ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಅರ್ಜುನ್ ಕಪೂರ್

ಬಾಲಿವುಡ್ ನಟ ಅರ್ಜುನ್ ಕಪೂರ್ ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳಾಗಿವೆ. ಆದರೆ ಈಗಲೂ ಸಹ ಆರಕ್ಕೇರದ ಮೂರಕ್ಕಿಳಿಯದ ನಟರಾಗಿದ್ದಾರೆ. ಸಿನಿಮಾಗಳಿಗಿಂತಲೂ ವೈಯಕ್ತಿಕ ಜೀವನದಿಂದ ಹೆಚ್ಚು ಜನಪ್ರಿಯರು ಅರ್ಜುನ್. ಇತ್ತೀಚೆಗೆ ಅವರು ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ.

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಅರ್ಜುನ್ ಕಪೂರ್
Follow us
ಮಂಜುನಾಥ ಸಿ.
|

Updated on: Nov 08, 2024 | 3:41 PM

ಬಾಲಿವುಡ್ ನಟ ಅರ್ಜುನ್ ಕಪೂರ್, ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 14 ವರ್ಷಗಳಾಗಿವೆ. ಈ ವರೆಗೂ ಅವರಗೆ ಸ್ಟಾರ್ ಗಿರಿ ಎಂಬುದು ದೊರೆತಿಲ್ಲ. ಅವರ ನಟನೆ ಪ್ರತಿಬಾರಿಯೂ ವಿಮರ್ಶೆಗೆ ಗುರಿಯಾಗುತ್ತಲೇ ಇದೆ. ಸಿನಿಮಾ ಅವಕಾಶಗಳು ಇತ್ತೀಚೆಗೆ ಕಡಿಮೆ ಆಗಿವೆ. ಸಿನಿಮಾಗಳಿಗಿಂತಲೂ ಹೆಚ್ಚಾಗಿ ಅರ್ಜುನ್ ಕಪೂರ್ ಹೆಸರು ಕೇಳಿಬರುವುದು ಅವರ ವೈಯಕ್ತಿಕ ಬದುಕಿನ ಬಗ್ಗೆ. ತಮಗಿಂತ ವಯಸ್ಸಿನಲ್ಲಿ ಬಹಳ ಹಿರಿಯರಾಗಿದ್ದ ಮಲೈಕಾ ಅರೋರಾ ಜೊತೆಗೆ ಸುಮಾರು ಎಂಟು ವರ್ಷಗಳ ಕಾಲ ಲಿವಿನ್ ರಿಲೇಶನ್​ಷಿಪ್​ನಲ್ಲಿದ್ದರು. ಈಗ ಅವರು ಮತ್ತೆ ಸಿಂಗಲ್ ಆಗಿದ್ದಾರೆ.

ಅವಕಾಶ ಕೊರತೆ ಎದುರಿಸುತ್ತಿರುವ ಅರ್ಜುನ್ ಕಪೂರ್ ಇತ್ತೀಚೆಗೆ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್ ದೇವಗನ್ ನಾಯಕನಾಗಿ ನಟಿಸಿ ಹಲವು ದೊಡ್ಡ ಸ್ಟಾರ್ ನಟರು ಅತಿಥಿ ಪಾತ್ರಗಳಲ್ಲಿ ನಟಿಸಿರುವ ‘ಸಿಂಗಂ ಅಗೇನ್’ ಸಿನಿಮಾದಲ್ಲಿ ಅರ್ಜುನ್ ಕಪೂರ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆ ಬಳಿಕ ಯೂಟ್ಯೂಬ್ ಪಾಡ್​ಕಾಸ್ಟ್ ಒಂದರಲ್ಲಿ ಮಾತನಾಡಿರುವ ಅರ್ಜುನ್ ಕಪೂರ್, ತಾವು ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ತಾವು ಖಿನ್ನತೆಗೆ ಗುರಿಯಾಗಿದ್ದಾಗಿಯೂ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಫಿಲ್ಮ್ ಸಿಟಿಯಲ್ಲಿ ಬಳುಕುತ್ತಾ ನಡೆದ ಬಾಲಿವುಡ್ ಸುಂದರಿ ಮಲೈಕಾ ಅರೋರಾ

ಅರ್ಜುನ್ ಕಪೂರ್, ತಾವು ಹಷಿಮೋಟೋ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಸಮಸ್ಯೆ ಇರುವ ವ್ಯಕ್ತಿಯ ರೋಗನಿರೋಧಕ ಕಣಗಳು, ದೇಹದ ಕೆಲ ಭಾಗಗಳನ್ನು ಹಾನಿ ಮಾಡುತ್ತವೆ. ಅರ್ಜುನ್ ಕಪೂರ್​ಗೆ ಇರುವ ಸಮಸ್ಯೆಯಿಂದ ಅವರೊಳಿಗೆ ರೋಗನಿರೋಧಕ ಶಕ್ತಿ, ಅವರ ಥೈರಾಯ್ಡ್ ಗೆ ಹಾನಿ ಮಾಡುತ್ತಿತ್ತಂತೆ. ಇದು ಮಾತ್ರವೇ ಅಲ್ಲದೆ ಅವರು ಸಮಂತಾ ಬಳಲುತ್ತಿದ್ದ ಆಟೋಇಮ್ಯೂನ್ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಈ ಎರಡೂ ಕಾಯಿಲೆಗಳಿಗೆ ಚಿಕಿತ್ಸೆ ಸಹ ಪಡೆಯುತ್ತಿದ್ದಾರೆ.

ಇದು ಮಾತ್ರವೇ ಅಲ್ಲದೆ ಕಳೆದ ವರ್ಷ ಖಿನ್ನತೆಗೆ ಸಹ ಗುರಿಯಾಗಿದ್ದರಂತೆ ಅರ್ಜುನ್ ಕಪೂರ್, ನನಗೆ ಅವಕಾಶಗಳು ಸಿಗುತ್ತಿರಲಿಲ್ಲ, ನನ್ನ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಕೆಟ್ಟದಾಗಿ ಪ್ರದರ್ಶನ ಕಾಣುತ್ತಿದ್ದವು. ಬೇರೆಯವರ ಸಿನಿಮಾ ನೋಡಿ ನನಗೆ ಹೀಗೆ ಮಾಡಲು ಸಾಧ್ಯವೇ ಇಲ್ಲ ಅನಿಸಲು ಪ್ರಾರಂಭವಾಯ್ತು. ನನಗೆ ಸಿನಿಮಾಗಳೆಂದರೆ ಪಂಚ ಪ್ರಾಣ, ಆದರೆ ಸಿನಿಮಾ ನೋಡುವುದನ್ನೇ ನಾನು ಬಿಟ್ಟುಬಿಟ್ಟಿದ್ದೆ. ಹಲವು ಥೆರಪಿಸ್ಟ್​ಗಳನ್ನು ಭೇಟಿ ಮಾಡಿದೆ ಆದರೆ ಅವರಿಂದ ಉಪಯೋಗ ಆಗಲಿಲ್ಲ, ಕೊನೆಗೆ ಒಬ್ಬ ವೈದ್ಯರು ಸಿಕ್ಕರು, ಅವರಿಂದ ನನ್ನ ಖಿನ್ನತೆ ಸರಿಹೋಯ್ತು ಎಂದಿದ್ದಾರೆ ಅರ್ಜುನ್ ಕಪೂರ್.

ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಕಳೆದ ಎಂಟು ವರ್ಷದಿಂದಲೂ ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದರು. ಇವರ ಸಂಬಂಧದ ಬಗ್ಗೆ ಹಲವರು ಟೀಕೆ, ವಿಮರ್ಶೆ, ತಮಾಷೆ ಮಾಡಿದ್ದರು. ಆದರೂ ಎಂಟು ವರ್ಷ ಜೊತೆಗಿದ್ದ ಈ ಜೋಡಿ ಇತ್ತೀಚೆಗಷ್ಟೆ ಪರಸ್ಪರರಿಂದ ದೂರಾಗಿದೆ. ಇಬ್ಬರೂ ಈಗ ಸಿಂಗಲ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ