‘ಪರೇಶ್ ರಾವಲ್ ಇಲ್ಲದೆಯೂ ಹೇರಾ ಫೇರಿ ಆಗುತ್ತೆ’; ಧಿಮಾಕಿನಿಂದ ಉತ್ತರಿಸಿದ ಅಕ್ಷಯ್ ಕುಮಾರ್
‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ರಾವಲ್ ಹೊರನಡೆದಿರುವುದು ಚಿತ್ರರಂಗದಲ್ಲಿ ದೊಡ್ಡ ಸುದ್ದಿಯಾಗಿದೆ. ಅಕ್ಷಯ್ ಕುಮಾರ್ ಅವರು ಪರೇಶ್ ಅವರ ನಿರ್ಗಮನದ ಬಗ್ಗೆ ಪ್ರತಿಕ್ರಿಯಿಸಿದ್ದು, ಪರೇಶ್ ಅವರಿಲ್ಲದೆಯೂ ಚಿತ್ರ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಅನೇಕರು ಅಕ್ಷಯ್ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.

‘ಹೇರಾ ಫೇರಿ 3’ (Hera Pheri 3) ಚಿತ್ರದಿಂದ ಅಕ್ಷಯ್ ಕುಮಾರ್ ಹೊರ ನಡೆದಿದ್ದು ಎಲ್ಲರಿಗೂ ಶಾಕಿಂಗ್ ಎನಿಸಿದೆ. ಪರೇಶ್ ರಾವಲ್ ಅವರು ತಂಡಕ್ಕೆ ಈ ಬಗ್ಗೆ ಮಾಹಿತಿ ನೀಡದೆ ನೇರವಾಗಿ ಮಾಧ್ಯಮಗಳ ಎದುರು ಈ ವಿಚಾರ ರಿವೀಲ್ ಮಾಡಿದ್ದರು. ಇದು ಅಕ್ಷಯ್ಗೆ ಮತ್ತಷ್ಟು ಬೇಸರ ಮೂಡಿಸಿತ್ತು. ಪರೇಶ್ ರಾವಲ್ ವಿರುದ್ಧ ಅಕ್ಷಯ್ ಕೇಸ್ ಕೂಡ ಹಾಕಿದ್ದಾರೆ. ಈ ಮಧ್ಯೆ ಪರೇಶ್ ಇಲ್ಲದೆಯೂ ‘ಹೇರಾ ಫೇರಿ 3’ ಸಿನಿಮಾ ಗೆಲ್ಲಬಹುದು ಎಂದಿದ್ದಾರೆ. ಅನೇಕರು ಇದನ್ನು ಧಿಮಾಕಿನ ಉತ್ತರ ಎಂದು ಹೇಳಿದ್ದಾರೆ.
‘ಹೇರಾ ಫೇರಿ 3’ ಚಿತ್ರಕ್ಕೆ ಈಗಾಗಲೇ ಸ್ಕ್ರಿಪ್ಟ್ ಕೆಲಸಗಳು ನಡೆದಿವೆ. ಇನ್ನೂ ಕೆಲವು ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆದಿದ್ದು, ಇದಕ್ಕಾಗಿ ದೊಡ್ಡ ಮೊತ್ತ ಖರ್ಚು ಮಾಡಲಾಗಿದೆ. ಈ ಸಂದರ್ಭದಲ್ಲಿ ಪರೇಶ್ ರಾವಲ್ ಹೊರ ನಡೆದಿದ್ದು, ತಂಡಕ್ಕೆ ಸಂಕಷ್ಟ ಉಂಟಾಗಿದೆ. ಆದರೆ, ಅವರಿಲ್ಲದೆಯೂ ಸಿನಿಮಾ ಗೆಲ್ಲ ಬಲ್ಲದು ಎಂಬ ನಂಬಿಕೆ ಅಕ್ಷಯ್ ಕುಮಾರ್ ಅವರದ್ದು.
‘ಏನೆಲ್ಲೆ ಆಗುತ್ತಿದೆಯೋ ಅದು ಎಲ್ಲರ ಕಣ್ಣೆದುರೇ ಸಂಭವಿಸುತ್ತಿದೆ. ಧನಾತ್ಮಕವಾಗಿ ಏನಾದರೂ ಸಂಭವಿಸಬಹುದು ಎಂದು ನಂಬಿದ್ದೇನೆ. ಎಲ್ಲವೂ ಸರಿಯಾಗುತ್ತದೆ ಎಂಬುದು ನನ್ನ ಭಾವನೆ. ಹಾಗೆ ಆಗಬೇಕು’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ. ಅವರು ಪರೋಕ್ಷವಾಗಿ ಪರೇಶ್ ಇಲ್ಲದೆಯೂ ಸಿನಿಮಾ ಆಗುತ್ತದೆ ಎಂದಿದ್ದಾರೆ.
‘ಹೇರಾ ಫೇರಿ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ರಾಜು ಪಾತ್ರ ಮಾಡಿದರೆ, ಸುನೀಲ್ ಶೆಟ್ಟಿ ಶ್ಯಾಮ್ ಪಾತ್ರ ಮಾಡಿದ್ದರು. ‘ಶ್ಯಾಮ್ ಹಾಗೂ ರಾಜು ಪಾತ್ರವಿಲ್ಲದಿದ್ದರೂ ಈ ಸಿನಿಮಾ ಆಗಬಹುದು. ಆದರೆ ಬಾಬುರಾವ್ ಪಾತ್ರವಿಲ್ಲದೆ ಈ ಸಿನಿಮಾ ಅಸಾಧ್ಯ’ ಎಂದು ಸುನೀಲ್ ಶೆಟ್ಟಿ ಹೇಳಿದ್ದರು. ಆದರೆ, ಅಕ್ಷಯ್ ಕುಮಾರ್ ಅವರು ಬೇರೆಯದೇ ರೀತಿಯ ನಂಬಿಕೆ ಹೊಂದಿದ್ದಾರೆ.
ಇದನ್ನೂ ಓದಿ: ‘ಅವರನ್ನು ಮೂರ್ಖ ಎನ್ನಬೇಡಿ, ಒಳ್ಳೆಯ ಸ್ನೇಹಿತ’; ಪರೇಶ್ ಪರ ಅಕ್ಷಯ್ ಕುಮಾರ್ ಬ್ಯಾಟಿಂಗ್
ಅಕ್ಷಯ್ ಕುಮಾರ್ ಅವರ ಹೇಳಿಕೆಯನ್ನು ಅನೇಕರು ಟೀಕಿಸಿದ್ದಾರೆ. ‘ಹೇರಾ ಫೇರಿ’ ಸಿನಿಮಾದಲ್ಲಿ ಪರೇಶ್ ರಾವಲ್ ಇಲ್ಲದಿದ್ದರೆ ನಾವು ನೋಡೋದಿಲ್ಲ ಎಂದು ಅನೇಕರು ಹೇಳಿದ್ದಾರೆ. ಪರೇಶ್ ರಾವಲ್ ಬದಲು ಪಂಕಜ್ ತ್ರಿಪಾಠಿ ಇರಬೇಕಿತ್ತು ಎಂದು ಅನೇಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.