ಶಾರುಖ್ ಖಾನ್ ‘ಕಿಂಗ್’ ಚಿತ್ರಕ್ಕಾಗಿ ಸಾಂಗ್ ಮಾಡಿದ ಇಂಗ್ಲಿಷ್ ಸಿಂಗರ್ ಎಡ್ ಶೀರನ್
ಎಡ್ ಶೀರನ್ ಅವರು ಇತ್ತೀಚೆಗೆ 'ಸಫಾಯರ್' ಹಾಡನ್ನು ರಿಲೀಸ್ ಮಾಡಿದ್ದರು. ಇದರ ಹಿಂದಿ ಆವೃತ್ತಿಯು ಶಾರುಖ್ ಖಾನ್ ಅವರ ಮುಂಬರುವ ಚಿತ್ರ 'ಕಿಂಗ್' ಗಾಗಿ ರಚಿಸಲ್ಪಟ್ಟಿದೆ ಎಂದು ತಿಳಿದುಬಂದಿದೆ. ಈ ಸುದ್ದಿ ಶಾರುಖ್ ಖಾನ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಈ ಚಿತ್ರದಲ್ಲಿ ಶಾರುಖ್ ಖಾನ್, ಸುಹಾನಾ ಖಾನ್, ಅಭಿಷೇಕ್ ಬಚ್ಚನ್ ಮುಂತಾದವರು ನಟಿಸುತ್ತಿದ್ದಾರೆ.

ಬ್ರಿಟಿಷ್ ಸಿಂಗರ್ ಹಾಗೂ ಗೀತ ಸಾಹಿತಿ ಎಡ್ ಶೀರನ್ (Ed Sheeran) ಅವರು ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ಈ ವೇಳೆ ಅವರು ಭಾರತದ ಬೀದಿ ಬೀದಿಗಳನ್ನು ಸುತ್ತಾಡಿದ್ದರು. ಇದನ್ನು ಸಾಂಗ್ ಮಾಡಿ ಹರಿಬಿಟ್ಟಿದ್ದಾರೆ. ಈ ಹಾಡಿಗೆ ‘ಸಫಾಯರ್’ ಎನ್ನುವ ಟೈಟಲ್ ಇಡಲಾಗಿದೆ. ಈ ಹಾಡಿನ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಶಾರುಖ್ ಖಾನ್ ಕೂಡ ಬಂದು ಹೋಗಿದ್ದರು. ಈಗ ಕೇಳಿ ಬರುತ್ತಿರುವ ವಿಚಾರ ಎಂದರೆ, ಈ ಹಾಡಿನ ಹಿಂದಿ ವರ್ಷನ್ ‘ಕಿಂಗ್’ ಚಿತ್ರಕ್ಕಾಗಿ ಮಾಡಿದ್ದು ಎನ್ನಲಾಗಿದೆ.
ಶಾರುಖ್ ಖಾನ್ ಅವರು ‘ಕಿಂಗ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಇದು ಭರ್ಜರಿ ಆ್ಯಕ್ಷನ್ ಸಿನಿಮಾ ಆಗಿರಲಿದೆ. ಇದರಲ್ಲಿ ಶಾರುಖ್ ಖಾನ್, ಅವರ ಮಗಳು ಸುಹಾನಾ ಖಾನ್, ಅಭಿಷೇಕ್ ಬಚ್ಚನ್ ಮೊದಲಾದವರು ನಟಿಸುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಹಲವು ವಿಚಾರಗಳನ್ನು ಗುಟ್ಟಾಗಿಯೇ ಇಡಲಾಗಿದೆ. ಆದರೆ, ಎಡ್ ಶೀರನ್ ಅವರೇ ಚಿತ್ರದ ಬಗ್ಗೆ ಒಂದು ವಿಚಾರವನ್ನು ರಿವೀಲ್ ಮಾಡಿದ್ದಾರೆ.
‘ಸಫಾಯರ್’ ಹಾಡಿನಲ್ಲಿ ಅರಿಜಿತ್ ಸಿಂಗ್ ಕಾಣಿಸಿಕೊಂಡಿದ್ದರು. ಈ ಹಾಡಿನ ಪಂಜಾಬಿ ವರ್ಷನ್ ಮಾತ್ರ ರಿಲೀಸ್ ಆಗಿದೆ. ಹಿಂದಿ ವರ್ಷನ್ ಬೇಕು ಎಂದು ಫ್ಯಾನ್ಸ್ ಹಠ ಹಿಡಿದಿದ್ದಾರೆ. ಇದಕ್ಕೆ ಎಡ್ ಶೀರನ್ ಕಡೆಯಿಂದ ಉತ್ತರ ಸಿಕ್ಕಿದೆ. ‘ಈ ಹಾಡಿನ ಹಿಂದಿ ವರ್ಷನ್ ಶಾರುಖ್ ಖಾನ್ ಚಿತ್ರಕ್ಕಾಗಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಈಗಾಗಲೇ ಶಾರುಖ್ ಖಾನ್ ಅವರು 2023ರಲ್ಲಿ ಬ್ಯಾಕ್ ಟು ಬ್ಯಾಕ್ 3 ಹಿಟ್ ಕೊಟ್ಟು ಆ ಬಳಿಕ ಸೈಲೆಂಟ್ ಆದರು. ಈಗ ‘ಕಿಂಗ್’ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರು ಹಾಲಿವುಡ್ ಗಾಯಕನಿಂದ ಹಾಡನ್ನು ಮಾಡಿಸಿದ್ದಾರೆ. ಶೀರನ್ ಅವರು ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ಈ ವೇಳೆ ಅವರು ಭಾರತದ ಟೂರ್ನ ಸಂಪೂರ್ಣವಾಗಿ ಎಂಜಾಯ್ ಮಾಡಿದ್ದಾರೆ.
ಇದನ್ನೂ ಓದಿ: ಶಾರುಖ್ ಖಾನ್ಗೆ ಇರೋದು ಒಂದೇ ಕೆಟ್ಟ ಹವ್ಯಾಸ; ಏನದು?
ಸದ್ಯ ‘ಕಿಂಗ್’ ಸಿನಿಮಾ ಕೆಲಸಗಳು ನಡೆಯುತ್ತಿವೆ. ಸುಹಾನಾ ಖಾನ್, ದೀಪಿಕಾ ಪಡುಕೋಣೆ, ಅನಿಲ್ ಕಪೂರ್, ರಾಣಿ ಮುಖರ್ಜಿ ಮೊದಲಾದವರು ನಟಿಸಿದ್ದಾರೆ. ಶಾರುಖ್ ಖಾನ್ ಅವರೇ ಈ ಚಿತ್ರ ನಿರ್ಮಾಣ ಮಾಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:46 am, Thu, 19 June 25








