AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ್ ಕುಮಾರ್ ಸಿನಿಮಾ ನಿಲ್ಲಿಸಲು ನಿರ್ದೇಶಕನಿಗೆ ಹಣದಾಸೆ ತೋರಿಸಿದ್ರಾ ಆಮಿರ್ ಖಾನ್?

Aamir Khan-Akshay Kumar: ಆಮಿರ್ ಖಾನ್ ಬಾಲಿವುಡ್​ನ ಬಲು ದೊಡ್ಡ ನಟ. ಮೂವರು ಖಾನ್​ಗಳಲ್ಲಿ ಅದ್ಭುತ ನಟ ಮತ್ತು ಅದ್ಭುತ ಸಿನಿಮಾ ಪ್ರೇಮಿ. ಆದರೆ ಆಮಿರ್ ಖಾನ್ ಒಮ್ಮೆ, ನಿರ್ದೇಶಕನೊಬ್ಬನಿಗೆ ದೊಡ್ಡ ಮೊತ್ತದ ಹಣ ನೀಡಿ, ಅಕ್ಷಯ್ ಕುಮಾರ್ ನಟಿಸಬೇಕಿದ್ದ ಸಿನಿಮಾ ನಿಲ್ಲಿಸಲು ಪ್ರಯತ್ನ ಮಾಡಿದ್ದರೇ? ಹೀಗೊಂದು ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಆ ನಿರ್ದೇಶಕರೇ ಉತ್ತರ ನೀಡಿದ್ದಾರೆ.

ಅಕ್ಷಯ್ ಕುಮಾರ್ ಸಿನಿಮಾ ನಿಲ್ಲಿಸಲು ನಿರ್ದೇಶಕನಿಗೆ ಹಣದಾಸೆ ತೋರಿಸಿದ್ರಾ ಆಮಿರ್ ಖಾನ್?
Akshay Kumar Aamir Khan
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Jun 14, 2025 | 10:50 PM

Share

ಆಮಿರ್ ಖಾನ್ (Aamir Khan) ಹಾಗೂ ಅಕ್ಷಯ್ ಕುಮಾರ್ (Akshay Kumar) ಅವರು ಬಾಲಿವುಡ್​ನ ಬೇಡಿಕೆಯ ಹೀರೋಗಳು. ಇಬ್ಬರೂ ಭಿನ್ನ ಭಿನ್ನ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇಬ್ಬರೂ ಸಿನಿಮಾ ಮಾಡುವ ರೀತಿ ಕೂಡ ಭಿನ್ನ. ಏಕೆಂದರೆ ಆಮಿರ್ ಖಾನ್ ಅವರು ಏಕ ಕಾಲಕ್ಕೆ ಒಂದೇ ಸಿನಿಮಾ ಮಾಡುತ್ತಾರೆ. ಒಂದು ಸಿನಿಮಾ ಮಾಡುವಾಗ ಮತ್ತೊಂದು ಚಿತ್ರ ಒಪ್ಪಿಕೊಳ್ಳುವುದಿಲ್ಲ. ಆದರೆ, ಅಕ್ಷಯ್ ಕುಮಾರ್ ಹಾಗಲ್ಲ. ಅವರ ಬಳಿ ಡಜನ್​ಗೆಟ್ಟಲೆ ಸಿನಿಮಾ ಇರುತ್ತದೆ. ಈಗ ಆಮಿರ್ ಖಾನ್ ಅವರು ಅಕ್ಷಯ್ ಕುಮಾರ್ ಸಿನಿಮಾ ನಿಲ್ಲಿಸಲು ಹಣದಾಸೆ ತೋರಿಸಿದ ಬಗ್ಗೆ ವರದಿ ಆಗಿದ್ದು, ಇದಕ್ಕೆ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.

ಅಕ್ಷಯ್ ಕುಮಾರ್ ನಟನೆಯ ‘ಒಎಂಜಿ’ 2012ರಲ್ಲಿ ರಿಲೀಸ್ ಆಗಿ ಹಿಟ್ ಆಯಿತು. ಎರಡು ವರ್ಷದ ಬಳಿಕ ಅಂದರೆ 2014ರಲ್ಲಿ ‘ಪಿಕೆ’ ಬಂತು. ಈ ಸಿನಿಮಾ ಕೂಡ ಹಿಟ್ ಆಯಿತು. ಎರಡೂ ಸಿನಿಮಾಗಳ ಕಥೆ ಮಧ್ಯೆ ಸಾಕಷ್ಟು ಸಾಮ್ಯತೆ ಇತ್ತು. ಆಮಿರ್ ಖಾನ್ ಅವರು ‘ಒಎಂಜಿ’ ಸಿನಿಮಾ ನಿಲ್ಲಿಸಲು ನಿರ್ದೇಶಕ ಉಮೇಶ್ ಶುಕ್ಲಾಗೆ ಹಣ ನೀಡಿದ್ದರು ಎನ್ನುವ ಮಾತು ಇತ್ತು. ಇದಕ್ಕೆ ಉಮೇಶ್ ಸ್ಪಷ್ಟನೆ ನೀಡಿದ್ದಾರೆ.

‘ನಮ್ಮಿಬ್ಬರ ಮಧ್ಯೆ ಒಂದೇ ರೀತಿಯ ಐಡಿಯಾ ಬಂದಿರಬಹುದು. ನನ್ನ ಚಿತ್ರಕ್ಕೂ ಮೊದಲು ಪಿಕೆ ಬಿಡುಗಡೆಯಾಗಿದ್ದರೆ, ನನ್ನ ಸಿನಿಮಾ ಪಿಕೆಯನ್ನು ಹೋಲುತ್ತದೆ ಎಂದು ಜನರು ಹೇಳುತ್ತಿದ್ದರು. ಒಎಂಜಿ ನಾನೇ ಬರೆದ ನಾಟಕವನ್ನು ಆಧರಿಸಿದೆ.  ಪಿಕೆ ಚಿತ್ರ ರಾಜ್‌ಕುಮಾರ್ ಹಿರಾನಿ ಮತ್ತು ಅಭಿಜತ್ ಜೋಶಿ ಬರೆದಿದ್ದಾರೆ. ನನ್ನ ನಾಟಕವು ಬಹಳ ಸಮಯದಿಂದ ಪ್ರದರ್ಶನಗೊಳ್ಳುತ್ತಿದೆ ಮತ್ತು ಪಿಕೆ ತಂಡವು ಅದನ್ನು ವೀಕ್ಷಿಸಿರಬಹುದು’ ಎಂದಿದ್ದಾರೆ ಉಮೇಶ್.

ಇದನ್ನೂ ಓದಿ:ನೆಗೆಟಿವ್ ವಿಮರ್ಶೆಗಳ ನಡುವೆಯೂ 100 ಕೋಟಿ ದಾಟಿದ ಅಕ್ಷಯ್ ಕುಮಾರ್ ಸಿನಿಮಾ

‘ರಾಜ್‌ಕುಮಾರ್ ಹಿರಾನಿ, ವಿಧು ವಿನೋದ್ ಚೋಪ್ರಾ ಮತ್ತು ಬರಹಗಾರ ಅಭಿಜತ್ ಜೋಶಿ ಎಲ್ಲರೂ ನನ್ನ ನಾಟಕವನ್ನು ನೋಡಿದ್ದರು. ನನ್ನ ನಾಟಕದ ಪ್ರಭಾವ ಇರಬಹುದು. ನೀವು ಒಂದು ಪ್ರೇಮಕಥೆಯನ್ನು ಮಾಡುತ್ತಿದ್ದರೆ, ಮತ್ತು ಆ ಚಿತ್ರದಲ್ಲಿ ಯಾರಾದರೂ ‘ಐ ಲವ್ ಯೂ’ ಎಂದು ಹೇಳಿದರೆ, ಖಂಡಿತ ಅದು ಪ್ರೇಮಕಥೆ ಆಗುತ್ತದೆ’ ಎಂದಿದ್ದಾರೆ ಅವರು.

‘ನಾನು ಚಿತ್ರ ಮಾಡದಿರಲು ವಿಧು ವಿನೋದ್ ಚೋಪ್ರಾ, ಆಮಿರ್ ಖಾನ್ ನನಗೆ 8 ಕೋಟಿ ರೂ. ನೀಡಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಅದು ಕೇವಲ ಗಾಸಿಪ್. ಆ ರೀತಿ ಏನೂ ಆಗಿಲ್ಲ. ಅವರೆಲ್ಲರೂ ಹಣ ನೀಡುವಂತಹ ಸಣ್ಣ ಕೆಲಸ ಮಾಡುವುದಿಲ್ಲ. ಅವರು ತುಂಬಾ ಪ್ರತಿಭಾನ್ವಿತರು ಮತ್ತು ಘನತೆಯುಳ್ಳವರು’ ಎಂದಿದ್ದಾರೆ  ಉಮೇಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ