ಆಥಿಯಾ ಶೆಟ್ಟಿ ಪ್ರೆಗ್ನೆಂಟ್? ಸೂಚನೆ ಕೊಟ್ಟ ಸುನೀಲ್ ಶೆಟ್ಟಿ

ಸುನೀಲ್ ಶೆಟ್ಟಿ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ಗಮನ ಸಂಪೂರ್ಣವಾಗಿ ಹೋಟೆಲ್ ಉದ್ಯಮದ ಮೇಲಿದೆ. ಅವರು ಈಗ ಹೊಸ ಸುದ್ದಿ ಒಂದು ನೀಡಿದ್ದಾರೆ.

ಆಥಿಯಾ ಶೆಟ್ಟಿ ಪ್ರೆಗ್ನೆಂಟ್? ಸೂಚನೆ ಕೊಟ್ಟ ಸುನೀಲ್ ಶೆಟ್ಟಿ
ಸುನೀಲ್-ರಾಹುಲ್-ಆಥಿಯಾ
Follow us
ರಾಜೇಶ್ ದುಗ್ಗುಮನೆ
|

Updated on: Apr 01, 2024 | 11:10 AM

ನಟಿ ಆಥಿಯಾ ಶೆಟ್ಟಿ (Athiya Shetty) ಹಾಗೂ ಕ್ರಿಕೆಟರ್ ಕೆಎಲ್ ರಾಹುಲ್ ಅವರು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಕಳೆದ ವರ್ಷ ಇವರಿಬ್ಬರೂ ಅದ್ದೂರಿಯಾಗಿ ಮದುವೆ ಆದರು. ಈಗ ಆಥಿಯಾ ತಂದೆ ಸುನೀಲ್ ಶೆಟ್ಟಿ ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ. ಅವರು ಶೀಘ್ರವೇ ಅವರು ತಾತ ಆಗುವ ಸೂಚನೆ ಕೊಟ್ಟಿದ್ದಾರೆ. ಇದರಿಂದ ಆಥಿಯಾ ಹಾಗೂ ರಾಹುಲ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅವರ ಕಡೆಯಿಂದ ಅಧಿಕೃತ ಘೋಷಣೆ ಆಗಲಿ ಎಂದು ಕಾಯುತ್ತಿದ್ದಾರೆ.

ಸುನೀಲ್ ಶೆಟ್ಟಿ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ಗಮನ ಸಂಪೂರ್ಣವಾಗಿ ಹೋಟೆಲ್ ಉದ್ಯಮದ ಮೇಲಿದೆ. ‘ಡ್ಯಾನ್ಸ್ ದೀವಾನೆ’ ರಿಯಾಲಿಟಿ ಶೋಗೆ ಅವರು ಜಡ್ಜ್​ ಆಗಿದ್ದಾರೆ. ಇತ್ತೀಚೆಗೆ ನಡೆದ ಈ ರಿಯಾಲಿಟಿ ಶೋನ ಎಪಿಸೋಡ್​ಗೆ ‘ಗ್ರ್ಯಾಂಡ್ ಮಸ್ತಿ ವಿತ್ ಗ್ರ್ಯಾಂಡ್ ಪೇರೆಂಟ್ಸ್’ ಎಂದು ಟೈಟಲ್ ಇಡಲಾಗಿತ್ತು ಈ ವೇಳೆ ಭಾರತಿ ಸಿಂಗ್ ‘ತಾತ ಆದರೆ ಹೇಗೆ ನಡೆದುಕೊಳ್ಳುತ್ತೀರಿ? ನೀವು ಯಾವಾಗಲೂ ಕೂಲ್ ಆಗಿ ಇರುತ್ತೀರಲ್ಲ’ ಎಂದು ಕೇಳಿದರು.

ಇದಕ್ಕ ಸುನೀಲ್ ಶೆಟ್ಟಿ ಉತ್ತರ ನೀಡಿದ್ದಾರೆ. ‘ಈ ರಿಯಾಲಿಟಿ ಶೋನ ಮುಂದಿನ ಸೀಸನ್​ಗೆ ಬರುವಾಗ ನಾನು ತಾತನ ರೀತಿ ನಡೆದುಕೊಂಡು ಬರುತ್ತೇನೆ’ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ. ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇದಕ್ಕೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ.

ಇದನ್ನೂ ಓದಿ: ಸುನೀಲ್ ಶೆಟ್ಟಿ ಒಟ್ಟೂ ಆಸ್ತಿ ಎಷ್ಟು? ಈ ನಟನ ಸಂಪಾದನೆಗೆ ಇದೆ ಹಲವು ಮಾರ್ಗ

ಕೆಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿ ಮಧ್ಯೆ ಆರಂಭದಲ್ಲಿ ಫ್ರೆಂಡ್​ಶಿಪ್ ಇತ್ತು. ನಂತರ ಇಬ್ಬರೂ ಡೇಟಿಂಗ್ ಆರಂಭಿಸಿದರು. 2021ರವರೆಗೆ ಇಬ್ಬರೂ ಈ ವಿಚಾರ ರಿವೀಲ್ ಮಾಡಿದರು. ರಾಹುಲ್ ಅವರು ಆಥಿಯಾಗೆ ಬರ್ತ್​ಡೇ ವಿಶ್ ತಿಳಿಸಿ ಪೋಸ್ಟ್​ಗಳನ್ನು ಹಾಕಿದ್ದರು. 2023ರಲ್ಲಿ ಭಾರತೀಯ ಸಂಪ್ರದಾಯದ ಪ್ರಕಾರ ಇವರು ಮದುವೆ ಆದರು. ಸುನೀಲ್ ಶೆಟ್ಟಿ ಅವರ ಖಾಂದಾಲಾ ಎಸ್ಟೇಟ್​ನಲ್ಲಿ ಈ ಮದುವೆ ನಡೆದಿತ್ತು. ರಾಹುಲ್ ಅವರು ಸದ್ಯ ಐಪಿಎಲ್​ನಲ್ಲಿ ಬ್ಯುಸಿ ಇದ್ದಾರೆ. ಎಲ್​ಎಸ್​ಜಿ ತಂಡವನ್ನು ಅವರು ಮುನ್ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ