ಜಗತ್ತಿನಲ್ಲಿ ಸಲ್ಮಾನ್ ಖಾನ್ ಅತಿ ಹೆಚ್ಚು ತಪ್ಪಾಗಿ ಅರ್ಥೈಸಲ್ಪಟ್ಟ ವ್ಯಕ್ತಿ
Salman Khan: ಸಲ್ಮಾನ್ ಖಾನ್, ಜಗತ್ತಿನ ಅತಿ ಹೆಚ್ಚು ತಪ್ಪಾಗಿ ಅರ್ಥೈಸಿಕೊಂಡ ವ್ಯಕ್ತಿ ಸುನಿಲ್ ಶೆಟ್ಟಿ ಹೇಳಿದ್ದಾರೆ. ಸಲ್ಮಾನ್ ಅವರ ಚಿತ್ರಗಳ ಯಶಸ್ಸಿನ ಬಗ್ಗೆಯೂ ಅವರು ಮಾತನಾಡಿದ್ದಾರೆ. 200 ಕೋಟಿಗೂ ಹೆಚ್ಚು ಗಳಿಸಿದ ಚಿತ್ರಗಳನ್ನು ಪ್ಲಾಪ್ ಎಂದು ಕರೆಯಲಾಗುತ್ತಿದೆ ಎಂದು ಶೆಟ್ಟಿ ಹೇಳಿದ್ದಾರೆ. ಸುನೀಲ್ ಶೆಟ್ಟಿ ಅವರು ಸಲ್ಮಾನ್ ಖಾನ್ ಬಗ್ಗೆ ಅಭಿಮಾನ ಮತ್ತು ಗೌರವ ವ್ಯಕ್ತಪಡಿಸಿದ್ದಾರೆ.

ನಟ ಸಲ್ಮಾನ್ ಖಾನ್ (Salman Khan) ಅವರನ್ನು ಒಬ್ಬೊಬ್ಬೊಬ್ಬರು ಒಂದೊಂದು ರೀತಿ ನೋಡುತ್ತಾರೆ. ಕೆಲವರು ಅವರನ್ನು ಹೊಗಳುತ್ತಾರೆ, ಇನ್ನೂ ಕೆಲವರು ತೆಗಳುತ್ತಾರೆ. ಅವರು ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟ ಆಗೋದಿಲ್ಲ. ಅವರಿಗೆ ಧಿಮಾಕು ಎಂದು ಹೇಳಿದವರೂ ಇದ್ದಾರೆ. ಜಗತ್ತಿನಲ್ಲಿ ಅತಿ ಹೆಚ್ಚು ತಪ್ಪಾಗಿ ಅರ್ಥೈಸಲ್ಪಟ್ಟ ವ್ಯಕ್ತಿ ಸಲ್ಮಾನ್ ಖಾನ್ ಎಂದು ಸುನೀಲ್ ಶೆಟ್ಟಿ ಅವರು ಹೇಳಿದ್ದಾರೆ. ಇದಕ್ಕೆ ಕಾರಣಗಳನ್ನು ಕೂಡ ಅವರು ವಿವರಿಸಿದ್ದಾರೆ. ಆ ಬಗ್ಗೆ ಇಂದು ನೋಡೋಣ.
ಇತ್ತೀಚೆಗೆ ಲಲ್ಲನ್ಟಾಪ್ಗೆ ನೀಡಿದ ಸಂದರ್ಶನದಲ್ಲಿ ಸುನೀಲ್ ಶೆಟ್ಟಿ ಅವರು ಮಾತನಾಡಿದರು ಮತ್ತು ‘ಸಲ್ಮಾನ್ ಈ ಜಗತ್ತಿನಲ್ಲಿ ಅತ್ಯಂತ ತಪ್ಪಾಗಿ ಅರ್ಥ ಮಾಡಿಕೊಂಡ ಮನುಷ್ಯ’ ಎಂದು ಹೇಳಿದ್ದಾರೆ. ‘ಅವರ ಜೊತೆ ನನಗೆ ಒಳ್ಳೆಯ ಒಡನಾಟ ಇದೆ. ಅವರನ್ನು ನಾನು ಯಾವಾಗಲೂ ಭೇಟಿ ಮಾಡೋದಿಲ್ಲ. ಆದರೆ, ಅವರ ಮೇಲೆ ಪ್ರೀತಿ ಗೌರವ ಹಾಗೆಯೇ ಇರುತ್ತದೆ’ ಎಂದು ಹೇಳಿದ್ದಾರೆ.
ಅದೇ ಸಂಭಾಷಣೆಯಲ್ಲಿ, ಸಲ್ಮಾನ್ ಅವರ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡದಿದ್ದನ್ನು ಸುನೀಲ್ ಸಮರ್ಥಿಸಿಕೊಂಡರು. ‘ಸಲ್ಮಾನ್ ಖಾನ್ ಅವರ ಚಿತ್ರ 200 ಕೋಟಿ ರೂಪಾಯಿ ಗಳಿಸಿದರೂ ಜನರು ಅದನ್ನು ಫ್ಲಾಪ್ ಎಂದು ಕರೆಯುತ್ತಾರೆ. ಆದರೆ ಉದ್ಯಮದ ಅರ್ಧದಷ್ಟು ಜನರಿಗೆ, ಇದು ಕೇವಲ ಹಿಟ್ ಅಲ್ಲ, ಸೂಪರ್‌ಹಿಟ್’ ಎಂದರು. ಸಲ್ಮಾನ್ ಖಾನ್ ಅವರ ಇತ್ತೀಚಿನ ಸಿನಿಮಾ ವಿಮರ್ಶೆಯಲ್ಲಿ ಸೋತರೂ 200 ಕೋಟಿ ರೂಪಾಯಿ ಗಳಿಸುತ್ತಿದೆ. ಆದಾಗ್ಯೂ ಅದನ್ನು ಪ್ಲಾಫ್ ಎಂದು ಘೋಷಣೆ ಮಾಡಲಾಗುತ್ತಿದೆ. ಹೀಗಾಗಿ ಸುನೀಲ್ ಶೆಟ್ಟಿ ಈ ಮಾತನ್ನು ಹೇಳಿದ್ದಾರೆ.
ಇದನ್ನೂ ಓದಿ:ಒಟಿಟಿಗೆ ಬಂತು ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಫ್ಲಾಪ್ ಸಿನಿಮಾ ‘ಸಿಕಂದರ್’
‘ಸಿನಿಮಾಗಳ ಆಯ್ಕೆಯಲ್ಲಿ ಜನರು ಎಡವುವ ಸಂದರ್ಭಗಳಿವೆ. ಆದರೆ ಅದರ ಹೊರತಾಗಿಯೂ, ಆ ನಟ ಹೃದಯದಿಂದ ಕೆಲಸ ಮಾಡುತ್ತಾರೆ. ಆದ್ದರಿಂದ, ಸಲ್ಮಾನ್‌ಗೆ ಉತ್ತಮ ವಿಷಯಾಧಾರಿತ ಚಿತ್ರ ಸಿಕ್ಕಾಗ ಅದು ಮ್ಯಾಜಿಕ್ ಮಾಡುತ್ತದೆ’ ಎಂದು ಸುನೀಲ್ ಶೆಟ್ಟಿ ಅಭಿಪ್ರಾಯಪಟ್ಟರು.
ಸುನೀಲ್ ಶೆಟ್ಟಿ ಅವರು ‘ಫಿರ್ ಹೇರಾ ಫೇರಿ 3’ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಈ ಚಿತ್ರ ಸೆಟ್ಟೇರುವುದೇ ಅನುಮಾನ ಆಗಿದೆ. ಅವರು ‘ವೆಲ್ಕಮ್ಟು ದಿ ಜಂಗಲ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಸಂಜಯ್ ದತ್, ಪರೇಶ್ ರಾವಲ್, ಲಾರಾ ದತ್ತ, ರವೀನಾ ಟಂಡನ್ ಮೊದಲಾದವುರ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



