ಹೀರೋ ಹಾಗೂ ನಟಿಯರ ವಯಸ್ಸಿನ ಅಂತರದಲ್ಲಿ ಅಜಗಜಾಂತರ; ಹುಟ್ಟಿದೆ ಚರ್ಚೆ
ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ನಟ ಮತ್ತು ನಟಿಯರ ವಯಸ್ಸಿನ ಅಂತರದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಕಮಲ್ ಹಾಸನ್, ಸೂರ್ಯ, ಚಿರಂಜೀವಿ ಮುಂತಾದ ನಟರ ಜೊತೆ ಯುವ ನಟಿಯರು ನಟಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್ ಖಾನ್ ನಡುವಿನ ವಯಸ್ಸಿನ ಅಂತರವೂ ಟೀಕೆಗೆ ಗುರಿಯಾಗಿದೆ.

ಹೀರೋ ಹಾಗೂ ಹೀರೋಯಿನ್ ವಯಸ್ಸಿನ ಅಂತರವು ಚಿತ್ರರಂಗದಲ್ಲಿ ಪ್ರಮುಖ ವಿಷಯ ಆಗಿರುತ್ತದೆ. ಹೀರೋಗೆ ವಯಸ್ಸಾದರೂ ಯಂಗ್ ಹೀರೋಯಿನ್ಗಳ ಜೊತೆ ರೊಮ್ಯಾನ್ ಮಾಡಿದ ಸಾಕಷ್ಟು ಉದಾಹರಣೆ ಇದೆ. ಈ ರೀತಿ ಆದಾಗ ಕೆಲವೊಮ್ಮೆ ಸಾಕಷ್ಟು ಟೀಕೆಗಳು ಮೂಡಿದ ಉದಾಹರಣೆ ಇದೆ. ಈಗಲೂ ಹಾಗೆಯೇ ಆಗಿದೆ. ಟಾಲಿವುಡ್ (Tollywood) ಹಾಗೂ ಕಾಲಿವುಡ್ನಲ್ಲಿ ವಯಸ್ಸಿನ ಅಂತರವು ಮತ್ತೊಮ್ಮೆ ಚರ್ಚೆಗೆ ಬಂದಿದೆ. ಆ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕಮಲ್ ಹಾಸನ್, ಅಭಿರಾಮಿ ಹಾಗೂ ತ್ರಿಷಾ
ಕಮಲ್ ಹಾಸನ್ ಹಾಗೂ ಅಭಿರಾಮಿ, ತ್ರಿಷಾ ಕೃಷ್ಣನ್ ಅವರು ‘ಥಗ್ ಲೈಫ್’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಕಮಲ್ ಹಾಸನ್ ಹಾಗೂ ಅಭಿರಾಮಿ ಮಧ್ಯೆ ಕಿಸ್ಸಿಂಗ್ ದೃಶ್ಯ ಕೂಡ ವೈರಲ್ ಆಯ್ತು. ಇವರ ಮಧ್ಯೆ ಸುಮಾರು 29 ವರ್ಷ ವಯಸ್ಸಿನ ಅಂತರ ಇದೆ. ತ್ರಿಷಾ ಹಾಗೂ ಕಮಲ್ ನಡುವೆ 28 ವರ್ಷ ಗ್ಯಾಪ್ ಇದೆ. ಈ ವಿಚಾರ ಸೋಶಿಯ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಇದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ.
ಸೂರ್ಯ ಹಾಗೂ ಮಮಿತಾ ಬೈಜು
ಸೂರ್ಯ ಹಾಗೂ ಮಮಿತಾ ಬೈಜು ಅವರು ಇತ್ತೀಚೆಗೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಇವರಿಬ್ಬರೂ ಹೀರೋ-ಹೀರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಇದನ್ನು ಅನೇಕರು ಟೀಕೆ ಮಾಡಿದ್ದರು. ಆದರೆ, ಮಮಿತಾ ಜೊತೆ ಸೂರ್ಯ ಅವರು ರೊಮ್ಯಾನ್ಸ್ ಮಾಡೋದಿಲ್ಲ ಎಂದು ತಿಳಿದು ಬಂದಿದೆ.
ಚಿರಂಜೀವಿ ಹಾಗೂ ಶ್ರೀಮುಖಿ
ಚಿರಂಜೀವಿ ಹಾಗೂ ಶ್ರೀಮುಖಿ ಅವರು ಈ ಮೊದಲು ‘ಭೊಲಾ ಶಂಕರ್’ ಚಿತ್ರದಲ್ಲಿ ಒಟ್ಟಾಗಿ ನಟಿಸಿ ಟೀಕೆಗೆ ಒಳಗಾದರು. ಇದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕಿತ್ತು. ಆದರೆ, ಇದಕ್ಕೆ ತಂಡ ಹೆಚ್ಚು ತಲೆಕೆಡಸಿಕೊಂಡಿರಲಿಲ್ಲ. ಇಬ್ಬರ ಮಧ್ಯೆ ಸಾಕಷ್ಟು ವಯಸ್ಸಿನ ಅಂತರ ಇದೆ.
ಇದನ್ನೂ ಓದಿ: ನಟಿ ಸಾಯಿ ಧನ್ಶಿಕಾ ಜೊತೆ ಮದುವೆಗೆ ಸಜ್ಜಾದ ಕಾಲಿವುಡ್ ನಟ ವಿಶಾಲ್
ರಶ್ಮಿಕಾ-ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಅವರು ಈ ಮೊದಲು ‘ಸಿಕಂದರ್’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇದನ್ನು ಅನೇಕರು ಟೀಕೆ ಮಾಡಿದ್ದರು. ಈ ಬಗ್ಗೆ ಸಲ್ಮಾನ್ ಖಾನ್ ಓಪನ್ ಆಗಿ ಮಾತನಾಡಿದ್ದರು. ‘ಅವರ ಅಪ್ಪನಿಗೇ ಇಲ್ಲದ ಸಮಸ್ಯೆ ನಿಮಗೇಕೆ’ ಎಂದು ಕೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







