ಆರ್ಸಿಬಿ ಗೆಲುವಿನ ಖುಷಿಯಲ್ಲಿ ವಿರಾಟ್ಗೆ ಮುತ್ತಿನ ಸುರಿಮಳೆ ಸುರಿಸಿದ ಅನುಷ್ಕಾ ಶರ್ಮಾ
ಆರ್ಸಿಬಿ ತಂಡದ ರೋಮಾಂಚಕ ಗೆಲುವಿನ ನಂತರ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿರಾಟ್ ಅವರ ಕಿಸ್‌ಗೆ ಪ್ರತಿಯಾಗಿ ಅನುಷ್ಕಾ ಮುತ್ತಿನ ಸುರಿಮಳೆಯಿಂದ ಪ್ರತಿಕ್ರಿಯಿಸಿದ್ದು ವಿಶೇಷ. ಪಂದ್ಯದಲ್ಲಿ ವಿರಾಟ್ ಅವರ ಅದ್ಭುತ ಬ್ಯಾಟಿಂಗ್ ಮತ್ತು ಜಿತೇಶ್ ಶರ್ಮಾ ಅವರ ಅಮೋಘ ಆಟದಿಂದ RCB ಗೆಲುವು ಸಾಧಿಸಿತು.

ಮೇ 27ರಂದು ನಡೆದ ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲಿ ಜಿತೇಶ್ ಶರ್ಮಾ (Jitesh Sharma) ನಾಯಕತ್ವದ ಆರ್ಸಿಬಿ ತಂಡ ರೋಚಕ ಗೆಲುವು ಸಾಧಿಸಿತು. ಲಖನೋನ ಎಕಾನ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ಅದ್ಭುತ ಪ್ರದರ್ಶನ ನೀಡಿ ಕ್ವಾಲಿಫೈಯರ್ 1ಕ್ಕೆ ಸ್ಥಾನ ಪಡೆದುಕೊಂಡಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರ್ಸಿಬಿ ಪಂದ್ಯ ಗೆದ್ದ ಬಳಿಕ ಅನುಷ್ಕಾ ಶರ್ಮಾ ಅವರು ಪತಿ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟರು. ಇದಕ್ಕೆ ಪ್ರತಿಯಾಗಿ ಅನುಷ್ಕಾ ಮುತ್ತಿನ ಮಳೆಯನ್ನೇ ಸುರಿಸಿದರು.
ಎಲ್ಎಸ್ಜಿ ಹಾಗೂ ಆರ್ಸಿಬಿ ನಡುವಣ ಪಂದ್ಯ ವೀಕ್ಷಣೆಗೆ ಅನುಷ್ಕಾ ಶರ್ಮಾ ಅವರು ಬಂದಿದ್ದರು. ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಎಲ್ಎಸ್ಜಿ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿತು. ಆ ಬಳಿಕ ಬಿರುಸಿನ ಆಟವನ್ನು ಆಡಿದರು. ಈ ವೇಳೆ ಅನುಷ್ಕಾ ಶರ್ಮಾ ಮುಖದಲ್ಲಿ ನಿರಾಸೆ ಎದ್ದು ಕಾಣುತ್ತಿತ್ತು. ಇನ್ನು, ವಿರಾಟ್ ಕೊಹ್ಲಿ ಅವರು ಬ್ಯಾಟ್ ಬೀಸುವಾಗ, ಅರ್ಧಶತಕ ಆದಾಗ ಅನುಷ್ಕಾ ಕುಣಿದು ಕುಪ್ಪಳಿಸಿದ್ದರು.
ವಿರಾಟ್ ಕೊಹ್ಲಿ ಔಟ್ ಆದ ಬಳಿಕ ಹೋಪ್ ಕಡೆಮೆ ಆಯಿತು. ಈ ವೇಳೆ ಜಿತೇಶ್ ಶರ್ಮಾ ಅವರು 33 ಬಾಲ್ಗೆ 83 ರನ್ ಚಚ್ಚಿ ಆರ್ಸಿಬಿ ಗೆಲುವಿಗೆ ಪ್ರಮುಖ ರುವಾರಿ ಆದರು. ಮ್ಯಾಚ್ ಗೆದ್ದ ಬಳಿಕ ವಿರಾಟ್ ಕೊಹ್ಲಿ ಅವರು ಖುಷಿಯಿಂದ ಓಡೋಡಿ ಬಂದರು. ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರು ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಕೊಟ್ಟರು. ಇದಕ್ಕೆ ಪ್ರತಿಯಾಗಿ ಅನುಷ್ಕಾ ಅವರು ಮುತ್ತುಗಳ ಸುರಿಮಳೆ ಸುರಿಸಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Real Lover Boy! #virushka pic.twitter.com/e9eDSYHZrj
— TANYA SINGHANIA (@tanya_singhania) May 27, 2025
She was never a bad luck, she was always his lucky charm and the biggest supporter ever. This is Anushka Sharma for you🎀❤️ pic.twitter.com/64MmKqYuYW
— ꜱᴀɴᴀ (@channamereyaa_) May 27, 2025
View this post on Instagram
ಮೇ 29ರಂದು ಆರ್ಸಿಬಿ ತಂಡವು ಪಂಜಾಬ್ ತಂಡವನ್ನು ಎದುರಿಸಲಿದೆ. ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಹಾಗೂ ಅನುಷ್ಕಾ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇಬ್ಬರೂ ಪರಸ್ಪರ ಭೇಟಿ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಸಿನಿಮಾ ವಿಚಾರಕ್ಕೆ ಬರೋದಾದರೆ ‘ಜೀರೋ’ (2018) ಚಿತ್ರದ ಬಳಿಕ ಅನುಷ್ಕಾ ಅವರ ಯಾವುದೇ ಸಿನಿಮಾ ರಿಲೀಸ ಆಗಿಲ್ಲ. ‘ಚಕ್ದಾ ಎಕ್ಸ್ಪ್ರೆಸ್’ ಸಿನಿಮಾದ ಶೂಟ್ ಪೂರ್ಣಗೊಂಡಿದೆಯಾದರೂ ರಿಲೀಸ್ ಬಗ್ಗೆ ಸ್ಪಷ್ಟತೆ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








