ನಿಧನ ಹೊಂದುವ ಹಿಂದಿನ ದಿನ ಸಾಯುವ ದೃಶ್ಯವನ್ನೇ ಶೂಟ್ ಮಾಡಿದ್ದ ಶಂಕರ್ ನಾಗ್
ಶಂಕರ್ ನಾಗ್ ಅವರ ಅಕಾಲಿಕ ಮರಣವು ಕನ್ನಡ ಚಿತ್ರರಂಗಕ್ಕೆ ತುಂಬಾ ದೊಡ್ಡ ನಷ್ಟವಾಗಿತ್ತು. ಅವರ ಕೊನೆಯ ಚಿತ್ರ ‘ಸುಂದರಕಾಂಡ’ದಲ್ಲಿ, ಅವರು ಸಾಯುವ ದೃಶ್ಯವನ್ನು ಚಿತ್ರೀಕರಿಸಿದ ದಿನವೇ ಅವರು ನಿಧನರಾದರು ಎಂಬುದು ಆಘಾತಕಾರಿ ಸಂಗತಿ. ಈ ಲೇಖನವು ಅವರ ಅಂತಿಮ ದಿನದ ಘಟನೆಗಳನ್ನು ಮತ್ತು ಅವರ ಚಿತ್ರರಂಗದ ಕೊಡುಗೆಗಳನ್ನು ಚರ್ಚಿಸುತ್ತದೆ. ಅವರ ಸಾವು ಅಭಿಮಾನಿಗಳಲ್ಲಿ ಇಂದಿಗೂ ಆಘಾತವನ್ನು ಉಂಟುಮಾಡಿದೆ.

ಶಂಕರ್ ನಾಗ್ ಅವರು ಸಾವನ್ನು ಅರಗಿಸಿಕೊಳ್ಳಲು ಫ್ಯಾನ್ಸ್ ಬಳಿ ಈಗಲೂ ಸಾಧ್ಯವಾಗುತ್ತಿಲ್ಲ. ಅವರು ಇರಬೇಕಿತ್ತು.. ಎಂದು ಒಮ್ಮೆ ಎಲ್ಲರಿಗೂ ಅನಿಸಿಯೇ ಅನಿಸುತ್ತದೆ. ಶಂಕರ್ ನಾಗ್ (Shankar Nag) ಸಾಯುವ ಸಂದರ್ಭದಲ್ಲಿ ಹುಟ್ಟದೇ ಇದ್ದ ಅನೇಕರು ಇದ್ದಾರೆ. ಅವರಿಗೂ ಶಂಕರ್ ನಾಗ್ ಫೇವರಿಟ್ ಆಗಿದ್ದರು. ಅಷ್ಟು ಅದ್ಭುತವಾಗಿ ಸಿನಿಮಾಗಳನ್ನು ಮಾಡಿದ್ದರು ಅವರು. ಅವರು ಸಾಯುವ ಹಿಂದಿನ ದಿನ, ಸಾಯುವ ದೃಶ್ಯದ ಶೂಟ್ನೇ ಮಾಡಲಾಗಿತ್ತು. ಈ ವಿಚಾರವನ್ನು ಈ ಮೊದಲು ಹೇಳಿಕೊಂಡಿದ್ದರು ದೊಡ್ಡಣ್ಣ.
ಶಂಕರ್ ನಾಗ್ ಅವರು ಚಿತ್ರರಂಗಕ್ಕೆ ಬಂದಿದ್ದು ‘ಸರ್ವಸಾಕ್ಷಿ’ ಹೆಸರಿನ ಮರಾಠಿ ಚಿತ್ರದ ಮೂಲಕ. ಆ ಬಳಿಕ ‘ಒಂದಾನೊಂದು ಕಾಲದಲ್ಲಿ’ ಹೆಸರಿನ ಕನ್ನಡ ಚಿತ್ರದಲ್ಲಿ ನಟಿಸಿದರು. 1980ರ ‘ಮಿಂಚಿನ ಓಟ’ ಚಿತ್ರದ ಮೂಲಕ ಸಿನಿಮಾ ನಿರ್ದೇಶನಕ್ಕೆ ಇಳಿದರು. ಸಿನಿಮಾ ನಿರ್ಮಾಣ ಮಾಡಿದರು, ಚಿತ್ರಕಥೆ ಬರೆದರು. ‘ಸುಂದರಕಾಂಡ’ ಚಿತ್ರವು ಅವರು ಶೂಟ್ ಮಾಡಿದ ಕೊನೆಯ ಸಿನಿಮಾ.
View this post on Instagram
‘ಸುಂದರ ಕಾಂಡ’ ಚಿತ್ರದಲ್ಲಿ ಸಾಯೋ ದೃಶ್ಯ ಇತ್ತು. ಜನರೇಟ್ ಕೆಟ್ಟೋಯ್ತು. 9 ಗಂಟೆಗೆ ಶೂಟ್ ಮುಗಿಯಬೇಕಿತ್ತು. ಆದರೆ, 10 ವರೆಗೆ ದೃಶ್ಯ ಮುಗಿಯಿತು. ಸಾಯೋ ದೃಶ್ಯ ಮಾಡಿ ಹಾಗೆಯೇ ಹೋಗಬಾರದು ಎಂದೆವು. ಹೀಗಾಗಿ, ಅವನು ನಗುವ ದೃಶ್ಯವನ್ನು ಶೂಟ್ ಮಾಡಿದೆವು. ಆ ಬಳಿಕ ಕಳುಹಿಸಿಕೊಟ್ಟೆವು. ಬೆಳಿಗ್ಗೆ ನೋಡಿದರೆ ಸಾವಿನ ಸುದ್ದಿ ಬಂತು. ನಿಜಕ್ಕೂ ಶಾಕ್ ಆಯಿತು’ ಎಂದಿದ್ದರು ದೊಡ್ಡಣ್ಣ.
ಇದನ್ನೂ ಓದಿ: ಭಿನ್ನವಾಗಿ ಶಂಕರ್ ನಾಗ್ ಹುಟ್ಟುಹಬ್ಬ ಆಚರಿಸಿದ ‘ಮರ್ಯಾದೆ ಪ್ರಶ್ನೆ’ ತಂಡ
ಶಂಕರ್ ನಾಗ್ ಅವರು ಸೆಪ್ಟೆಂಬರ್ 30ರ 1990ರಂದು ನಿಧನ ಹೊಂದಿದರು. ‘ಜೋಕುರಸ್ವಾಮಿ’ ಚಿತ್ರದ ಶೂಟ್ಗಾಗಿ ಅವರು ತೆರಳುತ್ತಿದ್ದರು. ಈ ವೇಳೆ ಅವರ ಕಾರು ದಾವಣಗೆರೆ ಬಳಿ ಅಪಘಾತಕ್ಕೆ ಒಳಗಾಯಿತು. ಈ ವೇಳೆ ಅವರು ಕೊನೆಯುಸಿರು ಎಳೆದರು. ಅವರು ಸಾಯುವಾಗ ಅವರಿಗೆ ಕೇವಲ 35 ವರ್ಷ ವಯಸ್ಸು ಆಗಿತ್ತು. ಅವರು ನಿಧನ ಹೊಂದಿದ ಬಳಿಕ ಸಹೋದರ ಅನಂತ್ ನಾಗ್ ಅವರು ಸಾಕಷ್ಟು ನೊಂದುಕೊಂಡಿದ್ದರು. ಈಗಲೂ ಆ ನೋವಿನಲ್ಲೇ ಬದುಕುತ್ತಿದ್ದಾರೆ. ಆದರೆ, ಕಾಲ ಮತ್ತೆ ಹಿಂದಕ್ಕೆ ಬರೋದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







