ಪಾಕಿಸ್ತಾನದ ಈ ವ್ಯಕ್ತಿ ಅಪ್ಪು ಅಭಿಮಾನಿ; ಕ್ಯಾಬ್ನಲ್ಲಿ ಸದಾ ಪ್ಲೇ ಆಗುತ್ತೆ ಪುನೀತ್ ಸಾಂಗ್
ಪಾಕಿಸ್ತಾನದ ಕ್ಯಾಬ್ ಡ್ರೈವರ್ ಒಬ್ಬರು ಪುನೀತ್ ರಾಜ್ ಕುಮಾರ್ ಅವರ ಹಾಡುಗಳನ್ನು ತುಂಬಾ ಇಷ್ಟಪಡುತ್ತಾರಂತೆ. ಕರ್ನಾಟಕ ಮೂಲದ ದುಬೈ ನಿವಾಸಿ ಈ ವಿಚಾರ ತಿಳಿಸಿದ್ದಾರೆ. ಭಾರತ-ಪಾಕಿಸ್ತಾನದ ಉದ್ವಿಗ್ನತೆಯ ನಡುವೆಯೂ ಸಂಗೀತದ ಅಭಿಮಾನವು ಗಡಿಗಳನ್ನು ದಾಟಿದೆ ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯಾವುದೂ ಸರಿ ಇಲ್ಲ. ಎರಡೂ ದೇಶಗಳ ಮಧ್ಯೆ ಯುದ್ಧ ಭಿತಿ ಕೂಡ ಶುರುವಾಗಿತ್ತು. ಈ ಕಾರಣದಿಂದಲೇ ಪಾಕಿಸ್ತಾನದ ಕಲಾವಿದರನ್ನು ಹಾಗೂ ಅಲ್ಲಿನ ಸಿನಿಮಾಗಳನ್ನು ಭಾರತದಲ್ಲಿ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಪಾಕಿಸ್ತಾನದವರ ಸೋಶಿಯಲ್ ಮೀಡಿಯಾ ಖಾತೆಯನ್ನು ಭಾರತದಲ್ಲಿ ಆ್ಯಕ್ಸೆಸ್ ಮಾಡಲು ಸಾಧ್ಯವಿಲ್ಲ. ಆದರೆ, ಅಭಿಮಾನಿವನ್ನು ಎಂದಾದರೂ ತಡೆಯಲು ಸಾಧ್ಯವೇ? ಇದಕ್ಕೆ ಪಾಕಿಸ್ತಾನದ ಈ ಕ್ಯಾಬ್ ಡ್ರೈವರ್ ಒಳ್ಳೆಯ ಉದಾಹರಣೆ. ಇವರ ಕಾರಿನಲ್ಲಿ ಪುನೀತ್ (Puneeth Rajkumar) ಹಾಡುಗಳು ಪ್ಲೇ ಆಗುತ್ತವೆ. ಈ ವಿಚಾರವನ್ನು ಕನ್ನಡದವರೊಬ್ಬರು ರಿವೀಲ್ ಮಾಡಿದ್ದಾರೆ.
ಪ್ರಿಯಾಂಕಾ ಎಂಬುವವರು ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಕರ್ನಾಟಕದವರಾಗಿದ್ದು, ದುಬೈನಲ್ಲಿ ವಾಸವಾಗಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ. ಅವರು ಕ್ಯಾಬ್ ಏರುತ್ತಿದ್ದಂತೆ ಆ ವ್ಯಕ್ತಿ ನೀವು ಯಾವ ಊರಿನವರು ಎಂದು ಕೇಳಿದರಂತೆ. ಅದಕ್ಕೆ ಇವರು ಕರ್ನಾಟಕ, ಭಾರತ ಎಂದಿದ್ದಾರೆ. ಆ ಕ್ಷಣಕ್ಕೆ ಡ್ರೈವರ್ ಬಾಯಿಂದ ಬಂದಿದ್ದು ‘ಪುನೀತ್ ರಾಜ್ಕುಮಾರ್’ ಹೆಸರು.
‘ಈ ವ್ಯಕ್ತಿ ಪಾಕಿಸ್ತಾನದವರು. ಆದರೆ, ಇವರಿಗೆ ಕನ್ನಡ ಹಾಡು ಅದರಲ್ಲೂ ಪುನೀತ್ ರಾಜ್ಕುಮಾರ್ ಹಾಡನ್ನು ಅವರು ಸಾಕಷ್ಟು ಇಷ್ಟಪಡುತ್ತಾರೆ’ ಎಂದರು ಪ್ರಿಯಾಂಕಾ. ಇದಕ್ಕೆ ಕ್ಯಾಬ್ ಡ್ರೈವರ್, ‘ನನಗೆ ಈ ಸಾಂಗ್ ತುಂಬಾನೇ ಇಷ್ಟ. ಪುನೀತ್ ಸಿನಿಮಾದ ಹಾಡು ನನಗೆ ಇಷ್ಟ’ ಎಂದು ಅವರು ಹೇಳಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
View this post on Instagram
‘ಸೂರ್ಯ ಚಂದ್ರ ಇರೋವರೆಗೂ ಅಪ್ಪು ಬಾಸ್ ಅಮರ’ ಎಂದು ಕೆಲವರು ಈ ವಿಡಿಯೋಗೆ ಕಮೆಂಟ್ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಪ್ರೀತಿಗೆ ಗಡಿ ಇಲ್ಲ’ ಎಂದಿದ್ದಾರೆ. ಇನ್ನೂ ಕೆಲವರು ಪುನೀತ್ ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ ಕನ್ನಡ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಅವರು ನಮ್ಮನ್ನು ಅಗಲಿದರೂ ಅವರನ್ನು ನೆನಪು ಮಾಡಿಕೊಳ್ಳುವ ಕೆಲಸ ಈಗಲೂ ಆಗುತ್ತಿದೆ. ಪುನೀತ್ ಹೆಸರಲ್ಲಿ ರಸ್ತೆಗಳು ನಿರ್ಮಾಣ ಆಗಿವೆ. ಪಾರ್ಕ್ಗಳಿಗೆ ಪುನೀತ್ ಹೆಸರನ್ನು ಕೂಡ ಇಡಲಾಗಿದೆ.
ಇದನ್ನೂ ಓದಿ: ‘ಅವನಿರಬೇಕಿತ್ತು’ ಸಿನಿಮಾ ಟ್ರೇಲರ್ ನೋಡಿ ಮೆಚ್ಚಿದ ಅಶ್ವಿನಿ ಪುನೀತ್ ರಾಜ್ಕುಮಾರ್
ಪುನೀತ್ ರಾಜ್ಕುಮಾರ್ ಅವರು 2021ರ ಅಕ್ಟೋಬರ್ 29ರಂದು ನಿಧನ ಹೊಂದಿದರು. ಅವರು ಇಲ್ಲ ಎಂಬ ನೋವನ್ನು ಈಗಲೂ ಅಭಿಮಾನಿಗಳ ಬಳಿ ಮರೆಯಲು ಸಾಧ್ಯವಾಗುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:07 am, Thu, 26 June 25








