AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋಷಕರಾಗುತ್ತಿದ್ದಾರೆ ಆಥಿಯಾ ಶೆಟ್ಟಿ-ಕೆಎಲ್ ರಾಹುಲ್

2023 ರಲ್ಲಿ ವಿವಾಹವಾದ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ನಟಿ ಆಥಿಯಾ ಶೆಟ್ಟಿ ಮೊದಲ ಮಗುವಿನ ಸ್ವಾಗತಕ್ಕೆ ಸಿದ್ಧವಾಗಿದ್ದಾರೆ. ಆಥಿಯಾ ಶೆಟ್ಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, 2025ರಲ್ಲಿ ಪುಟ್ಟ ಅತಿಥಿಯ ಆಗಮನ ಆಗಲಿದೆ.

ಪೋಷಕರಾಗುತ್ತಿದ್ದಾರೆ ಆಥಿಯಾ ಶೆಟ್ಟಿ-ಕೆಎಲ್ ರಾಹುಲ್
ಮಂಜುನಾಥ ಸಿ.
|

Updated on: Nov 08, 2024 | 6:19 PM

Share

ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಶೀಘ್ರವೇ ಕುಟುಂಬಕ್ಕೆ ಹೊಸ ಅತಿಥಿಯನ್ನು ಸ್ವಾಗತಿಸಲಿದ್ದಾರೆ. ಕಳೆದ ವರ್ಷ ಜನವರಿ ತಿಂಗಳಲ್ಲಿ ಮುಂಬೈನಲ್ಲಿ ಅದ್ಧೂರಿಯಾಗಿ ವಿವಾಹವಾದ ಈ ಜೋಡಿ ಇದೀಗ ಕುಟುಂಬಕ್ಕೆ ಪುಟ್ಟ ಅತಿಥಿಯನ್ನು ಸ್ವಾಗತಿಸಲಿದ್ದಾರೆ. ಆಥಿಯಾ ಶೆಟ್ಟಿ ಗರ್ಭಿಣಿ ಆಗಿದ್ದು, ತಾವು ಮಗುವನ್ನು ನಿರೀಕ್ಷೆ ಮಾಡುತ್ತಿರುವುದಾಗಿ ಜೋಡಿ ಹೇಳಿದೆ. ‘ದೇವರ ಸುಂದರ ಆಶೀರ್ವಾದ 2025ಕ್ಕೆ ಬರಲಿದೆ’ ಎಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ ಈ ಜೋಡಿ.

ಕನ್ನಡಿಗ, ಕೆಎಲ್ ರಾಹುಲ್, ಬಾಲಿವುಡ್ ಸ್ಟಾರ್ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಅವರನ್ನು ಪ್ರೇಮಿಸಿ ಮದುವೆ ಆಗಿದ್ದರು. ಜನವರಿ 23 ರಂದು ಇವರಿಬ್ಬರ ಮದುವೆ ಮುಂಬೈನ ಸುನಿಲ್ ಶೆಟ್ಟಿಯವರು ಫಾರಂ ಹೌಸ್​ನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಆ ನಂತರ ಅದ್ಧೂರಿ ರಿಸೆಪ್ಷನ್ ಅನ್ನು ಸಹ ಆಯೋಜಿಸಲಾಗಿತ್ತು. ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ಸಚಿನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಇನ್ನೂ ಹಲವು ಸ್ಟಾರ್ ಕ್ರಿಕೆಟಿಗರು ಹಾಗೂ ಸಿನಿಮಾ ತಾರೆಯರು ಇವರ ಮದುವೆಯಲ್ಲಿ ಭಾಗಿ ಆಗಿದ್ದರು.

ಇದನ್ನೂ ಓದಿ:ಆಥಿಯಾ ಶೆಟ್ಟಿ ಪ್ರೆಗ್ನೆಂಟ್? ಸೂಚನೆ ಕೊಟ್ಟ ಸುನೀಲ್ ಶೆಟ್ಟಿ

ಆಥಿಯಾ ಶೆಟ್ಟಿ ಮದುವೆಗೆ ಮುಂಚೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಅವರಿಗೆ ಹೆಚ್ಚೇನು ಅವಕಾಶಗಳು ಸಿಗುತ್ತಿರಲಿಲ್ಲ. 2019 ರಲ್ಲಿ ಅವರು ನಟಿಸಿದ ಕೊನೆಯ ಸಿನಿಮಾ ಬಿಡುಗಡೆ ಆಗಿತ್ತು. ಮದುವೆ ಆದ ಬಳಿಕವಂತೂ ಸಿನಿಮಾಗಳಿಂದಲೂ ಸಂಪೂರ್ಣ ದೂರವೇ ಉಳಿದಿದ್ದಾರೆ. ಇನ್ನು ಕೆಎಲ್ ರಾಹುಲ್ ಸಹ ತಮ್ಮ ಫಾರ್ಮ್ ಕಂಡುಕೊಳ್ಳಲು ಒದ್ದಾಡುತ್ತಿದ್ದಾರೆ. ಪ್ರಸ್ತುತ ವೃತ್ತಿ ಜೀವನದ ಲೋ ಫೇಸ್​ನಲ್ಲಿ ನಡೆಯುತ್ತಿರುವ ಕೆಎಲ್ ರಾಹುಲ್, ಐಪಿಎಲ್​ನ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ಈ ಜೋಡಿ ಹೊಸ ಅತಿಥಿಯನ್ನು ಮನೆಗೆ ಸ್ವಾಗತಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ