ಖ್ಯಾತ ನಿರ್ಮಾಪಕನ ಮಗನಾದರೂ ಫ್ಲಾಪ್ ಹೀರೋ ಆಗಿದ್ದೇಕೆ ಅರ್ಜುನ್ ಕಪೂರ್?
ಅರ್ಜುನ್ ಕಪೂರ್ ಅವರಿಗೆ 40ನೇ ವರ್ಷದ ಜನ್ಮದಿನ. ಬಾಲಿವುಡ್‌ನಲ್ಲಿ ಅವರ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಅವರು ಹೋರಾಡುತ್ತಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲಾಗಿದೆ. "2 ಸ್ಟೇಟ್ಸ್" ಚಿತ್ರ ಅವರ ಏಕೈಕ ದೊಡ್ಡ ಯಶಸ್ಸು. ನೆಪೋಟಿಸಂ ಆರೋಪಗಳು ಮತ್ತು ವೈಯಕ್ತಿಕ ಜೀವನದ ಟೀಕೆಗಳು ಅವರ ಚಿತ್ರರಂಗದ ಪ್ರಯಾಣದ ಮೇಲೆ ಪರಿಣಾಮ ಬೀರಿವೆ

ಅರ್ಜುನ್ ಕಪೂರ್ (Arjun Kapoor) ಅವರಿಗೆ ಇಂದು (ಜೂನ್ 26) ಜನ್ಮದಿನ. ಅವರು ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರ ಮಗ. ಬೋನಿ ಕಪೂರ್ ಬಾಲಿವುಡ್‌ನಲ್ಲಿ ಹಲವು ಹಿಟ್ ಚಿತ್ರಗಳನ್ನು ನಿರ್ಮಿಸಿದವರು. ಜಾನ್ವಿ ಕಪೂರ್ ಅವರು ಅರ್ಜುನ್ಗೆ ಮಲ ಸಹೋದರಿ. ಇಷ್ಟೆಲ್ಲ ಇದ್ದರೂ ಅರ್ಜುನ್ಗೆ ಒಂದೇ ಒಂದು ದೊಡ್ಡ ಹಿಟ್ ಕೊಡೋಕೆ ಆಗಿಲ್ಲ. ‘2 ಸ್ಟೇಟ್ಸ್’ ಸಿನಿಮಾ ಎವರೇಜ್ ಚಿತ್ರವಾಯಿತು ಮತ್ತು ಇದು ಅವರ ವೃತ್ತಿ ಜೀವನದ ದೊಡ್ಡ ಗೆಲುವು ಎಂದು ಪರಿಗಣಿಸಬಹುದು. ಅರ್ಜುನ್ ಕಪೂರ್ ಅವರು ಜನಿಸಿದ್ದು 1985ರಲ್ಲಿ. ಅವರಿಗೆ ಈಗ 40 ವರ್ಷ.
ಟ್ಯಾಲೆಂಟ್ ಇಲ್ಲ
ಅರ್ಜುನ್ ಕಪೂರ್ಗೆ ನಟನಾ ಟ್ಯಾಲೆಂಟ್ ಇಲ್ಲ ಎಂದು ಅನೇಕರು ಹೇಳಿದ್ದು ಇದೆ. ಪಾತ್ರಕ್ಕೆ ಬೇಕಾದ ತೂಕವನ್ನು ಅವರು ಒದಗಿಸೋಕೆ ಸಾಧ್ಯ ಆಗಿಲ್ಲ. ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳೋ ತಾಕತ್ತು ಇಲ್ಲ. ಅಭಿಮಾನಿಗಳು ಅವರ ಎದುರು ಬಂದು ಸೆಲ್ಫಿ ತೆಗೆದುಕೊಳ್ಳುವಾಗ ಅರ್ಜುನ್ ಸಿಟ್ಟಾದರೆ, ‘ಇರೋ ಒಬ್ಬ ಅಭಿಮಾನಿಯನ್ನೂ ಅರ್ಜುನ್ ಕಳೆದುಕೊಂಡರು’ ಎಂದು ಟ್ರೋಲ್ ಆದ ಉದಾಹರಣೆ ಇದೆ.
ಬಾಕ್ಸ್ ಆಫೀಸ್ ಸ್ಟ್ರಗಲ್
ಅವರು ಚಿತ್ರರಂಗಕ್ಕೆ ಸಹಾಯಕ ನಿರ್ದೇಶಕರಾಗಿ ಕಾಲಿಟ್ಟರು. ‘ಇಶಕ್ಜಾದೇ’ ಅವರ ನಟನೆಯ ಮೊದಲ ಚಿತ್ರ. ಈ ಚಿತ್ರವು 2012ರಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಗೆಲ್ಲಲಿಲ್ಲ. 2014ರಲ್ಲಿ ‘2 ಸ್ಟೇಟ್ಸ್’ ಚಿತ್ರ ಬಂತು. ನಂತರ ಮಾಡಿದ ಚಿತ್ರಗಳು ಫ್ಲಾಪ್ ಆದವು. ವಿಲನ್ ಆಗಿಯೂ ಅವರು ಪ್ರಯತ್ನಿಸಿದರು ಮತ್ತು ಗೆಲುವ ಕಾಣಲು ವಿಫಲರಾದರು. ಹೀಗಾಗಿ, ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬರುತ್ತಿಲ್ಲ.
ಇದನ್ನೂ ಓದಿ: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಅರ್ಜುನ್ ಕಪೂರ್
ನೆಪೋಟಿಸಂ
ನೆಪೋಟಿಸಂ ಕಿಡ್ ಆಗಿಯೂ ಯಶಸ್ಸು ಕಾಣಬೇಕು ಎಂದರೆ ಅಷ್ಟು ಟ್ಯಾಲೆಂಟ್ ತೋರಿಸಬೇಕು. ಆದರೆ, ಅರ್ಜುನ್ ಬಳಿ ಅದು ಸಾಧ್ಯವಿಲ್ಲ. ಹೀಗಾಗಿ, ಅವರ ಸಿನಿಮಾಗಳು ಸೋಲುತ್ತಿವೆ.
ಸಂಬಂಧಗಳು..
ಓರ್ವ ನಟ ವೈಯಕ್ತಿಕ ಜೀವನದಲ್ಲಿ ಹೇಗಿರುತ್ತಾರೆ ಎಂಬುದರ ಮೇಲೂ ಜನರು ಅವರನ್ನು ಇಷ್ಟಪಡಬೇಕೇ ಬೇಡವೇ ಎಂದು ನಿರ್ಧರಿಸುತ್ತಾರೆ. ಅರ್ಜುನ್ ಕಪೂರ್ ಅವರು ವಯಸ್ಸಿನಲ್ಲಿ ದೊಡ್ಡವರಾದ ಮಲೈಕಾ ಅರೋರಾ ಜೊತೆ ಡೇಟಿಂಗ್ ಮಾಡಿ ಸುದ್ದಿ ಆದರು. ಇದರಿಂದ ಅವರು ಟೀಕೆ ಕೂಡ ಎದುರಿಸಬೇಕಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







