‘ಅವರನ್ನು ಮೂರ್ಖ ಎನ್ನಬೇಡಿ, ಒಳ್ಳೆಯ ಸ್ನೇಹಿತ’; ಪರೇಶ್ ಪರ ಅಕ್ಷಯ್ ಕುಮಾರ್ ಬ್ಯಾಟಿಂಗ್
ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ನಡುವಿನ ‘ಹೇರಾ ಫೇರಿ 3’ ವಿವಾದ ಕೋರ್ಟ್ ತಲುಪಿದೆ. ಪರೇಶ್ ರಾವಲ್ ಚಿತ್ರದಿಂದ ಹೊರ ನಡೆದಿರುವುದಕ್ಕೆ ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಪರೇಶ್ ಅವರನ್ನು ಮೂರ್ಖ ಎಂದು ಕರೆಯುವುದನ್ನು ಖಂಡಿಸಿದ್ದಾರೆ. ಅವರು 32 ವರ್ಷಗಳಿಂದ ಒಳ್ಳೆಯ ಸ್ನೇಹಿತರಾಗಿದ್ದಾರೆ ಎಂದು ಹೇಳಿದ್ದಾರೆ.

ಅಕ್ಷಯ್ ಕುಮಾರ್ (Akshay Kumar) ಹಾಗೂ ಪರೇಶ್ ರಾವಲ್ ಮಧ್ಯೆ ಉಂಟಾದ ವೈಮನಸ್ಸು ಕೋರ್ಟ್ ಮೆಟ್ಟಿಲೇರಿದೆ. ಅಕ್ಷಯ್ ಕುಮಾರ್ ನಿರ್ಮಾಣದ ‘ಹೇರಾ ಫೇರಿ 3’ ಚಿತ್ರದಿಂದ ಅಕ್ಷಯ್ ಹೊರ ನಡೆದಿದ್ದಾರೆ. ಇದು ಸಾಕಷ್ಟು ಶಾಕಿಂಗ್ ಎನಿಸಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಅಕ್ಷಯ್ ಕುಮಾರ್ ಕಳುಹಿಸಿರೋ ನೋಟಿಸ್ಗೆ ಉತ್ತರವಾಗಿ ನೀಡಿದ್ದಾರೆ. ಈಗ ಅಕ್ಷಯ್ ಕುಮಾರ್ ಅವರು ಪರೇಶ್ ರಾವಲ್ ಎಕ್ಸಿಟ್ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.
ಅಕ್ಷಯ್ ಕುಮಾರ್ ಹಾಗೂ ಇತರರು ನಟಿಸಿರೋ ‘ಹೌಸ್ಫುಲ್ 5’ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆದಿದೆ. ಈ ವೇಳೆ ಅಕ್ಷಯ್ಗೆ ವಿವಿಧ ರೀತಿಯ ಪ್ರಶ್ನೆಗಳು ಎದುರಾದವು. ಈ ವೇಳೆ ‘ಹೇರಾ ಫೇರಿ 3’ ಚಿತ್ರದ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ಆಗ ಅವರು ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಕೆಲವರು ಪರೇಶ್ ಅವರನ್ನು ಮೂರ್ಖ ಎಂದಿದ್ದರು. ಇದನ್ನು ಅವರು ಖಂಡಿಸಿದ್ದಾರೆ.
‘ನನ್ನ ಸಹೋದ್ಯೋಗಿಗೆ ಮೂರ್ಖ ಎಂದೆಲ್ಲ ಹೇಳೋದು ಸರಿ ಅಲ್ಲ. ಅದನ್ನು ನಾನು ಶ್ಲಾಘಿಸೋದಿಲ್ಲ. ಪರೇಶ್ ಜೊತೆ ನಾನು ಕಳೆದ 32 ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದೇನೆ. ನಾವು ಒಳ್ಳೆಯ ಗೆಳೆಯರು. ಪರೇಶ್ ಅದ್ಭುತ ಕಲಾವಿದ. ಅವರನ್ನು ನಾನು ಇಷ್ಟಪಡುತ್ತೇನೆ. ಆ ಬಗ್ಗೆ ಮಾತನಾಡಲು ಇದು ಸರಿಯಾದ ಸ್ಥಳ ಅಲ್ಲ. ಇದು ಗಂಭಿರ ವಿಚಾರ. ಕೋರ್ಟ್ ನೋಡಿಕೊಳ್ಳುತ್ತದೆ’ ಎಂದಿದ್ದಾರೆ ಅಕ್ಷಯ್ ಕುಮಾರ್.
ಇದನ್ನೂ ಓದಿ: ‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ಹೊರ ನಡೆಯಲು ಅಕ್ಷಯ್ ಕುಮಾರ್ ನೇರ ಕಾರಣ
‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ಹೊರ ನಡೆದಿದ್ದಕ್ಕೆ 25 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಪರೇಶ್ ಅವರು ಅಕ್ಷಯ್ ಕುಮಾರ್ ಅವರು ನೋಟಿಸ್ ನೀಡಿದ್ದಾರೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ಇಬ್ಬರ ಮಧ್ಯೆ ದೊಡ್ಡ ಮಟ್ಟದಲ್ಲಿ ವೈಮನಸ್ಸು ಮೂಡಿದೆ ಎನ್ನುವ ಮಾತುಗಳು ವ್ಯಕ್ತವಾಗಿದೆ. ಈಗ ಪರೇಶ್ ಅವರು ಸಿನಿಮಾದಿಂದ ಹೊರ ನಡೆದಿರುವುದರಿಂದ ‘ಹೇರಾ ಫೇರಿ 3’ ಸಿನಿಮಾ ಸೆಟ್ಟೋರೋದು ಅನುಮಾನ ಎನ್ನಲಾಗುತ್ತಿದೆ. ಅಕ್ಷಯ್ ಅವರು ಮತ್ತೆ ಪರೇಶ್ ಅವರ ಮನ ಒಲಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








