AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ಹೊರ ನಡೆಯಲು ಅಕ್ಷಯ್ ಕುಮಾರ್ ನೇರ ಕಾರಣ

ಹೇರಾ ಫೇರಿ 3 ಚಿತ್ರದಿಂದ ಪರೇಶ್ ರಾವಲ್ ಹೊರನಡೆದ ಘಟನೆಯ ಹಿಂದೆ ಅಕ್ಷಯ್ ಕುಮಾರ್ ನೇರವಾಗಿ ಪಾತ್ರವಹಿಸಿದ್ದಾರೆ ಎಂಬುದು ಬಹಿರಂಗಗೊಂಡಿದೆ. ಚಿತ್ರದ ಷರತ್ತು ಪತ್ರ, ಪ್ರೋಮೋ ಶೂಟ್‌ನಲ್ಲಿನ ತರಾತುರಿ, ಹಾಗೂ ಹಕ್ಕುಸ್ವಾಮ್ಯ ವಿವಾದಗಳು ಪರೇಶ್ ಅವರ ನಿರ್ಗಮನಕ್ಕೆ ಕಾರಣವಾಗಿವೆ. ಅಕ್ಷಯ್ ಕುಮಾರ್ ಶಿಸ್ತಿನ ವ್ಯಕ್ತಿಯೆಂದು ತಿಳಿದುಕೊಂಡರೂ, ಈ ಚಿತ್ರದ ನಿರ್ಮಾಣದಲ್ಲಿ ಅವರ ವರ್ತನೆ ಟೀಕೆಗೆ ಒಳಗಾಗಿದೆ.

‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ಹೊರ ನಡೆಯಲು ಅಕ್ಷಯ್ ಕುಮಾರ್ ನೇರ ಕಾರಣ
ಪರೇಶ್-ಅಕ್ಷಯ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:May 30, 2025 | 11:59 AM

Share

ಅಕ್ಷಯ್ ಕುಮಾರ್ (Akhay Kumar) ಶಿಸ್ತಿನ ವ್ಯಕ್ತಿ. ಅದರಲ್ಲೂ ಸಿನಿಮಾ ಕೆಲಸ ಎಂಬುದು ಬಂದಾಗ ಅವರು ಮತ್ತಷ್ಟು ಕಟ್ಟುನಿಟ್ಟಾಗಿ ನಡೆದುಕೊಳ್ಳುತ್ತಾರೆ. ದಿನಕ್ಕೆ ಅವರು 8-9 ಗಂಟೆ ಮಾತ್ರ ಕೆಲಸ ಮಾಡುತ್ತಾರೆ. ಈ ಅವಧಿಯಲ್ಲಿ ಶೂಟ್ ಮಾಡಿ ಮುಗಿಸಬೇಕು ಎಂದು ತಂಡದವರಿಗೆ ಅವರು ಸ್ಟ್ರಿಕ್ಟ್ ಆಗಿ ಹೇಳಿರುತ್ತಾರೆ. ಆದರೆ, ನಿರ್ಮಾಪಕರಾದಾಗ ಅವರು ಈ ಶಿಸ್ತನ್ನು ಫಾಲೋ ಮಾಡುತ್ತಿಲ್ಲವೇ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ರಾವಲ್ ಹೊರ ನಡೆಯಲು ಅಕ್ಷಯ್ ಕುಮಾರ್ ನೇರ ಕಾರಣ ಎಂಬ ವಿಚಾರ ರಿವೀಲ್ ಆಗಿದೆ.

ಪರೇಶ್ ರಾವಲ್ ಅವರು ‘ಹೇರಾ ಫೇರಿ 3’ ಚಿತ್ರದಿಂದ ಹೊರ ನಡೆದ ವಿಚಾರವನ್ನು ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು. ಈ ವಿಚಾರದ ಬಗ್ಗೆ ತಮಗೆ ಗೊತ್ತೇ ಇರಲಿಲ್ಲ ಎಂದು ತಂಡದವರು ಹೇಳಿಕೊಂಡಿದ್ದಾರೆ. ಅಲ್ಲದೆ, ಪರೇಶ್​ಗೆ 25 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಅಕ್ಷಯ್ ಕುಮಾರ್ ನೋಟಿಸ್ ಕಳುಹಿಸಿದ್ದಾರೆ. ಇದಕ್ಕೆ ಪರೇಶ್ ವಕೀಲರಿಂದ ಉತ್ತರ ಹೋಗಿದೆ. ಆ ಉತ್ತರದಲ್ಲಿ ಏನೆಲ್ಲ ಇದೆ ಎನ್ನುವ ವಿಚಾರ ರಿವೀಲ್ ಆಗಿದೆ.

ಪರೇಶ್ ರಾವಲ್ ಅವರು ಷರತ್ತು ಪತ್ರಕ್ಕೆ ಕಾನೂನುಬದ್ಧತೆಗಳನ್ನು ಪರಿಗಣಿಸದೆ, ನಂಬಿಕೆಯಿಂದ ಸಹಿ ಹಾಕಿದ್ದರಂತೆ. ಇನ್ನು, ಪ್ರೋಮೋನ ತರಾತುರಿಯಲ್ಲಿ ಶೂಟ್ ಮಾಡಲಾಗಿದೆಯಂತೆ. ಈ ಬಗ್ಗೆ ಅವರು ನಿರಂತರವಾಗಿ ಪ್ರಶ್ನೆಗಳನ್ನು ಇಟ್ಟಿದ್ದರು. ಪರೇಶ್ ರಾವಲ್ ಅವರಿಗೆ 11 ಲಕ್ಷ ರೂಪಾಯಿ ಹಣವನ್ನು ಮುಂಗಡವಾಗಿ ನೀಡಲಾಗಿತ್ತು. ಇದಕ್ಕೆ ಶೇಕಡಾ 15 ರಷ್ಟು ಬಡ್ಡಿ ಸೇರಿ ಸಂಪೂರ್ಣ ಮೊತ್ತವನ್ನು ನೋಟಿಸ್‌ಗೆ ಮೊದಲೇ ಪರೇಶ್ ಹಿಂತಿರುಗಿಸಿದ್ದರು.

ಇದನ್ನೂ ಓದಿ
Image
‘ಸೀತಾ ರಾಮ’ ಧಾರಾವಾಹಿಗೆ ವಿದಾಯದ ಸಂಚಿಕೆ; ಸೀತಾಗೆ ಗನ್​ ಹಿಡಿದ ಭಾರ್ಗವಿ
Image
‘ಕುಬೇರ’ ಟೀಸರ್: ಪಕ್ಕಾ ಮಿಡಲ್ ಕ್ಲಾಸ್ ಹುಡುಗಿಯಾದ ರಶ್ಮಿಕಾ; ಗ್ಲಾಮರ್ ಮಾಯ
Image
‘ಸರಿಗಮಪ’ ಫೈನಲಿಸ್ಟ್ ಇವರೇ ನೋಡಿ; ಫಿನಾಲೆ ಮತ್ತಷ್ಟು ಕಠಿಣ
Image
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ

‘ಹೇರಾ ಫೆರಿ 2’ ಚಿತ್ರವನ್ನು ಫಿರೋಜ್ ನಾಡಿಯಾದ್ವಾಲಾ ನಿರ್ಮಾಣ ಮಾಡಿದ್ದರು. ಈಗ ಚಿತ್ರಕ್ಕೆ ಮೂರನೇ ಪಾರ್ಟ್​ನ ಅಕ್ಷಯ್ ಕುಮಾರ್ ಮಾಡುತ್ತಿದ್ದಾರೆ. ಹೀಗಾಗಿ ಚಿತ್ರದ ಶೀರ್ಷಿಕೆಯ ಮಾಲೀಕತ್ವದ ಬಗ್ಗೆ ಫಿರೋಜ್ ನಾಡಿಯಾದ್ವಾಲಾ ಮತ್ತು ಅಕ್ಷಯ್ ಕುಮಾರ್ ನಡುವೆ ಕಾನೂನು ವಿವಾದ ನಡೆಯುತ್ತಿದೆಯಂತೆ. ಇದು ಕೂಡ ಪರೇಶ್ ಗಮನಕ್ಕೆ ಬಂದಿದೆ. ಈವರೆಗೆ ಚಿತ್ರದ ಸ್ಕ್ರಿಪ್ಟ್ ಕೂಡ ರೆಡಿ ಆಗಿರಲಿಲ್ಲ. ಈ ಎಲ್ಲಾ ಕಾರಣದಿಂದ ಪರೇಶ್ ಅವರು ಸಿನಿಮಾದಿಂದ ಹೊರ ನಡೆದಿದ್ದಾರೆ. ಹೀಗಾಗಿ, ಪರೇಶ್ ಅವರು ಸಿನಿಮಾದಿಂದ ಹೊರ ನಡೆಯಲು ಅಕ್ಷಯ್ ಕಾರಣರಾಗಿದ್ದಾರೆ.

ಇದನ್ನೂ ಓದಿ: ಸಹನಟನಿಗೆ ಲೀಗಲ್ ನೊಟೀಸ್ ಕಳಿಸಿದ ಅಕ್ಷಯ್ ಕುಮಾರ್, ಪರೇಶ್ ರಾವಲ್ ಪ್ರತಿಕ್ರಿಯೆ ಏನು?

2000ರಲ್ಲಿ ಬಿಡುಗಡೆಯಾದ ‘ಹೇರಾ ಫೇರಿ’ ಮತ್ತು 2006 ರಲ್ಲಿ ಬಿಡುಗಡೆಯಾದ ‘ಫಿರ್ ಹೇರಾ ಫೇರಿ’ ಎರಡೂ ಚಿತ್ರಗಳ ಹಕ್ಕು ನಿರ್ಮಾಪಕ ಫಿರೋಜ್ ನಾಡಿಯಾದ್ವಾಲಾ ಹೊಂದಿದ್ದಾರೆ. ಈ ಸಂಬಂಧ ಯಾವುದೇ ಪ್ರೋಮೋ ಶೂಟ್ ಮಾಡದಂತೆ ಸಿನಿಮಾ ಕಲಾವಿದರಿಗೆ ನೋಟಿಸ್ ನೀಡಿದ್ದಾರೆ. ಆದರೂ ಸಿನಿಮಾ ಮಾಡಲು ಅಕ್ಷಯ್ ಉತ್ಸಾಹ ತೋರಿಸಿದ್ದರು. ಸ್ಪಷ್ಟತೆಯ ಕೊರತೆ ಇಲ್ಲಿ ಎದ್ದು ಕಾಣುತ್ತಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:59 am, Mon, 26 May 25