ಒಟಿಟಿಗೆ ಬರಲಿದೆ ಜೂ ಎನ್ಟಿಆರ್ ‘ದೇವರ’, ಯಾವ್ಯಾವ ಸಿನಿಮಾ ಈ ವಾರ?
OTT Release This Week: ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಕೆಲವೇ ದಿನಗಳಲ್ಲಿ ಒಟಿಟಿಗೆ ಬರಲಿದೆ. ಇದರ ಜೊತೆಗೆ ಈ ವಾರ ಒಟಿಟಿಗೆ ಬಿಡುಗಡೆ ಆಗಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.
ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಬಿಡುಗಡೆ ಆಗಿ ಒಂದು ತಿಂಗಳೂ ಸಹ ಆಗಿಲ್ಲ. ಸೆಪ್ಟೆಂಬರ್ 27ಕ್ಕೆ ಈ ಸಿನಿಮಾ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆದಾಗ ಮಿಶ್ರ ಪ್ರತಿಕ್ರಿಯೆಗಳನ್ನು ಎದುರಿಸಿದ್ದರೂ ಸಹ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಗೆಲುವನ್ನೇ ತನ್ನದಾಗಿಸಿಕೊಂಡಿದೆ. ‘ದೇವರ’ ಸಿನಿಮಾ ಈ ವರೆಗೂ ಸುಮಾರು 600 ಕೋಟಿಗೂ ಹೆಚ್ಚು ಹಣವನ್ನು ಬಾಕ್ಸ್ ಆಫೀಸ್ನಲ್ಲಿ ಗಳಿಸಿದೆ ಎನ್ನಲಾಗುತ್ತಿದೆ. ಸಿನಿಮಾ ಬಿಡುಗಡೆ ಆಗಿ ಒಂದು ತಿಂಗಳಾಗುವ ಮೊದಲೆ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.
‘ದೇವರ’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ, ನವೆಂಬರ್ 08 ರಂದು ಸ್ಟ್ರೀಂ ಆಗಲಿದೆ. ಜೂ ಎನ್ಟಿಆರ್ ನಾಯಕರಾಗಿದ್ದ ‘ಆರ್ಆರ್ಆರ್’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿ ಭಾರಿ ದೊಡ್ಡ ಯಶಸ್ಸು ಗಳಿಸಿತ್ತು. ವಿಶ್ವಮಟ್ಟದಲ್ಲಿ ಸಿನಿಮಾ ಗಮನ ಸೆಳೆದಿತ್ತು. ಸಿನಿಮಾ ಮೂಲಕ ಜೂ ಎನ್ಟಿಆರ್ ಸಹ ವಿಶ್ವಮಟ್ಟದ ಜನಪ್ರಿಯತೆ ಗಳಿಸಿದ್ದರು. ಹಾಗಾಗಿ ‘ದೇವರ’ ಸಿನಿಮಾವನ್ನೂ ಸಹ ನೆಟ್ಫ್ಲಿಕ್ಸ್ನಲ್ಲಿಯೇ ಬಿಡುಗಡೆ ಮಾಡಲಾಗುತ್ತಿದೆ.
ಈ ವಾರ ಬಿಡುಗಡೆ ಆಗಲಿರುವ ಸಿನಿಮಾಗಳು
ಮೆಯಿಳಾಗನ್
ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಕಾರ್ತಿ ಮತ್ತು ಅರವಿಂದ್ ಸ್ವಾಮಿ ನಟಿಸಿರುವ ‘ಮೆಯಿಳಾಗನ್’ ಸಿನಿಮಾ ಈಗ ಒಟಿಟಿಗೆ ಬರುತ್ತಿದೆ. ಯಾವುದೇ ಫೈಟ್, ಕಮರ್ಶಿಯಲ್ ಎಲಿಮೆಂಟ್ ಇಲ್ಲದ ಫೀಲ್ ಗುಡ್ ಸಿನಿಮಾ ಆಗಿದ್ದ ‘ಮೆಯಿಳಾಗನ್’ ಪ್ರೇಕ್ಷಕರನ್ನು ಸೆಳೆದಿತ್ತು. ಈಗ ಒಟಿಟಿ ಮೂಲಕ ಇನ್ನಷ್ಟು ಜನರಿಗೆ ತಲುಪಲಿದೆ. ಸಿನಿಮಾ ಅಕ್ಟೋಬರ್ 27ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ:‘ತಂಗಲಾನ್’ ಸಿನಿಮಾ ಮೇಲಿನ ನಿಷೆಧ ತೆರವು, ಒಟಿಟಿ ಬಿಡುಗಡೆಗೆ ತೆರೆದ ದಾರಿ
‘ದೋ ಪತ್ತಿ’
ಬಾಲಿವುಡ್ ಸ್ಟಾರ್ ನಟಿಯರಾದ ‘ಕಾಜೊಲ್’, ‘ಕೃತಿ ಸನೋನ್’, ‘ಶಹೀರ್ ಶೇಖ್’ ಒಟ್ಟಿಗೆ ನಟಿಸಿರುವ ಥ್ರಿಲ್ಲರ್ ಕತೆಯುಳ್ಳ ‘ದೋ ಪತ್ತಿ’ ಸಿನಿಮಾ ನೇರವಾಗಿ ಒಟಿಟಿಗೆ ಬರುತ್ತಿದೆ. ಈ ಸಿನಿಮಾ ಇಂದಿನಿಂದ ಅಂದರೆ ಅಕ್ಟೋಬರ್ 25 ರಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಂ ಆಗಲಿದೆ.
ಲಬ್ಬರ್ ಪಂಡು
ತಮಿಳಿನ ಸಣ್ಣ ಬಜೆಟ್ ಸಿನಿಮಾ ‘ಲಬ್ಬರ್ ಪಂಡು’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಸಣ್ಣ ಬಜೆಟ್ನ ಸಣ್ಣ ಕಲಾವಿದರ ಈ ಸಿನಿಮಾ ಭಾರಿ ದೊಡ್ಡ ಯಶಸ್ಸು ಗಳಿಸಿತ್ತು. ಆದರೆ ಈಗ ಈ ಸಿನಿಮಾ ಒಟಿಟಿಗೆ ಬಿಡುಗಡೆ ಆಗಲಿದೆ. ಡಿಸ್ನಿ ಹಾಟ್ಸ್ಟಾರ್ನಲ್ಲಿ ಅಕ್ಟೋಬರ್ 31 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ