AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ಸಿನಿಮಾಗಳಿಗೆ ಕಡಿಮೆ ದರದ ಹೊಸ ಒಟಿಟಿ ವೇದಿಕೆ

ಕನ್ನಡ ಸಿನಿಮಾಗಳನ್ನು ಒಟಿಟಿಗಳು ಖರೀದಿ ಮಾಡುತ್ತಿಲ್ಲ ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ಕನ್ನಡ ಸಿನಿಮಾಗಳಿಗಾಗಿ ಪ್ರತ್ಯೇಕ ಒಟಿಟಿ ವೇದಿಕೆ ನಿರ್ಮಿಸುವ ಪ್ರಯತ್ನಗಳೂ ಸಹ ನಡೆದಿವೆ. ಇದರ ನಡುವೆ ಈಗ ನಿರ್ಮಾಣ ಸಂಸ್ಥೆಯೊಂದು ‘ಒಟಿಟಿ ಪ್ಲೇಯರ್’ ಅನ್ನು ಬಿಡುಗಡೆ ಮಾಡಿದೆ.

ಕನ್ನಡ ಸಿನಿಮಾಗಳಿಗೆ ಕಡಿಮೆ ದರದ ಹೊಸ ಒಟಿಟಿ ವೇದಿಕೆ
ಮಂಜುನಾಥ ಸಿ.
|

Updated on: Oct 26, 2024 | 9:33 AM

Share

ಕನ್ನಡ ಸಿನಿಮಾಗಳನ್ನು ಒಟಿಟಿಗಳು ಖರೀದಿ ಮಾಡುತ್ತಿಲ್ಲ ಎಂಬ ದೂರು ಕಳೆದ ಕೆಲ ವರ್ಷಗಳಿಂದಲೂ ಕೇಳಿ ಬರುತ್ತಲೇ ಇದೆ. ಕನ್ನಡ ಸಿನಿಮಾಗಳನ್ನು ಒಟಿಟಿಗಳು ತಾತ್ಸಾರದಿಂದ ನೋಡುತ್ತವೆ. ಒಟಿಟಿಗಳಿಗೆ ಹೆಚ್ಚು ಸಬ್​ಸ್ಕ್ರೈಬರ್​ಗಳು ಇರುವುದು ಕರ್ನಾಟಕದಲ್ಲಿಯೇ ಆದರೆ ಅವರು ಕನ್ನಡ ಸಿನಿಮಾಗಳನ್ನು ಮಾತ್ರ ಖರೀದಿ ಮಾಡಿ ಪ್ರದರ್ಶನ ಮಾಡುವುದಿಲ್ಲ ಎಂಬ ದೂರು ಇದೆ. ಕನ್ನಡಿಗರಿಗೆ ಕನ್ನಡದ್ದೇ ಆದ ಒಟಿಟಿ ನಿರ್ಮಾಣ ಆಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇದೆ. ಕೆಲವು ಪ್ರಯತ್ನಗಳು ಈ ನಿಟ್ಟಿನಲ್ಲಿ ಆಗಿವೆಯಾದರೂ ದೊಡ್ಡ ಯಶಸ್ಸು ದೊರೆತಿಲ್ಲ. ಇದೀಗ ಕನ್ನಡದ್ದೇ ಆದ ಹೊಸ ಒಟಿಟಿ ವೇದಿಕೆಯೊಂದು ಬಿಡುಗಡೆ ಆಗಿದೆ.

‘ಒಟಿಟಿ ಪ್ಲೇಯರ್’ ಹೆಸರಿನ ಹೊಸ ಒಟಿಟಿ ಬಿಡುಗಡೆ ಮಾಡಲಾಗಿದೆ. ಆದರೆ ಇದು ಆಪ್​ ಮಾದರಿಯ ಒಟಿಟಿ ಅಲ್ಲ, ಬದಲಿಗೆ ವೆಬ್​ಸೈಟ್ ಆಗಿದೆ. ಅತ್ಯಂತ ಕಡಿಮೆ ಮೊತ್ತದಲ್ಲಿ ವೆಬ್​ಸೈಟ್​ಗೆ ಹೋಗಿ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ. ಹಾರ್ಲೀ ಎಂಟರ್ ಟೈನ್ ಮೆಂಟ್ ಮೀಡಿಯಾ ಸಂಸ್ಥೆ ಅಡಿಯಲ್ಲಿ ಗೀತಾ ಕೃಷ್ಣನ್ ರಾವ್ ಹಾಗೂ ಮುರಳಿರಾವ್ ಅವರು ಈ ವೆಬ್ ಸೈಟ್ ಅಭಿವೃದ್ಧಿಪಡಿಸಿದ್ದಾರೆ. ಇದರ ಮೂಲಕ ಯಾವುದೇ ಅಡೆತಡೆಗಳಿಲ್ಲದೆ, ಜಾಹೀರಾತು ಮುಕ್ತವಾಗಿ ತಮ್ಮ ನೆಚ್ಚಿನ ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ:ಒಟಿಟಿಗೆ ಬರಲಿದೆ ಜೂ ಎನ್​ಟಿಆರ್ ‘ದೇವರ’, ಯಾವ್ಯಾವ ಸಿನಿಮಾ ಈ ವಾರ?

‘ಒಟಿಟಿ ಪ್ಲೇಯರ್’ ಬಗ್ಗೆ ಮಾತನಾಡಿದ ಮುರಳಿರಾವ್ ಇದೊಂದು ಹೊಸ ಪ್ರಯತ್ನ, ನಿರ್ಮಾಪಕರೊಬ್ಬರು ನಮ್ಮನ್ನು ಭೇಟಿ ಮಾಡಿ ಒಟಿಟಿಗಳು ಕನ್ನಡ ಸಿನಿಮಾಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ತಮ್ಮ ಕಷ್ಟ ಹೇಳಿಕೊಂಡಾಗ ಈ ಆಲೋಚನೆ ಬಂತು. ಈಗ ಎಲ್ಲರೂ ಓಟಿಟಿಯಲ್ಲಿ ಚಿತ್ರ ಯಾವಾಗ ಬರುತ್ತೆ ಅಂತ ಕಾಯುತ್ತಾರೆ. ನಮ್ಮ ವೆಬ್ ಸೈಟ್ ಗೆ ಲಾಗಿನ್​ ಆಗಿ ಅಲ್ಪದರ ಪಾವತಿಸಿ ಹೊಸ ಚಿತ್ರಗಳನ್ನು ನೋಡಬಹುದು. ಇದನ್ನು ಆನ್ ಲೈನ್ ಥೇಟರ್ ಅನ್ನಬಹುದು‌. ಬಂದ ಹಣದಲ್ಲಿ ನಿರ್ಮಾಪಕರಿಗೆ 70% ಶೇರ್ ಕೊಡುತ್ತೇವೆ. ಅಲ್ಲದೆ ಉತ್ತಮ ಕಿರು ಚಿತ್ರಗಳನ್ನು ಕೂಡ ನಮ್ಮ ವೆಬ್ ಸೈಟ್ ಬಿಡುಗಡೆ ಮಾಡುತ್ತೇವೆ’ ಎಂದು ವಿವರಿಸಿದರು.

ಕನ್ನಡದಲ್ಲಿ ಈಗಾಗಲೇ ಕೆಲವು ಒಟಿಟಿಗಳು ಕೆಲಸ ಮಾಡುತ್ತಿವೆ. ‘ನಮ್ಮ ಫ್ಲೆಕ್ಸ್​’ ಸೇರಿದಂತೆ ಇನ್ನೂ ಕೆಲವು ಒಟಿಟಿಗಳು ಇವೆ ಆದರೆ ಯಾವುದೂ ಸಹ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಇನ್ನೂ ಗಳಿಸಿಲ್ಲ. ಒಟಿಟಿ ಪ್ಲೇಯರ್​ನಲ್ಲಿ ಕೆಲ ಕನ್ನಡ ಸಿನಿಮಾಗಳು, ಕನ್ನಡ ಕಿರುಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಕೆಲವು ಇಂಗ್ಲೀಷ್ ಸಿನಿಮಾಗಳನ್ನೂ ಸಹ ಪ್ರದರ್ಶಿಸಲಾಗುತ್ತಿದೆ. ಹಲವು ಸಿನಿಮಾಗಳ ಶೀಘ್ರವೇ ಬರಲಿವೆ ಎಂದು ಜಾಹೀರಾತು ಹಾಕಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ