AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣದ ಈ ಸ್ಟಾರ್​ಗಳ ಬಳಿ ಇದೆ ಪ್ರೈವೆಟ್ ಜೆಟ್; ಇವರ ಆಸ್ತಿ ಸಣ್ಣದಲ್ಲ

ದೇಶದ ವಿವಿಧ ಕಡೆಗಳಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ ಆಗಲು ಈ ಸೆಲೆಬ್ರಿಟಿಗಳು ಪ್ರೈವೆಟ್ ಜೆಟ್ ಬಳಕೆ ಮಾಡಿದ್ದು ಇದೆ. ರಾಮ್ ಚರಣ್ ಅವರು ಮುಕೇಶ್ ಅಂಬಾನಿ ಮನೆಯ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ರಾಮ್ ಚರಣ್ ಖಾಸಗಿ ಜೆಟ್​ನಲ್ಲಿ ತೆರಳಿದ್ದರು.

ದಕ್ಷಿಣದ ಈ ಸ್ಟಾರ್​ಗಳ ಬಳಿ ಇದೆ ಪ್ರೈವೆಟ್ ಜೆಟ್; ಇವರ ಆಸ್ತಿ ಸಣ್ಣದಲ್ಲ
ಪ್ರೈವೆಟ್ ಜೆಟ್ ಹೊಂದಿರೋ ಸೆಲೆಬ್ರಿಟಿಗಳು
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 01, 2024 | 9:21 AM

Share

ದಕ್ಷಿಣ ಭಾರತದಲ್ಲಿ ಸ್ಟಾರ್ ಹೀರೋಗಳ ಸಂಖ್ಯೆ ದೊಡ್ಡದಿದೆ. ಇಲ್ಲಿನ ಸಿನಿಮಾಗಳ ಬಿಸ್ನೆಸ್ ಕೂಡ ಸಣ್ಣದೇನಲ್ಲ. ‘ಕೆಜಿಎಫ್ 2’ (KGF Chapter 2), ‘ಆರ್​ಆರ್​ಆರ್​’ ಸೇರಿ ಅನೇಕ ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿವೆ. ಈ ಬಿಸ್ನೆಸ್​ಗೆ ತಕ್ಕಂತೆ ಸೆಲೆಬ್ರಿಟಿಗಳು ಸಂಭಾವನೆ ಪಡೆಯುತ್ತಾರೆ. ದಕ್ಷಿಣದಲ್ಲಿ ಹಲವು ಸೆಲೆಬ್ರಿಟಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಈ ಸಾಲಿನಲ್ಲಿ ಅಲ್ಲು ಅರ್ಜುನ್, ಯಶ್, ಪ್ರಭಾಸ್ ಸೇರಿ ಅನೇಕರು ಇದ್ದಾರೆ. ಅದೇ ರೀತಿ ಹಲವು ಸೆಲೆಬ್ರಿಟಿಗಳು ಪ್ರೈವೆಟ್ ಜೆಟ್ ಹೊಂದಿದ್ದಾರೆ ಆ ಬಗ್ಗೆ ಇಲ್ಲಿದೆ ವಿವರ.

ತೆಲುಗಿನಲ್ಲಿ ಹೆಚ್ಚು ಸಂಭಾವನೆ ಪಡೆಯೋ ಅಲ್ಲು ಅರ್ಜುನ್, ಪ್ರಭಾಸ್, ರಾಮ್ ಚರಣ್, ಮಹೇಶ್ ಬಾಬು, ಅಕ್ಕಿನೇನಿ ನಾಗಾರ್ಜುನ, ಚಿರಂಜೀವಿ ಬಳಿ ಪ್ರೈವೆಟ್ ಜೆಟ್ ಇದೆ. ಆಗಾಗ ಈ ಜೆಟ್​ನಲ್ಲಿ ಇವರು ಸುತ್ತಾಟ ನಡೆಸುತ್ತಾರೆ. ಇವರ ಜೊತೆ ತೆರಳೋ ಸೆಲೆಬ್ರಿಟಿಗಳು ಕೆಲವೊಮ್ಮೆ ಈ ಫೋಟೋ ಹಂಚಿಕೊಂಡಿದ್ದಿದೆ. ಈ ಮೊದಲು ‘ಪುಷ್ಪ’ ಸಿನಿಮಾದ ಪ್ರಚಾರದ ವೇಳೆ ನಟಿ ರಶ್ಮಿಕಾ ಮಂದಣ್ಣ ಅವರು ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಫೋಟೋ ಹಂಚಿಕೊಂಡಿದ್ದರು. ಇದು ಅಲ್ಲು ಅರ್ಜುನ್ ಅವರ ಜೆಟ್ ಎನ್ನಲಾಗಿದೆ.

ದೇಶದ ವಿವಿಧ ಕಡೆಗಳಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ ಆಗಲು ಈ ಸೆಲೆಬ್ರಿಟಿಗಳು ಪ್ರೈವೆಟ್ ಜೆಟ್ ಬಳಕೆ ಮಾಡಿದ್ದು ಇದೆ. ರಾಮ್ ಚರಣ್ ಅವರು ಮುಕೇಶ್ ಅಂಬಾನಿ ಮನೆಯ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ರಾಮ್ ಚರಣ್ ಖಾಸಗಿ ಜೆಟ್​ನಲ್ಲಿ ತೆರಳಿದ್ದರು. ಈ ಫೋಟೋಗಳನ್ನು ರಾಮ್ ಚರಣ್ ಪತ್ನಿ ಉಪಾಸನಾ ಅವರ ಮೇಕಪ್​ ಆರ್ಟಿಸ್ಟ್ ಹಂಚಿಕೊಂಡಿದ್ದರು.

ಟಾಲಿವುಡ್ ಸಿನಿಮಾಗೆ ದೊಡ್ಡ ಮಾರುಕಟ್ಟೆ ಇದೆ. ಹಲವು ಪ್ಯಾನ್​ ಇಂಡಿಯಾ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ 100-150 ಕೋಟಿ ರೂಪಾಯಿ ಚಾರ್ಜ್ ಮಾಡೋ ಸೆಲೆಬ್ರಿಟಿಗಳು ಟಾಲಿವುಡ್​ನಲ್ಲಿ ಇದ್ದಾರೆ. ಇತ್ತೀಚೆಗೆ ಪ್ರಭಾಸ್ ಅವರು ಲಂಡನ್​ನಲ್ಲಿ ಪ್ರತಿ ತಿಂಗಳು 60 ಲಕ್ಷ ರೂಪಾಯಿ ಬಾಡಿಗೆ ನೀಡಿ  ಒಂದು ಮನೆಯನ್ನು ಬಾಡಿಗೆ ಪಡೆದಿದ್ದಾರೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: ಪ್ರಭಾಸ್ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ನಾಯಕಿ, ಸಿನಿಮಾ ಯಾವುದು? ನಟಿ ಯಾರು?

ಪ್ರಭಾಸ್ ಅವರು ಪ್ರತಿ ಚಿತ್ರಕ್ಕೆ 150 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ರಾಮ್ ಚರಣ್ ಅವರು 50-60 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಮಹೇಶ್ ಬಾಬು ಅವರು ಪ್ರತಿ ಸಿನಿಮಾಗೆ 60-80 ಕೋಟಿ ರೂಪಾಯಿ ಪಡೆಯುತ್ತಾರೆ. ಅವರು ರಾಜಮೌಳಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದು, ಈ ಚಿತ್ರಕ್ಕೆ ಅವರು ಪಡಯೋ ಸಂಭಾವನೆ 100 ಕೋಟಿ ರೂಪಾಯಿ ಮೀರಲಿದೆ ಎನ್ನಲಾಗುತ್ತಿದೆ. ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರಕ್ಕೆ 100 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ