡ ಈ ವೆಬ್ ಸರಣಿ ನೋಡಲು ಕಾದಿದ್ದಾರೆ. ಶ್ರೇಯಾ ಧನ್ವಂತರಿ, ಶರೀಬ್ ಹಷ್ಮಿ ಮುಂತಾದವರು ಕಮೆಂಟ್ ಮಾಡಿದ್ದಾರೆ.

‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್​ನಲ್ಲಿ ನಟಿ ಸಮಂತಾ ರುತ್ ಪ್ರಭು ಅವರು ವಿಲನ್ ಪಾತ್ರ ಮಾಡಿದ್ದರು. ಈಗ 3ನೇ ಸೀಸನ್​ನಲ್ಲಿ ಖ್ಯಾತ ನಟ ಜಯದೀಪ್ ಅಹಲಾವತ್ ಅವರು ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಒಂದು ವೇಳೆ ಅವರು ವಿಲನ್ ಪಾತ್ರ ಮಾಡಿದ್ದು ಹೌದಾದರೆ ಥ್ರಿಲ್ ಹೆಚ್ಚಲಿದೆ.

ಇದನ್ನೂ ಓದಿ: ಒಟಿಟಿಯಲ್ಲಿ ರಿಲೀಸ್ ಆದ ಈ ಕಾಮಿಡಿ ಚಿತ್ರವನ್ನು ಮಿಸ್ ಮಾಡಲೇಬೇಡಿ; ಕನ್ನಡದಲ್ಲೂ ಲಭ್ಯ

ಸದ್ಯಕ್ಕೆ ‘ದಿ ಫ್ಯಾಮಿಲಿ ಮ್ಯಾನ್ 3’ ಪೋಸ್ಟರ್ ಮಾತ್ರ ರಿಲೀಸ್ ಆಗಿದೆ. ಸ್ಟ್ರೀಮಿಂಗ್ ದಿನಾಂಕದ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಆದಷ್ಟು ಬೇಗ ಆ ಬಗ್ಗೆ ಸುದ್ದಿ ಹೊರಬೀಳಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ರಾಜ್ ಮತ್ತು ಡಿಕೆ ಅವರು ಈ ವೆಬ್ ಸರಣಿಗೆ ನಿರ್ದೇಶನ ಮಾಡಿದ್ದಾರೆ. ‘ಫರ್ಜಿ’ ವೆಬ್ ಸರಣಿಯ ಪಾತ್ರಗಳು ‘ದಿ ಫ್ಯಾಮಿಲಿ ಮ್ಯಾನ್ 3’ ವೆಬ್ ಸೀರೀಸ್​ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.