ಶಾರುಖ್ ಖಾನ್ಗೆ ಇರೋದು ಒಂದೇ ಕೆಟ್ಟ ಹವ್ಯಾಸ; ಏನದು?
ರಾಕೇಶ್ ರೋಷನ್ ಅವರು ಶಾರುಖ್ ಖಾನ್ ಜೊತೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ‘ಕರಣ್ ಅರ್ಜುನ್’ ಮತ್ತು ‘ಕೊಯ್ಲಾ’ ಚಿತ್ರಗಳಲ್ಲಿ ಶಾರುಖ್ ಅವರೊಂದಿಗಿನ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಶಾರುಖ್ ಖಾನ್ ಅವರ ಒಂದೇ ಒಂದು ಕೆಟ್ಟ ಅಭ್ಯಾಸದ ಬಗ್ಗೆ ರಾಕೇಶ್ ರೋಷನ್ ಮಾತನಾಡಿದ್ದಾರೆ.

ಶಾರುಖ್ ಖಾನ್ (Shah Rukh Khan) ಅವರು ಬಾಲಿವುಡ್ನಲ್ಲಿ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಅವರಿಗೆ ಸಾಕಷ್ಟು ಬೇಡಿಕೆ ಇದೆ. ಅವರು ಖ್ಯಾತ ನಿರ್ದೇಶಕ ‘ರಾಕೇಶ್ ರೋಷನ್’, ‘ಕರಣ್ ಅರ್ಜುನ್ ಹಾಗೂ ‘ಕೊಯ್ಲ’ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಅವರು ಈ ಮೊದಲು ನೀಡಿದ ಸಂದರ್ಶನದಲ್ಲಿ ಶಾರುಖ್ ಖಾನ್ ಅವರ ಕೆಟ್ಟ ಹವ್ಯಾಸ ಏನು ಎಂಬುದನ್ನು ರಿವೀಲ್ ಮಾಡಿದ್ದರು. ಆ ವಿಚಾರ ಸಾಕಷ್ಟು ಚರ್ಚೆ ಆಗಿತ್ತು.
‘ನಾನು ಶಾರುಖ್ ಖಾನ್ ಅವರನ್ನು ರೆಸ್ಟೋರೆಂಟ್ ಒಂದರಲ್ಲಿ ಭೇಟಿ ಮಾಡಿದೆ. ಆಗ ವಿವೇಕ್ ಓಬೆರಾಯ್ ಅವರು ಶಾರುಖ್ ಜೊತೆ ಇದ್ದರು. ನಾನು ವಿವೇಕ್ ಬಳಿ ಶಾರುಖ್ ಬಗ್ಗೆ ವಿಚಾರಿಸಿದೆ. ಅವರು ಕಿರುತೆರೆ ನಟ ಎಂದು ವಿವೇಕ್ ನನಗೆ ವಿವರಿಸಿದರು. ನಾನು ಶಾರುಖ್ ಬಳಿ ಸಿನಿಮಾ ಮಾಡ್ತೀರಾ ಎಂದು ಕೇಳಿದೆ. ಆಫರ್ ಬರುತ್ತಿವೆ. ಆದರೆ, ಯಾವುದೂ ಫೈನಲ್ ಆಗಿಲ್ಲ ಎಂದು ನನಗೆ ಹೇಳಿದರು’ ಎಂದು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ. ‘ಕಿಂಗ್ ಅಂಕಲ್ ಚಿತ್ರಕ್ಕೆ ನಾನು ಅವರ ಸಹಿ ಹಾಕಿಸಿದೆ. ಅವರು ನಿರಂತರವಾಗಿ ನನ್ನ ಮನೆಗೆ ಬರುತ್ತಿದ್ದರು. ಅವರು ನಮ್ಮ ಕುಟುಂಬದಲ್ಲೊಬ್ಬರಾದರು’ ಎಂಬುದು ಅವರ ಮಾತು.
1995ರಲ್ಲಿ ‘ಕರಣ್ ಅರ್ಜುನ್’ ಹೆಸರಿನ ಸಿನಿಮಾ ಬಂತು. ಇದರಲ್ಲಿ ಶಾರುಖ್ ನಟಿಸಿದ್ದಾರೆ. ಇದು ಪುನರ್ಜನ್ಮದ ಕಥೆ. ‘ಶಾರುಖ್ ಖಾನ್ಗೆ ನಾನು ಕಥೆ ಹೇಳಿದೆ. ಆದರೆ, ಅವರಿಗೆ ಪುನರ್ಜನ್ಮದಲ್ಲಿ ನಂಬಿಕೆ ಇರಲಿಲ್ಲ. ಆದರೆ, ನಾನು ಸಿನಿಮಾ ಮಾಡುತ್ತಿದ್ದೇನೆ ಎನ್ನುವ ಕಾರಣಕ್ಕೆ ಅವರು ಒಪ್ಪಿಕೊಂಡರು. ಸ್ಕ್ರಿಪ್ಟ್ನ ಅವರಿಗೆ ನೀಡಿದೆ. ಅವರು ಓದಿದರು. ಶೂಟಿಂಗ್ ಆರಂಭ ಆದ ಬಳಿಕ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಅವರು ನನ್ನನ್ನು ಅಷ್ಟು ನಂಬಿದ್ದರು’ ಎಂದಿದ್ದಾರೆ ರಾಕೇಶ್.
ಇದನ್ನೂ ಓದಿ: ‘ಮನ್ನತ್’ ನವೀಕರಣ ಮಾಡ್ತೀನಿ ಎಂದು ಹೊರಟ ಶಾರುಖ್‌ಗೆ ಹಿನ್ನಡೆ; ಬಿತ್ತು ಕೇಸ್
ಶಾರುಖ್‌ಗೆ ಒಂದೇ ಒಂದು ಕೆಟ್ಟ ಅಭ್ಯಾಸವಿತ್ತು. ಅವರು ತಡವಾಗಿ ಏಳುತ್ತಿದ್ದರು. ಹಾಗಾಗಿ ಕಿಂಗ್ ಅಂಕಲ್ ಚಿತ್ರೀಕರಣದ ಸಮಯದಲ್ಲಿ, ನಾನು ಅವರ ಕೋಣೆಗೆ ಹೋಗಿ ಅವರನ್ನು ಎಬ್ಬಿಸುತ್ತಿದ್ದೆ. ಅವನ ಇತರ ಚಿತ್ರಗಳಲ್ಲೂ ಇದು ಮುಂದುವರೆಯಿತು. ಕರಣ್ ಅರ್ಜುನ್ ಮತ್ತು ಕೊಯ್ಲಾ ಚಿತ್ರೀಕರಣದ ಸಮಯದಲ್ಲಿಯೂ ಅವರನ್ನು ಎಬ್ಬಿಸುವುದು ನನ್ನ ಕರ್ತವ್ಯವಾಯಿತು. ಏಕೆಂದರೆ ಈ ಮೂರು ಚಿತ್ರಗಳು ವಿದೇಶಗಳಲ್ಲಿ ಚಿತ್ರೀಕರಣಗೊಂಡಿವೆ’ ಎಂದಿದ್ದಾರೆ ರಾಕೇಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.