ಡ್ರಗ್ ಕೇಸ್‌ನಲ್ಲಿ ಮತ್ತೋರ್ವ ಹೀರೋ ಅರೆಸ್ಟ್; ಬೆಳೆಯುತ್ತಲೇ ಇದೆ ಪಟ್ಟಿ
ತಮಿಳು ನಟ ಕೃಷ್ಣ ಅವರನ್ನು ಡ್ರಗ್ ಕೇಸ್‌ನಲ್ಲಿ ಬಂಧಿಸಲಾಗಿದೆ. ಇದಕ್ಕೂ ಮುನ್ನ ಶ್ರೀಕಾಂತ್ ಮತ್ತು ನಿರ್ಮಾಪಕ ಪ್ರಸಾದ್ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣವು ಚಿತ್ರರಂಗದಲ್ಲಿ ವ್ಯಾಪಕವಾಗಿ ಹಬ್ಬಿದೆ. ಪೊಲೀಸರೂ ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ. ಈ ಕೇಸ್‌ನಲ್ಲಿ 22 ಜನರನ್ನು ಬಂಧಿಸಲಾಗಿದೆ .

ಡ್ರಗ್ ಕೇಸ್‌ನಲ್ಲಿ ಸೆಲೆಬ್ರಿಟಿಗಳ ಹೆಸರು ಕೇಳಿ ಬರುತ್ತಿರುವುದು ಇದೇ ಮೊದಲೇನು ಅಲ್ಲ. ಈ ಮೊದಲು ಕೂಡ ಅನೇಕ ಸೆಲೆಬ್ರಿಟಿಗಳು ಈ ಕೇಸ್‌ನಲ್ಲಿ ಅರೆಸ್ಟ್ ಆದ ಉದಾಹರಣೆ ಇದೆ. ಈಗ ತಮಿಳು ನಟ ಕೃಷ್ಣ (Krishna) ಅವರನ್ನು ಬಂಧಿಸಲಾಗಿದೆ. ಈ ಮೊದಲು ನಟ ಶ್ರೀಕಾಂತ್ ಹಾಗೂ ನಿರ್ಮಾಪಕ ಪ್ರಸಾದ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೃಷ್ಣ ಅವರು ತಲೆಮರಿಸಿಕೊಂಡಿದ್ದರು. ಈಗ ಕೃಷ್ಣ ಅವರ ಬಂಧನ ಆಗಿದೆ.
ಕೃಷ್ಣ ಅವರು ಸಿನಿಮಾ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಅವರು ಕೂಡ ಹೀರೋ. ನುಂಗಂಬಾಕಂ ಪೊಲೀಸ್ ಠಾಣೆಯಲ್ಲಿ ಅವರನ್ನು ಇರಿಸಿ ವಿಚಾರಣೆ ಮಾಡಲಾಗುತ್ತಿದೆ. ಪ್ರಸಾದ್ ಅವರು ಫಿಲ್ಮ್ ಇಂಡಸ್ಟ್ರಿಗೆ ಡ್ರಗ್ ಹಂಚಿಕೆ ಮಾಡುತ್ತಿದ್ದರು. ಇವರು ಡ್ರಗ್ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದರು ಎನ್ನಲಾಗಿದೆ. ಇದರಲ್ಲಿ ಕೃಷ್ಣ ಭಾಗಿ ಆಗಿದ್ದರು ಎನ್ನಲಾಗಿದೆ. ಕೃಷ್ಣ ಅವರ ಭಾಗಿತ್ವ ಎಷ್ಟಿದೆ ಎಂಬುದರ ತನಿಖೆ ನಡೆಯುತ್ತಿದೆ.
ಕೃಷ್ಣ ಅವರು ಬಾಲ ಕಲಾವಿದರಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಪೋಷಕ ಪಾತ್ರ ಮಾಡಿದರು. 2010ರ ಸುಮಾರಿಗೆ ಹೀರೋ ಆಗಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. 2012ರಲ್ಲಿ ರಿಲೀಸ್ ಆದ ‘ಕಳುಗು’ ಚಿತ್ರದ ಮೂಲಕ ಕೃಷ್ಣ ಜನಪ್ರಿಯತೆ ಪಡೆದರು. ಅವರು ಕೆಲವು ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ.
ಡ್ರಗ್ ಕೇಸ್ ಬಗೆದಷ್ಟು ವಿಸ್ತಾರವಾಗುತ್ತಲೇ ಇದೆ. ಈ ಪ್ರಕರಣದಲ್ಲಿ 22 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಕೂಡ ಭಾಗಿ ಆಗಿದ್ದಾರೆ. ಈ ಪ್ರಕರಣದಲ್ಲಿ ಜಾಬ್ ಸ್ಕ್ಯಾಮ್, ಬ್ಲ್ಯಾಕ್ಮೇಲ್, ಹಾಗೂ ಫ್ರಾಡ್ಗಳು ಕೂಡ ಸೇರಿವೆ.
ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಜನಪ್ರಿಯ ನಟನ ಬಂಧನ, ಮತ್ತೊಬ್ಬ ನಟನಿಗಾಗಿ ಹುಡುಕಾಟ
ಇತ್ತೀಚೆಗೆ ಚಿತ್ರರಂಗದಲ್ಲಿ ಡ್ರಗ್ ಪಾರ್ಟಿ ಹೆಚ್ಚುತ್ತಿದೆ. ಈ ಮೊದಲು ಮಂಗ್ಲಿ ಬರ್ತ್ಡೇ ಪಾರ್ಟಿಯಲ್ಲಿ ಡ್ರಗ್ ಬಳಕೆ ಮಾಡಿದ ಆರೋಪ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ಕೂಡ ದಾಖಲಾಗಿದೆ. ಈ ಪಾರ್ಟಿ ನಡೆದ ರೆಸಾರ್ಟ್ ಮ್ಯಾನೇಜರ್ಗೆ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಆದರೆ, ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಆಗಿಲ್ಲ ಎಂದು ಮಂಗ್ಲಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








